Site icon Vistara News

Anant Nag: ಅನಂತ್ ನಾಗ್‌ಗೆ ಸಿಗದ ಪದ್ಮ ಪ್ರಶಸ್ತಿ; ಬೇಸರ ವ್ಯಕ್ತಪಡಿಸಿದ ನಿರ್ದೇಶಕ

Padma award issue Anant Nag statement by Hemant Rao

ಬೆಂಗಳೂರು: ʻಸ್ಯಾಂಡಲ್‌ವುಡ್‌ ಲೆಜೆಂಡ್‌ʼ ಎಂದು ಕರೆಸಿಕೊಳ್ಳುವ ಅನಂತ್‌ ನಾಗ್‌ (Anant Nag) ಮಾಡದಿರುವ ಪಾತ್ರವಿಲ್ಲ. ಗಂಭೀರ ಪಾತ್ರವೇ ಆಗಲಿ ಅಥವಾ ಕಾಮಿಡಿ ಜಾನರ್‌ ಆಗಿರಲಿ ಅನಂತ್‌ ನಾಗ್‌ ಸಲೀಸಾಗಿ ಮಾಡಿಬಿಡುತ್ತಾರೆ. ಆ್ಯಕ್ಷನ್‌ ಪ್ರಧಾನ ಸಿನಿಮಾಗಳಲ್ಲೂ ಅನಂತ್‌ ನಾಗ್‌ ಮಿಂಚಿದ್ದುಂಟು. ಜನವರಿ 25) ಕೇಂದ್ರ ಸರ್ಕಾರ ಕೊಡಮಾಡುವ ಅತ್ಯುತ್ತಮ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿ (Padma Awards) ವಿಜೇತರನ್ನು ಘೋಷಣೆ ಮಾಡಿದೆ. ಮೆಗಾಸ್ಟಾರ್ ಚಿರಂಜೀವಿ, ಮಿಥುನ್ ಚಕ್ರವರ್ತಿ, ವೈಜಯಂತಿಮಾಲಾ, ಉಷಾ ಉತ್ತುಪ್ ಸೇರಿದಂತೆ ಇನ್ನೂ ಕೆಲವರಿಗೆ ಕಲಾ ವಿಭಾಗದಲ್ಲಿ ಪದ್ಮ ಪ್ರಶಸ್ತಿಗಳು ದೊರಕಿವೆ. ನಟನೆಯ ಮೂಲಕ ಮನರಂಜನೆ ಹಾಗೂ ಸಿನಿಮಾಗಳ ಮೂಲಕ ಖ್ಯಾತಿ ಪಡೆದ ಅನಂತ್ ನಾಗ್ ಅವರನ್ನು ನಿರ್ಲಕ್ಷಿಸಲಾಗಿದೆ ಎಂದು ನಿರ್ದೇಶಕ ಹೇಮಂತ್ ರಾವ್ ಎಕ್ಸ್‌ ಮೂಲಕ ಬೇಸರ ಹೊರಹಾಕಿದ್ದಾರೆ.

ನಿರ್ದೇಶಕ ಹೇಮಂತ್ ರಾವ್ ಎಕ್ಸ್‌ನಲ್ಲಿ ʻʻಈ ಪ್ರಶಸ್ತಿಗೆ ಅನಂತ್ ಸರ್ ಅವರಿಗಿಂತ ಹೆಚ್ಚು ಅರ್ಹ ಅಭ್ಯರ್ಥಿಯ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. 40 ವರ್ಷಗಳಿಂದ ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ!! ಇಷ್ಟು ವರ್ಷಗಳ ಕಾಲ ಅದರ ಗಮನಕ್ಕೆ ಬಾರದೆ ಹೋಗಿರುವುದು ನಾಚಿಕೆಗೇಡಿನ ಸಂಗತಿʼʼ ಎಂದು ಬರೆದುಕೊಂಡಿದ್ದಾರೆ.

ಇನ್ನೊಂದು ಎಕ್ಸ್‌ನಲ್ಲಿ ʻʻಇತರ ರಾಜ್ಯಗಳ ಚಿತ್ರರಂಗದ ಉದ್ಯಮಗಳ ಶ್ರೇಷ್ಠರನ್ನು ನಡೆಸಿಕೊಳ್ಳುವ ರೀತಿಯನ್ನು ನೋಡಿ ಅಸೂಯೆ ಪಡುವುದನ್ನು ತಡೆಯಲು ನನಗೆ ಸಾಧ್ಯವಾಗುತ್ತಿಲ್ಲ. ನಾಲ್ಕು ದಶಕಗಳಿಂದ ಉತ್ಕೃಷ್ಟ ಕಾರ್ಯವನ್ನು ಮಾಡುತ್ತಾ ಬರುತ್ತಿರುವ ವ್ಯಕ್ತಿಯ ಬಗ್ಗೆ ಇಂಥಹಾ ದಿವ್ಯ ನಿರ್ಲಕ್ಷ್ಯ ತಳೆದಿರುವುದು ಅತ್ಯಂತ ಖೇದಕರ, ನಂಬಲಸಾಧ್ಯ!ʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Anant Nag: ಬಿಜೆಪಿ ಮೂಲಕ ರಾಜಕೀಯ ರಿ ಎಂಟ್ರಿ ಮುಂದೂಡಿದ ಅನಂತ್‌ ನಾಗ್‌: ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರು

