Site icon Vistara News

Actor Darshan: ಪವಿತ್ರಾ ಗೌಡ ಕೈ ಮೇಲೆ `777′ ಟ್ಯಾಟೂ ಹಾಕಿದ ನೀತು: ದರ್ಶನ್‌ಗೆ ಏನಾದ್ರು ಲಿಂಕ್‌ ಇದ್ಯಾ?

Pavithra Gowda Tattoo As 777 It Is Connected To Darshan Thoogudeepa

ಬೆಂಗಳೂರು: ಮಾಡೆಲ್‌ ಪವಿತ್ರಾ ಗೌಡ (Pavithra Gowda) ಅವರು ಕೆಲವು ದಿನಗಳ ಹಿಂದೆಯಷ್ಟೇ ನಟ ದರ್ಶನ್ (Darshan Thoogudeepa) ಜತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದರು. ಇದಾದ ಮೇಲೆ ಆ ಪೋಸ್ಟ್‌ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಖಡಕ್‌ ಆಗಿಯೇ ಪ್ರತಿಕ್ರಿಯಿಸಿದ್ದರು. ಇದಾದ ಬಳಿಕ ದರ್ಶನ್‌ ಅವರು ಈ ಬಗ್ಗೆ ಪರೋಕ್ಷವಾಗಿ ಮಾತನಾಡಿ, ಅವರ ಬಗ್ಗೆ ಕೇಸ್‌ ಕೂಡ ದಾಖಲಾದವು. ಇದೀಗ ಮತ್ತೆ ಪವಿತ್ರಾ ಗೌಡ ಸುದ್ದಿಯಾಗಿದ್ದಾರೆ. ಈಗ ಅವರು ವಿಶೇಷ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ʻ777ʼ ಎಂದು ಟ್ಯಾಟೂ ಬರೆಸಿಕೊಂಡಿದ್ದಾರೆ. ಸಣ್ಣ ಹಾರ್ಟ್ ಮಾರ್ಕ್ ಕೂಡ ಇದೆ.

ಏನಿದು 777?

ಬಿಗ್‌ ಬಾಸ್‌ ಸೀಸನ್‌ 10ರಲ್ಲಿ ಸ್ಪರ್ಧಿಯಾಗಿದ್ದ ನೀತು ವನಜಾಕ್ಷಿ ಬೆಂಗಳೂರಿನ ಎಚ್​ಎಸ್​ಆರ್ ಲೇಔಟ್​ನಲ್ಲಿ ಅವರು ತಮ್ಮದೇ ಆದ ಟ್ಯಾಟೂ ಸ್ಟುಡಿಯೊ ಹೊಂದಿದ್ದಾರೆ. ಹೊಟೇಲ್‌ ಕೂಡ ನಡೆಸುತ್ತಿದ್ದಾರೆ. ಈಗ ಅವರ ಟ್ಯಾಟೂ ಸ್ಟುಡಿಯೊಗೆ ಪವಿತ್ರಾ ಗೌಡ ಬಂದಿದ್ದು, 777 ಎಂದು ಟ್ಯಾಟೂ ಬರೆಸಿಕೊಂಡಿದ್ದಾರೆ. ಇದರ ಅರ್ಥ ಏನಿರಬಹುದು ಎಂದು ಫ್ಯಾನ್ಸ್‌ ಕಮೆಂಟ್‌ ಮಾಡುತ್ತಿದ್ದಾರೆ. ದರ್ಶನ್ ಅವರ ಹುಟ್ಟಿದ ವರ್ಷ 1977. ಪವಿತ್ರಾ ಮಗಳು ಹುಟ್ಟಿದ್ದು ನವೆಂಬರ್ 7. ಹೀಗಾಗಿ, 777 ಎಂದು ಅವರು ಟ್ಯಾಟೂ ಹಾಕಿಸಿಕೊಂಡಿರಬಹುದು ಎಂದು ಫ್ಯಾನ್ಸ್ ಊಹಿಸಿದ್ದಾರೆ. ಮಾತ್ರವಲ್ಲ ದರ್ಶನ್ ಕಾರ್ ನಂಬರ್ ಕೂಡ ಇದೆ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: ‌DK Shivakumar: ಕುಮಾರಣ್ಣ ತೆನೆ ಹೊತ್ತ ಮಹಿಳೆಯನ್ನು ನೂಕಿ ಕಮಲ ಹಿಡಿದರು; ಇದು ಅಪವಿತ್ರ: ಡಿ.ಕೆ. ಶಿವಕುಮಾರ್

ಯಾರು ಈ ಪವಿತ್ರಾ ಗೌಡ?

