Site icon Vistara News

Pavithra Gowda: ಪವಿತ್ರಾ ಗೌಡಳ ಸಮಪಾಲು- ಸಮಬಾಳು ಪಾಲಿಸಿ! ದರ್ಶನ್ ಪತ್ನಿ ಬಳಿ ಇರುವುದೆಲ್ಲ ಇವಳಿಗೂ ಬೇಕಿತ್ತು!

Pavithra Gowda Desire She Bought Everything From Darshan

ಬೆಂಗಳೂರು: ʻಜಗ್ಗುದಾದಾʼ ಸಿನಿಮಾ ಮೂಲಕ ದರ್ಶನ್‌ಗೆ ಪರಿಚಯವಾದವರು ಈ ಪವಿತ್ರಾ. ಹೀಗೆ ಶುರುವಾದ ಸ್ನೇಹ ಆ ನಂತರ ಪ್ರೇಮಕ್ಕೆ ತಿರುಗಲು ಹೆಚ್ಚೇನು ಸಮಯ ಬೇಕಾಗಲಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ 2016ರಲ್ಲಿ ʼಜಗ್ಗುದಾದಾʼ ತೆರೆಗೆ ಬಂದ ಬೆನ್ನಲ್ಲಿಯೇ, 2017ರಲ್ಲಿ ʻತಾರಕ್ʼ ಚಿತ್ರದ ಬಿಡುಗಡೆಯ ಸಮಯದಲ್ಲಿ ಪವಿತ್ರಾ ಗೌಡ ತನ್ನ ಪ್ರಿಯಕರ ದರ್ಶನ್ ಜೊತೆ ಅತ್ಯಾಪ್ತವಾದ ಫೋಟೊವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿಜಯಲಕ್ಷ್ಮಿ ಸ್ಥಾನಕ್ಕೆ ಪವಿತ್ರಾ ಗೌಡ ಸ್ಕೆಚ್ ಹಾಕಿದ್ದು ಒಂದೆರಡಲ್ಲ. ವಿಜಯಲಕ್ಷ್ಮಿ ಹತ್ತಿರ ಎನೆಲ್ಲ ಇದೆಯೋ ಅದು ತನಗೂ ಬೇಕು ಅಂತಿದ್ದರಂತೆ ಪವಿತ್ರಾ ಗೌಡ.

ವಿಜಯಲಕ್ಷ್ಮಿ ಹತ್ತಿರ ಇರುವ ಸೇಮ್ ಡ್ರೇಸ್ , ಒಡವೆ, ಕಾರ್ ಎಲ್ಲವೂ ಬೇಕು ಎಂದು ಡಿಮ್ಯಾಂಡ್ ಕೂಡ ಮಾಡ್ತಾ ಇದ್ರಂತೆ. ದರ್ಶನ್ ಮಡದಿ ವಿಜಯಲಕ್ಷ್ಮಿ ಪೋಟೋ ಹಾಕ್ತಿದ್ದ ಹಾಗೇ ಪವಿತ್ರಾ ಬಳಿಯು ಇರ್ತಿತ್ತು ಅದೇ ರೀತಿಯ ಡ್ರೆಸ್, ಒಡವೆ ಕಾರು! ವಿಜಯಲಕ್ಷ್ಮಿ ರೇಂಜ್ ರೋವರ್ ಕಾರ್ ತೆಗೆದುಕೊಳ್ತಿದ್ದ ಹಾಗೇ ದರ್ಶನ್‌ಗೆ ಒತ್ತಾಯಿಸಿ ರೇಂಜ್ ರೋವರ್ ಕೂಡ ಪವಿತ್ರಾ ತೆಗೆಸಿಕೊಂಡಿದ್ದರಂತೆ. ವಿಜಯಲಕ್ಷ್ಮಿ ತನ್ನ ಗೆಳೆತಿಯರ ಜತೆ ಕಾಟೇರ ಶೋ ಹಾಕಿಸಿಕೊಂಡು ನೋಡಿದ್ದಾರೆ ಎಂದು ತಿಳಿದು , ಕಾಟೇರ ಶೋಗೆ ಪವಿತ್ರಾ ತಮ್ಮ ಗೆಳತಿಯರ ಜತೆ ಸಿನಿಮಾ ನೋಡಿದ್ದರು ಎನ್ನಲಾಗಿದೆ. 13 ವರ್ಷಗಳ ನಂತರ ದುಬೈಗೆ ಹೋಗಿ ವೆಡ್ಡಿಂಗ್ ಆ್ಯನಿವರ್ಸರಿ ಸೆಲೆಬ್ರೆಟ್ ಮಾಡಿದ್ದರು ದರ್ಶನ್‌ ಹಾಗೂ ವಿಜಯಲಕ್ಷ್ಮಿ. ಇದನ್ನೂ ಕೂಡ ಪವಿತ್ರಾ ಸಹಿಸಿರಲಿಲ್ಲವಂತೆ.

