Site icon Vistara News

Parineeti Chopra: ಮದುವೆಯಾದ 7 ತಿಂಗಳಿಗೆ ಗರ್ಭಿಣಿಯಾದ್ರಾ ಪರಿಣಿತಿ ಚೋಪ್ರಾ?

Parineeti Chopra Pregnant wearing an oversized white shirt paired

ಇತ್ತೀಚೆಗೆ ಮದುವೆಯಾದ ನಟಿ ಪರಿಣಿತಿ ಚೋಪ್ರಾ ಗರ್ಭಿಣಿ (Parineeti Chopra) ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಪರಿಣಿತಿ ಅವರ ವಿಡಿಯೊವೊಂದು ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಅಭಿಮಾನಿಗಳು ಆಕೆ ಗರ್ಭಿಣಿ ಎಂದು ಹೇಳುತ್ತಿದ್ದಾರೆ. ಇತ್ತೀಚೆಗೆ ಪರಿಣಿತಿ ಬಹಳ ಸಡಿಲವಾದ ಬಟ್ಟೆಯನ್ನು ಧರಿಸಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅಷ್ಟೇ ಅಲ್ಲದೇ ಪರಿಣಿತಿ ತೂಕ ಹೆಚ್ಚಾಗಿದ್ದು, ಮದುವೆಯ ನಂತರ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಕೆಲವು ಮೂಲಗಳು ಹೇಳುತ್ತಿವೆ.

ಬಿಳಿ ಶಾರ್ಟ್ಸ್‌ನೊಂದಿಗೆ ಬಿಳಿ ಶರ್ಟ್ ಧರಿಸಿದ್ದರು. ಉಡುಗೆಯೊಂದಿಗೆ ಅವರ ನಿಧಾನ ನಡಿಗೆ ಕೂಡ ಜನರ ಗಮನ ಸೆಳೆದಿದೆ. ವಿಮಾನ ನಿಲ್ದಾಣದಲ್ಲಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ಬಂದ ಪರಿಣಿತಿ ಮೊಗದಲ್ಲಿ ನಗು ಕಾಣಿಸಿಕೊಂಡಿತ್ತು. ಮೊದಲಿಗೆ ನಟಿ ಯಾಮಿ ಗೌತಮ್ ಗರ್ಭಿಣಿ ಎಂಬ ಸುದ್ದಿ ಬಂದಿತ್ತು. ಅದಾದ ನಂತರ ದೀಪಿಕಾ ಪಡುಕೋಣೆ ಗರ್ಭಿಣಿ ಎಂಬ ಸುದ್ದಿಯೂ ಕನ್ಫರ್ಮ್ ಆಗಿ ಅಭಿಮಾನಿಗಳಿಗೆ ಖುಷಿ ನೀಡಿದ್ದರು. ಇದೀಗ ಮತ್ತೊಂದು ಸುದ್ದಿ ಹೊರಬೀಳುತ್ತಿದೆ.

ಇದನ್ನೂ ಓದಿ: Parineeti Chopra: ಮಾಲ್ಡೀವ್ಸ್‌ನಲ್ಲಿ ಪೋಸ್‌ ಕೊಟ್ಟ ಪರಿಣಿತಿ ಚೋಪ್ರಾ; ಹನಿಮೂನ್‌ ಅಲ್ವಂತೆ!

ಸೆಪ್ಟೆಂಬರ್ 24ರಂದು ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಪರಿಣಿತಿ ಮತ್ತು ರಾಘವ್ ಅವರ ವಿವಾಹ ಅದ್ಧೂರಿಯಾಗಿ ನೆರವೇರಿತ್ತು. ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಪರಿಣಿತಿ ಮತ್ತು ರಾಘವ್ ಕುಟುಂಬಸ್ಥರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪರಿಣಿತಿ ಅವರ ಸೋದರಸಂಬಂಧಿ, ನಟ ಪ್ರಿಯಾಂಕಾ ಚೋಪ್ರಾ ಅವರು ಮದುವೆಗೆ ಭಾಗಿಯಾಗಿರಲಿಲ್ಲ. ಉದಯಪುರದಲ್ಲಿ ಪರಿಣಿತಿ ಮತ್ತು ರಾಘವ್ ಸ್ನೇಹಿತರು ಮತ್ತು ಕುಟುಂಬದವರಿಗೆ ಆರತಕ್ಷತೆಯನ್ನೂ ಏರ್ಪಡಿಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸೇರಿದಂತೆ ಅನೇಕ ಗಣ್ಯರು ಸಮರಾಂಭದಲ್ಲಿ ಸಾಕ್ಷಿಯಾಗಿದ್ದರು.

ಪರಿಣಿತಿ ಅವರು ʼಚಮ್ಕೀಲಾʼ ಸಿನಿಮಾಕ್ಕಾಗಿ ಪಂಜಾಬ್‌ನಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಆ ವೇಳೆ ರಾಘವ್‌ ಅವರು ಅಲ್ಲಿಗೆ ತೆರಳಿ ನಟಿಯೊಂದಿಗೆ ಮಾತನಾಡಿದ್ದರು. ಆಗಲೇ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು ಎಂದೂ ಹೇಳಲಾಗಿತ್ತು.

Exit mobile version