Site icon Vistara News

Kannada New Movie: ಸೆಟ್ಟೇರಿತು ಪವನ್ ಒಡೆಯರ್ ನಿರ್ಮಾಣದ ಮತ್ತೊಂದು ಸಿನಿಮಾ

Kannada New Movie Pavan Kumar Wadeyar New Movie

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ (Kannada New Movie) ಯಶ್, ಪುನೀತ್ ರಾಜ್ ಕುಮಾರ್ ಅವರಂತಹ ಸ್ಟಾರ್ ನಟರಿಗೆ ಸಿನಿಮಾ ಮಾಡಿ ಸೈ ಎನಿಸಿಕೊಂಡವರು ಪವನ್ ಒಡೆಯರ್. ನಿರ್ದೇಶನದಲ್ಲಿ ಗೆದ್ದಿರುವ ಪವನ್ ನಿರ್ಮಾಪಕರಾಗಿಯೂ ಮೊದಲ ಹೆಜ್ಜೆಯಲ್ಲಿ ಶಹಬಾಸ್ ಗಿರಿ ಪಡೆದುಕೊಂಡಿದ್ದಾರೆ. ʻಡೊಳ್ಳುʼ ಸಿನಿಮಾ ಮೂಲಕ ನಿರ್ಮಾಣಕ್ಕಿಳಿದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದ ಪವನ್ ಒಡೆಯರ್ ಮತ್ತೊಮ್ಮೆ ಸಾಗರ್ ಪುರಾಣಿಕ್ ಜತೆ ಕೈ ಜೋಡಿಸಿರುವುದು ಗೊತ್ತೇ ಇದೆ.

ಡೊಳ್ಳು ಸಾರಥಿ ಸಾಗರ್ ಪುರಾಣಿಕ್ ಹಾಗೂ ಪವನ್ ಒಡೆಯರ್ ಮತ್ತೊಂದು ಸಂಗಮದ ಸಿನಿಮಾ ಸೆಟ್ಟೇರಿದೆ. ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಇತ್ತೀಚೆಗಷ್ಟೇ ಮುಹೂರ್ತ ನೆರವೇರಿದೆ. ಈ ಚಿತ್ರಕ್ಕೆ ʻವೆಂಕ್ಯಾʼ ಎಂಬ ಟೈಟಲ್ ಇಡಲಾಗಿದೆ. ವೆಂಕ್ಯಾನಿಗೆ ಸಾಗರ್ ಪುರಾಣಿಕ್ ಆಕ್ಷನ್ ಕಟ್ ಹೇಳುವುದರ ಜತೆಗೆ ನಾಯಕನಾಗಿಯೂ ಮೊದಲ ಹೆಜ್ಜೆ ಇಟ್ಟಿದ್ದಾರೆ. ನಿರ್ದೇಶನದ ಜೊತೆಗೆ ಸಾಗರ್ ನಟನೆ ಜವಾಬ್ದಾರಿನ್ನು ಹೊತ್ತುಕೊಂಡಿದ್ದಾರೆ.

ಇದನ್ನೂ ಓದಿ: Kannada New Movie: ’ಭುವನಂ ಗಗನಂ’ ಸಿನಿಮಾಗೆ ಧ್ರುವ ಸರ್ಜಾ ಸಾಥ್‌!

ವೆಂಕ್ಯಾ ಶೂಟಿಂಗ್ ಈಗಾಗಲೇ ಚಾಲುವಾಗಿದೆ. ಇದೊಂದು ವಿಭಿನ್ನ ಪ್ರಯತ್ನದ ಸಿನಿಮಾ. ಉತ್ತರ ಕರ್ನಾಟಕದ ಕಥೆಯಾದ್ರೂ ಅದು ದೇಶ ಎಲ್ಲಾ ಸುತ್ತಲಿದೆ. ಇದೊಂದು ಹೊಸ ಬಗೆಯ ಕಮರ್ಷಿಯಲ್ ಸಿನಿಮಾ ಅಂತಿದೆ ಚಿತ್ರತಂಡ. ಶೀಘ್ರದಲ್ಲೇ ಉಳಿದ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.

ಅಪೇಕ್ಷಾ ಒಡೆಯರ್ ಮತ್ತು ಪವನ್ ಒಡೆಯರ್ ಹಣ ಹಾಕುತ್ತಿರುವ ವೆಂಕ್ಯಾ ಚಿತ್ರಕ್ಕೆ ಸ್ನೇಹಿತರಾದ ಅವಿನಾಶ್ ವಿ ರೈ ಮತ್ತು ಮೋಹನ್ ಲಾಲ್ ಮೆನನ್ ಸಹ ನಿರ್ಮಾಣವಿರಲಿದೆ.

Exit mobile version