ಇದನ್ನೂ ಓದಿ: Pavithra Gowda: ಪೊಲೀಸ್ ಕಸ್ಟಡಿಯಲ್ಲಿದ್ದ ಪವಿತ್ರಾ ಗೌಡ ಅಸ್ವಸ್ಥ; ಆಸ್ಪತ್ರೆಗೆ ಶಿಫ್ಟ್‌

ಪವಿತ್ರಾ ಗೌಡ ಜಿದ್ದು!

ಮೈ ಫ್ರೆಶ್ ಬಾಸ್ಕೆಟ್ ಎಂಬ ಆ್ಯಪ್ ಲಾಂಚ್ ಮಾಡಿದ್ದರು ವಿಜಯಲಕ್ಷ್ಮಿ. ಇದರಲ್ಲಿ ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ಆನ್​ಲೈನ್ ಮೂಲಕ ಮಾರಾಟ ಮಾಡಲು ಆರಂಭಿಸಿದರು. ಇದರಿಂದ ಪವಿತ್ರಾಗೆ ಹೊಟ್ಟೆ ಉರಿ ಆರಂಭ ಆಗಿ ಪವಿತ್ರಾ ಗೌಡ ಅವರು ರೆಡ್ ಕಾರ್ಪೆಟ್ ಹೆಸರಿನ ಬೊಟಿಕ್ ಆರಂಭಿಸಿದರು ಎನ್ನಲಾಗಿದೆ.

ವಿಜಯಲಕ್ಷ್ಮಿ ಅವರು ರೇಂಜ್ ರೋವರ್ ಕಾರು ಖರೀದಿ ಮಾಡಿದರು. ಆ ಬಳಿಕ ತಮಗೂ ಅದೇ ಕಾರು ಬೇಕು ಎಂದು ದರ್ಶನ್ ಬಳಿ ಹಠ ಹಿಡಿದು ಕುಳಿತರು ಪವಿತ್ರಾ ಗೌಡ. ಹೀಗಾಗಿ, ದರ್ಶನ್ ಅವರು ಪವಿತ್ರಾಗೆ ರೇಂಜ್ ರೋವರ್ ಕಾರನ್ನೇ ಕೊಡಿಸಿದರು ಎನ್ನಲಾಗಿದೆ.

ಸಂಜಯ್ ಸಿಂಗ್‌ಗೆ ಡಿವೋರ್ಸ್‌ ಕೊಟ್ಟ ಪವಿತ್ರಾ

ದರ್ಶನ್‌ ಬಲೆಗೆ ಬೀಳುವ ಮುಂಚೆ ಪವಿತ್ರಾ ಅವರು ಸಂಜಯ್ ಸಿಂಗ್ ಎಂಬುವರನ್ನು ಮದುವೆಯಾಗಿದ್ದರು. ಆದರೆ ಈಗ ಸಂಜಯ್‌ ಜತೆ ಪವಿತ್ರಾ ಜತೆಗಿಲ್ಲ. ಡಿವೋರ್ಸ್‌ ಆಗಿದೆ. 12 ವರ್ಷಗಳ ಹಿಂದೆ ಬೆಂಗಳೂರು ತೊರೆದು ಹುಟ್ಟೂರು ಉತ್ತರ ಪ್ರದೇಶದಲ್ಲಿ ಸ್ವಂತ ಶಾಲೆ ನಡೆಸುತ್ತಿದ್ದಾರೆ ಸಂಜಯ್ ಸಿಂಗ್.

Exit mobile version