Site icon Vistara News

Niveditha Gowda: ಚಂದನ್‌-ನಿವೇದಿತಾ ಡಿವೋರ್ಸ್‌ಗೆ ಸೃಜನ್ ಲೋಕೇಶ್ ಕಾರಣ? ಯಾಕೆ ಈ ಗಾಸಿಪ್‌?

Niveditha Gowda reason behind srujan lokesh name

ಬೆಂಗಳೂರು: ಕನ್ನಡದ ರ್‍ಯಾಪರ್‌ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ  ವಿಚ್ಛೇದನ ಕೋರಿ ಬೆಂಗಳೂರು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಅವರಿಬ್ಬರೂ ಒಂದೇ ಕಾರಿನಲ್ಲಿ ಒಟ್ಟಿಗೆ ಬಂದು ಅರ್ಜಿ ಸಲ್ಲಿಸಿ ಕೈಕೈ ಹಿಡಿದುಕೊಂಡು ವಾಪಸ್‌ ಹೊರಟಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಜನಪ್ರಿಯರಾಗಿದ್ದ ಈ ಜೋಡಿಯು ಬೇರ್ಪಡುವುದು ಅವರ ಫಾಲೋವರ್ಸ್​ಗಳಿಗೆ ಅಚ್ಚರಿಯ ವಿಷಯ. ಇನ್ನು ಚಂದನ್- ನಿವೇದಿತಾ ಡಿವೋರ್ಸ್ ವಿಚಾರದಲ್ಲಿ ಕೆಲವರು ನಟ ಸೃಜನ್ ಲೋಕೇಶ್ ಹೆಸರು ಎಳೆದುತಂದು ಟ್ರೋಲ್ ಮಾಡುತ್ತಿದ್ದಾರೆ.

ನಿವೇದಿತಾ ಹುಟ್ಟುಹಬ್ಬದ ದಿನ ಸೃಜನ್ ಲೋಕೇಶ್ ಒಂದು ವಿಡಿಯೊ ಶೇರ್ ಮಾಡಿ ಶುಭ ಕೋರಿದ್ದರು. ಅದರಲ್ಲಿ ನಿವೇದಿತಾ ಜತೆಗಿನ ಒಂದಷ್ಟು ಫೋಟೊಗಳನ್ನು ಹಾಕಿದ್ದರು. ಇದಕ್ಕೆ ಮನಬಂದಂತೆ ಕಮೆಂಟ್‌ ಮಾಡಿದ್ದಾರೆ ನೆಟ್ಟಿಗರು. ಕೆಲವರು ಕಮೆಂಟ್‌ನಲ್ಲಿ ಇವರ ಡಿವೋರ್ಸ್‌ಗೆ ಸೃಜನ್‌ ಲೋಕೇಶ್‌ ಕಾರಣ ಎನ್ನುತ್ತಿದ್ದಾರೆ. ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ನಿವೇದಿತಾ ಕಾಣಿಸಿಕೊಂಡಿದ್ದರು. ಇನ್ನು ಬಳಿಕ ಬಂದ ‘ರಾಜಾ ರಾಣಿ’ ಚಂದನ್- ನಿವೇದಿತಾ ಭಾಗಿ ಆಗಿದ್ದರು. ಎರಡರಲ್ಲಿಯೂ ಸೃಜನ್‌ ಲೋಕೇಶ್‌ ತೀರ್ಪುಗಾರರಾಗಿದ್ದರು. ಹಾಗಾಗಿ ಸೃಜನ್ ಹಾಗೂ ನಿವೇದಿತಾ ನಡುವೆ ಒಳ್ಳೆ ಬಾಂಧವ್ಯ ಬೆಳೆದಿತ್ತು. ಇವರದು ಪ್ರೇಮಕ್ಕೆ ಹೊರತಾದ ಬಾಂಧವ್ಯ ಇರಬಹುದು ಎಂದೂ ಕೆಲವು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

