ಬೆಂಗಳೂರು: ಚಂದನ್ ಶೆಟ್ಟಿ (Niveditha Gowda) ಹಾಗೂ ನಿವೇದಿತಾ ಗೌಡ ಅವರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಇದೀಗ ಚಂದನ್ ಹಾಗೂ ನಿವೇದಿತಾ ಪರ ವಕೀಲರಾದ ಅನಿತಾ ಅವರು ನಿವೇದಿತಾ ಅವರು ಜೀವನಾಂಶಕ್ಕೆ ಬೇಡಿಕೆ ಇಟ್ಟಿಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇಬ್ಬರದ್ದೂ ಸಹ ಪರಸ್ಪರ ಒಪ್ಪಿಗೆ ವಿಚ್ಛೇದನ ಆಗಿರುವ ಕಾರಣ, ನಿವೇದಿತಾ, ಜೀವನಾಂಶಕ್ಕೆ ಬೇಡಿಕೆ ಇಟ್ಟಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ವಕೀಲೆ ಅನಿತಾ ಹೇಳಿರುವಂತೆ, ಇಬ್ಬರೂ ಸಹ ದುಡಿಯುತ್ತಿರುವವರು, ಹಾಗಾಗಿ ಇನ್ನೊಬ್ಬರ ಹಣದ ಅವಶ್ಯಕತೆ ಇಬ್ಬರಿಗೂ ಇಲ್ಲ ಎಂದಿದ್ದಾರೆ.
ಸಂಧಾನಕ್ಕೆ ಒಪ್ಪಲಿಲ್ಲ ಚಂದನ್-ನಿವೇದಿತಾ!
ನ್ಯಾಯಾಲಯದ ಪ್ರಕ್ರಿಯೆ ವೇಳೆ ತಾವಿಬ್ಬರೂ ಮುಂದೆ ಜತೆಯಾಗಿ ಬಾಳುವುದಕ್ಕೆ ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು ಚಂದನ್ ಹಾಗೂ ನಿವೇದಿತಾ. ಚಂದನ್ ಹಾಗೂ ನಿವೇದಿತಾ ವಿಚ್ಛೇದನ ಅರ್ಜಿ (ಕೇಸ್ ನಂಬರ್-Mc 3388-/2024) ಕೋರ್ಟ್ ಮುಂದಕ್ಕೆ ಬಂದಿತ್ತು. ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಸ್ ಜ್ಯೋತಿ ಶ್ರೀ ಅವರು ಬೆಂಚ್ ಮುಂದೆ ಈ ಪ್ರಕರಣ ಬಂದಿತ್ತು. ಅರ್ಜಿಯನ್ನು ವಿಚಾರಣೆ ಮಾಡುವ ಮೊದಲು ಕಾನೂನು ಪ್ರಕ್ರಿಯೆಯಂತೆ ಮಿಡಿಯೇಷನ್ ಪ್ರಕ್ರಿಯೆ ಒಳಪಡಬೇಕಾಯಿತು. ಚಂದನ್ ಹಾಗೂ ನಿವೇದಿತಾ ಅವರಿಗೆ ಕೌಟುಂಬಿಕ ಕೋರ್ಟ್‌ನ ಮಿಡಿಯೇಷನ್ ಸೆಂಟರ್ನಲ್ಲಿ ಮಾತುಕತೆ ನಡೆಸಲಾಯಿತು. ವಿಚ್ಛೇದನ ಪ್ರಕ್ರಿಯೆ ಮೊದಲು ಈ ಸಂಧಾನ ನಡೆಯಲೇಬೇಕು. ಅಂತೆಯೇ ಸಂಧಾನಕಾರರು ಮಾತುಕತೆ ನಡೆಸಿದಾಗ ಅವರಿಬ್ಬರು ತಮ್ಮ ನಿರ್ಧಾರದಿಂದ ವಾಪಸ್ ಬರುವುದಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.
ಮೀಡಿಯೇಷನ್ ಸೆಂಟರ್ನಲ್ಲಿ ವಿಚ್ಛೇದನ ನೀಡದಂತೆ ಸಲಹೆ ಕೊಡುತ್ತಾರೆ. ಪರಸ್ಪರ ಒಂದಾಗಿ ಬಾಳಿ ಎಂದು ಸಲಹೆ ನೀಡುತ್ತಾರೆ. ಇಬ್ಬರು ಒಪ್ಪದೇ ಇದ್ದರೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸುತ್ತಾರೆ. ಬಳಿಕ ನ್ಯಾಯಾಧೀಶರು ನಿರ್ಧಾರದ ಬಗ್ಗೆ ಕೇಳುತ್ತಾರೆ. ಬಳಿಕ ವಿಚ್ಛೇಧನಕ್ಕೆ ಒಪ್ಪಿಗೆ ಕೊಡುತ್ತಾರೆ.
ಇದನ್ನೂ ಓದಿ: Niveditha Gowda: ಚಂದನ್-ನಿವೇದಿತಾ ಡಿವೋರ್ಸ್ ಬಗ್ಗೆ ಅಸಲಿ ಸತ್ಯ ಬಯಲು ಮಾಡಿದ ವಕೀಲೆ!