ಫ್ಯಾಷನ್‌ ಡಿಸೈನರ್‌ ಎಂದೆನಿಸಿಕೊಂಡಿರುವ ಪವಿತ್ರಗೌಡ ಅವರು ದರ್ಶನ್‌ (Darshan Thoogudeepa) ಜತೆ ಇರುವ ಹಲವು ಫೋಟೊಗಳ ರೀಲ್ಸ್‌ ಹಂಚಿಕೊಂಡು ʻನಮ್ಮ ಸಂಬಂಧಕ್ಕೆ 10 ವರ್ಷಗಳಾಗಿವೆʼ ಎಂದು ಕ್ಯಾಪ್ಷನ್‌ ಕೊಟ್ಟು ಶೇರ್‌ ಮಾಡಿಕೊಂಡಿದ್ದರು. ಇದಾದ ಬಳಿಕ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದ್ದರು. ಪವಿತ್ರಾ ಗೌಡ ಅವರು ಮಾಡೆಲ್‌ ಹಾಗೂ ನಟಿ. ಅಗಮ್ಯಾ, ಛತ್ರಿಗಳು ಸಾರ್ ಛತ್ರಿಗಳು, ಸಾಗುವ ದಾರಿ, ಪ್ರೀತಿ ಕಿತಾಬು ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಈ ಮುಂಚೆ ಪವಿತ್ರಾ ಅವರು ದರ್ಶನ್​ರ ತಾಯಿ ಹಾಗೂ ಸಹೋದರಿ ಜತೆಗಿನ ಫೋಟೊವನ್ನು ಹಂಚಿಕೊಂಡಿದ್ದರು. ಈ ಬಗ್ಗೆ ಸಾಕಷ್ಟು ಚರ್ಚೆಗಳು ಆದವು. ಇದಾದ ಮೇಲೆ ದರ್ಶನ್‌ ಸಿನಿಮಾ ಸೆಟ್‌ಗಳಲ್ಲಿ ಪವಿತ್ರಾ ಅವರು ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದೂ ಇದೆ.ಕಳೆದ ವರ್ಷ ದರ್ಶನ್‌ ಅವರ ಜನುಮದಿನ ನಟಿ ಮೇಘಾ ಶೆಟ್ಟಿ ಹಂಚಿಕೊಂಡಿದ್ದ ಚಿತ್ರದಲ್ಲಿ ದರ್ಶನ್ ಜತೆಗೆ ಪವಿತ್ರಾ ಕೂಡ ಇದ್ದಿದ್ದರು. ಮೊದಲ ಬಾರಿಗೆ ಇದರ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತಿದ್ದ ದರ್ಶನ್​ರ ಪತ್ನಿ ವಿಜಯಲಕ್ಷ್ಮಿ, ಮೇಘಾ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಇದಾದ ಬಳಿಕ ಮೇಘ ಶೆಟ್ಟಿ ಫೋಟೊ ಡಿಲಿಟ್‌ ಮಾಡಿದ್ದರು.ಪವಿತ್ರಾ ಗೌಡ ಅವರಿಗೆ ಖುಷಿ ಎಂಬ ಮಗಳಿದ್ದಾಳೆ. ನಾಲ್ಕು ತಿಂಗಳ ಹಿಂದಷ್ಟೆ ಪುತ್ರಿ ಜತೆ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವಿಡಿಯೋ ಹಂಚಿಕೊಂಡಿದ್ದರು.

Exit mobile version