ನಿವೇದಿತಾ ಹುಟ್ಟು ಹಬ್ಬಕ್ಕೆ ಚಂದನ್‌ ಕೂಡ ವಿಶ್‌ ಮಾಡಿದ್ದರು. ಸೃಜನ್‌ ಕೂಡ ನಿವೇದಿತಾಗೆ ವಿಶ್‌ ಮಾಡಿ ವಿಡಿಯೊ ಹಂಚಿಕೊಂಡಿದ್ದರು. ಸೃಜನ್ ಲೋಕೇಶ್ ಹಂಚಿಕೊಂಡಿದ್ದ ವೀಡಿಯೋದ ಹಿನ್ನೆಲೆಯಲ್ಲಿ ಬರುವ ಹಾಡಿನ ಬಗ್ಗೆಯೂ ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕೆಟ್ಟದ್ದಾಗಿ ಕಮೆಂಟ್‌ ಮಾಡುವರನ್ನು ತರಾಟೆಗೂ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: Kotee Movie Kannada: ಕಿಚ್ಚ ಸುದೀಪ್​ಗೆ ‘ಕೋಟಿ’ ಸಿನಿಮಾದ ಮೊದಲ ಟಿಕೆಟ್​!

ಡಿವೋರ್ಸ್​ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡ ನಿವೇದಿತಾ-ಚಂದನ್‌

ʻʻಈ ದಿನ., ಚಂದನ್ ಶೆಟ್ಟಿ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನ ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೂಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನು ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲಿ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ ಪರಸ್ಪರ ಒಬ್ಬರನ್ನು ಒಬ್ಬರು ಗೌರವಿಸುತ್ತೇವೆ. ಸೂಕ್ಷ್ಮ ಪರಿಗಣೆಗಾಗಿ ಎಲ್ಲರಿಗೂ ಧನ್ಯವಾದಗಳು ಎಂದು ನಿವೇದಿತಾ ಗೌಡ ಬರೆದುಕೊಂಡಿದ್ದಾರೆ.

ವಿದೇಶಕ್ಕೆ ಹೋಗುವ ಸಾಧ್ಯತೆ

ಫ್ಯಾಮಿಲಿ ಕೋರ್ಟ್‌ನಲ್ಲಿ ಜೂನ್ 6ರಂದು ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದರು. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಮಿಡಿಯೆಟರ್ ಸಂಧಾನಕ್ಕೆ ಕೊನೆಗೂ ದಂಪತಿ ಒಪ್ಪಿಲ್ಲ. ಡಿವೋರ್ಸ್‌ ಪಡೆದುಕೊಂಡರೂ ಜೀವನಾಂಶ ಬೇಡ ಎಂದಿದ್ದಾರೆ ನಿವೇದಿತಾ. ಡಿವೋರ್ಸ್ ಸಿಕ್ಕ ನಂತರ ನಿವೇದಿತಾ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್‌ ಶೆಟ್ಟಿ ಅವರು ನಿವೇದಿತಾ ಗೌಡ ಪ್ರಪೋಸ್‌ ಮಾಡಿದ್ದೂ ವಿವಾದಕ್ಕೆ ಕಾರಣವಾಗಿತ್ತು. ಸಾಕಷ್ಟು ಮಂದಿ ಇದಕ್ಕೆ ಟೀಕೆ ವ್ಯಕ್ತಪಡಿಸಿದ್ದರು. ಬಿಗ್‌ ಬಾಸ್‌ ಐದನೇ ಸೀಸನ್‌ನಲ್ಲಿ ಚಂದನ್‌ ಗೌಡ ಹಾಗೂ ನಿವೇದಿತಾ ಗೌಡ ಮೊದಲ ಬಾರಿಗೆ ಭೇಟಿಯಾಗಿದ್ದರು. ಮೊದಲಿಗೆ ಬಿಗ್‌ಬಾಸ್‌ನಲ್ಲಿ ನಿವೇದಿತಾಳನ್ನು ತನ್ನ ತಂಗಿ ಎಂದೇ ಹೇಳುತ್ತಿದ್ದ ಚಂದನ್‌ ಗೌಡ ಬಳಿಕ ಮದುವೆಯಾಗಿದ್ದರು.

Exit mobile version