ಹೇಮಂತ್ ರಾವ್ ಪೋಸ್ಟ್‌

ಕಳೆದ ಕೆಲ ವರ್ಷಗಳಿಂದ ಪ್ರತಿ ಬಾರಿ ಪದ್ಮ ಪ್ರಶಸ್ತಿಗಳು ಘೋಷಣೆಯಾದಾಗಲೂ ಅನಂತ್ ನಾಗ್ ಹೆಸರು ಚರ್ಚೆಗೆ ಬರುತ್ತಲೇ ಇದೆ. ಹಲವು ಸ್ಯಾಂಡ್‌ವುಡ್‌ ನಟರು ಈ ಬಗ್ಗೆ ಧ್ವನಿ ಎತ್ತಿದ್ದರು. ರಾಜ್​ಕುಮಾರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಧಕ್ಕಿದ್ದು ಹೊರತುಪಡಿಸಿದೆ ಬಿಟ್ಟರೆ, ವಿಷ್ಣುವರ್ಧನ್, ಅಂಬರೀಶ್ ಅವರಿಗೆ ಪದ್ಮ ಪ್ರಶಸ್ತಿ ಲಭಿಸಿಲ್ಲ.

ಇದನ್ನೂ ಓದಿ; Rakshit Shetty: ರಕ್ಷಿತ್‌ ಶೆಟ್ಟಿ ಅಭಿನಯ, ಸಿನಿಮಾವನ್ನು ಹಾಡಿ ಹೊಗಳಿದ ಕಿಚ್ಚ ಸುದೀಪ್‌!

ಈವರೆಗೂ ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಅನಂತ್‌ ನಾಗ್‌, ಇದೀಗ 300 ಪ್ಲಸ್ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಸುಮಾರು 50 ವರ್ಷಗಳಿಂದ ಕನ್ನಡ ಸಿನಿಮಾ ರಂಗಕ್ಕೆ ಸೇವೆ ಸಲ್ಲಿಸುತ್ತಿರುವ ಅನಂತ್‌ ನಾಗ್‌ ಅವರಿಗೆ ಜಗತ್ತಿನ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದಾರೆ. ಅದರಲ್ಲೂ ಕೆಜಿಎಫ್‌ ಸಿನಿಮಾದಲ್ಲಿ ಅವರು ಮಾಡಿದ್ದ ನಟನೆಯನ್ನ ಎಂದಿಗೂ ಮರೆಯಲು ಆಗುವುದಿಲ್ಲ. ʼʼನಟ ಅನಂತ್‌ ನಾಗ್‌ 5 ದಶಕಗಳ ಅಂದರೆ ಬರೋಬ್ಬರಿ ಅರ್ಧ ಶತಮಾನಗಳ ಕಾಲ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸೇವೆ ಸಲ್ಲಿಸಿದ್ದಾರೆ.

ಈ ಸೇವೆಯಲ್ಲಿ ಸಾಲುಸಾಲು ಹಿಟ್‌ ಸಿನಿಮಾ ನೀಡಿದ್ದ ಅನಂತ್‌ ನಾಗ್‌ ಯಾವುದೇ ಪಾತ್ರವಾದರೂ ಸೈ ಎನಿಸಿಕೊಳ್ಳುತ್ತಿದ್ದರು. ಗೌರಿ ಗಣೇಶ, ಗಣೇಶನ ಮದುವೆ, ಯಾರಿಗೂ ಹೇಳಬೇಡಿ, ಮನೇಲಿ ಇಲಿ ಬೀದಿಲಿ ಹುಲಿ, ಒಂದು ಸಿನಿಮಾ ಕಥೆ, ಬೆಂಕಿಯ ಬಲೆ, ಅರುಣರಾಗ, ಅನುಪಮಾ, ಮುದುಡಿದ ತಾವರೆ ಅರಳಿತು, ನಾ ನಿನ್ನ ಬಿಡಲಾರೆ ಹೀಗೆ ನಟ ಅನಂತ್‌ ನಾಗ್‌ ಅಭಿನಯಿಸಿರುವ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಹುತೇಕ ಸಿನಿಮಾಗಳು ಸೂಪರ್‌ ಹಿಟ್‌ ಆಗಿದ್ದವು.

Exit mobile version