ಆದರೆ ಚಂದನ್ ಹಾಗೂ ನಿವೇದಿತಾ ಕೇಸ್‌ನಲ್ಲಿ ಪರಸ್ಪರ ಒಪ್ಪಿಗೆ ಮೇಲೆ ವಿಚ್ಛೇದನಕ್ಕೆ ಸಲ್ಲಿಸಿದ್ದ ಕಾರಣ ಹಾಗೂ ಕಳೆದ ಆರು ತಿಂಗಳಿನಿಂದಲೂ ಪತಿ-ಪತ್ನಿ ರೀತಿ ಸಹಬಾಳ್ವೆ ನಡೆಸದ ಕಾರಣ ನ್ಯಾಯಾಲಯವು ಇವರಿಗೆ ವಿಚ್ಛೇದನ ನೀಡಿದೆ.
ವಕೀಲೆ ಅನಿತಾ ಹೇಳಿಕೆ ನೀಡಿದ್ದೇನು?
ಈ ಬಗ್ಗೆ ವಕೀಲರಾದ ಅನಿತಾ ಮಾತನಾಡಿ ʻʻಇವರಿಬ್ಬರ ಬಗ್ಗೆ ಮಾಧ್ಯಮದಲ್ಲಿ ತಪ್ಪಾಗಿ ತೋರಿಸಲಾಗುತ್ತಿದೆ. ಮೊದಲು ವಿಚ್ಛೇದನ ಅರ್ಜಿ ಸಲ್ಲಿಸಿದ ಬಳಿಕ ಆರು ತಿಂಗಳ ಸಮಯಾವಕಾಶ ಇರುತ್ತಿತ್ತು. ಈಗ ಹಾಗಿಲ್ಲ. ತಕ್ಷಣಕ್ಕೆ ವಿಚ್ಛೇದನ ಪಡೆಯಬಹುದು. ದೊಡ್ಡವರು ಸಂಧಾನ ಮಾಡಲು ಪ್ರಯತ್ನಿಸಿದರು. ಆದರೆ, ಅದು ಆಗಿಲ್ಲ. ಮಗು ಹೊಂದಲು ನಿವೇದಿತಾ ಒಪ್ಪಿಲ್ಲ, ಇದಕ್ಕೆ ವಿಚ್ಛೇದನ ಪಡೆದರು ಎನ್ನುವುದು ಸುಳ್ಳು. ಇಬ್ಬರ ಆಲೋಚನೆ ಬೇರೆ ಇದೆ. ಒಬ್ಬರಿಗೊಬ್ಬರು ತೆಗೆದುಕೊಂಡ ನಿರ್ಧಾರವನ್ನು ಗೌರವಿಸುತ್ತಾರೆ. ಅವರ ಖಾಸಗಿತನಕ್ಕೆ ನಾವು ಗೌರವ ಕೊಡಬೇಕು. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ನಿನ್ನೆಯೇ ಡಿವೋರ್ಸ್ ಆಗಿದೆ. ಅವರಿಬ್ಬರಲ್ಲಿ ಒಳ್ಳೆಯ ಮಾನವೀಯತೆ ಇದೆ. ತುಂಬ ಮೆಚ್ಯೂರ್ ಆಗಿದ್ದಾರೆʼʼ ಎಂದರು.
ʻಇಬ್ಬರೂ ಡಿಫೆಂಡ್ ಆಗುವ ಪರಿಸ್ಥಿಯಲ್ಲಿಯೂ ಅವರು ಇಲ್ಲ. ಯಾವುದೇ ಜೀವನಾಂಶ ಕೂಡ ಕೇಳಿಲ್ಲ. ಗಂಡ ಹೆಂಡತಿ ಮಧ್ಯೆ ಭಿನ್ನವಾದ ಸಂಬಂಧ ಇರುತ್ತದೆ. ಎಷ್ಟೋ ಜನ ಗಂಡ ಹೆಂಡತಿಯರು ಹೆದರಿಕೊಂಡು ಡಿವೋರ್ಸ್ ಹಂತಕ್ಕೆ ಬರುವುದಿಲ್ಲ. ಇನ್ನೂ ಕೆಲವರು ತುಂಬ ಜಗಳ ಮಾಡುತ್ತಾರೆ. ಆದರೆ ತುಂಬ ಒಬ್ಬರಿಗೊಬ್ಬರು ಪ್ರೀತಿಸುತ್ತಾರೆ. ಆದರೆ ಇವರ ಕೇಸ್‌ನಲ್ಲಿ ಬೇರೆಯಾಗಬೇಕು ಎಂದು ಅವರು ಆಗಲೇ ನಿರ್ಧಾರ ಮಾಡಿದ್ದರು. ಫ್ಯಾಮಿಲಿ ಜತೆ ಕೂಡ ಚರ್ಚಿಸಿದ್ದರು. ಇದೀಗ ಅಧಿಕೃತವಾಗಿ ಡಿವೋರ್ಸ್ ಪಡೆದಿದ್ದಾರೆʼʼ ಎಂದರು.