ಬೆಂಗಳೂರು: ನಟ ದರ್ಶನ್ ಅವರಿಗೆ (Actor Darshan) ಮತ್ತೊಂದು ಸಂಕಷ್ಟ ಎದುರಾಗಿದೆ. ಶ್ರೀರಂಗಪಟ್ಟಣದಲ್ಲಿ ನಡೆದ ʻಬೆಳ್ಳಿ ಪರ್ವʼದಲ್ಲಿ ದರ್ಶನ್ ಅವರು ವೈಯಕ್ತಿಕ ಹಾಗೂ ವೃತ್ತಿಪರ ವಿಚಾರಗಳನ್ನು ಹಂಚಿಕೊಂಡು, `ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ’ ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿʼʼ ಎಂದು ಹೇಳಿಕೆ ನೀಡಿದ್ದರು. ಹೆಣ್ಣಿನ ಬಗ್ಗೆ ಕೇವಲವಾಗಿ ಮಾತನಾಡಿದ್ದ ನಟ ದರ್ಶನ್ ಬಗ್ಗೆ ಹಲವು ಕೇಸ್‌ಗಳು ದಾಖಲಾಗಿದ್ದವು. ಇದೀಗ ಕರ್ನಾಟಕ ರಾಜ್ಯ ಮಹಿಳಾ ಆಯೋಗದಿಂದ ನಟ ದರ್ಶನ್ ಅವರಿಗೆ ನೋಟಿಸ್ ನೀಡಿದೆ. ನೋಟಿಸ್ ತಲುಪಿದ 10 ದಿನದಲ್ಲಿ ನಟ ಬಂದು ವಿವರಣೆ ನೀಡಲು ಸೂಚನೆ ನೀಡಿದೆ.
ದರ್ಶನ್ ಅವರು ಹೆಣ್ಣು ಮಕ್ಕಳ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವುದಾಗಿ, ಗೌಡತಿಯರ ಸೇನೆ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಕೋರಿತ್ತು. ಇದೀಗ ಕರ್ನಾಟಕ ರಾಜ್ಯ ಮಹಿಳಾ ಆಯೋಗದಿಂದ ನಟ ದರ್ಶನ್ ಅವರಿಗೆ ನೋಟಿಸ್ ನೀಡಿದೆ. ದರ್ಶನ್ ಅವರಿಗೆ ಪತ್ರ ತಲುಪಿದ ಒಂದು ವಾರದೊಳಗಾಗಿ ಆಯೋಗಕ್ಕೆ ವಿವರಣೆ ನೀಡಲು ಸೂಚನೆ ನೀಡಿದೆ.
ನಟ ದರ್ಶನ್ ವಿರುದ್ಧ ಇರುವ ಆರೋಪಗಳೇನು?
ಶ್ರೀರಂಗಪಟ್ಟಣದಲ್ಲಿ ಇತ್ತೀಚೆಗೆ ನಡೆದ ʼಬೆಳ್ಳಿ ಪರ್ವ D-25ʼ ಕಾರ್ಯಕ್ರಮದಲ್ಲಿ ವೈಯಕ್ತಿಕ ಹಾಗೂ ವೃತ್ತಿಪರ ವಿಚಾರಗಳನ್ನು ಹಂಚಿಕೊಂಡಿದ್ದ ನಟ ದರ್ಶನ್ ಅವರು, ಫ್ಯಾಮಿಲಿ ಸಮಸ್ಯೆಗಳು, ಎಲ್ಲ ಸಮಸ್ಯೆಗಳನ್ನು ಪಕ್ಕಕ್ಕೆ ಇಡುತ್ತೇನೆ. `ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ’. ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೆ ಮುಖ್ಯ ಎಂದಿದ್ದರು ಎಂದು ಹೇಳಿದ್ದರು. ದರ್ಶನ್ ಮಾತಿನ ಭರದಲ್ಲಿ ಹೇಳಿದ ಹೇಳಿಕೆಗೆ ಭಾರಿ ಆಕ್ಷೇಪ ವ್ಯಕ್ತವಾಗಿತ್ತು.
ಇದನ್ನೂ ಓದಿ: Actor Darshan: ಎದೆಯ ಮೇಲೆ ದರ್ಶನ್ ಟ್ಯಾಟೂ ಹಾಕಿಸಿಕೊಂಡ ಮಹಿಳಾ ಅಭಿಮಾನಿ!
ಈ ಹಿಂದೆಯೂ ಹೆಂಡತಿಗೆ ಕಿರುಕುಳ ಆರೋಪದಲ್ಲಿ ನಟನ ವಿರುದ್ಧ ಪ್ರಕರಣ ದಾಖಲಾಗಿತ್ತು. ಮತ್ತೊಂದು ಸಂದರ್ಭದಲ್ಲಿ ಅದೃಷ್ಟ ದೇವತೆ ನಿಮ್ಮ ಮನೆಗೆ ಬಂದರೆ ಬಟ್ಟೆಬಿಚ್ಚಿ ರೂಮಿನಲ್ಲಿ, ಕೂಡಿಹಾಕಿ ಎಂಬ ಹೇಳಿಕೆ ನೀಡಿದ್ದರು. ಅದೇ ರೀತಿ ಇತ್ತೀಚೆಗೆ ನಿರ್ಮಾಪಕ ಉಮಾಪತಿ ಗೌಡ ಬಗ್ಗೆ ʼತಗಡುʼ ಎಂಬ ಪದ ಬಳಸಿದ್ದರಿಂದ ನಟನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ದರ್ಶನ್ ಅವರ ವಿವಾದಾತ್ಮಕ ಹೇಳಿಕೆಗಳ ಸಂಬಂಧ ವಿವಿಧೆಡೆ ದೂರುಗಳು ದಾಖಲಾಗಿವೆ. ಮಹಿಳೆಯೊಬ್ಬರು ಕೋರ್ಟ್‌ಗೆ ದೂರು ಕೂಡ ಸಲ್ಲಿಸಿದ್ದಾರೆ.