Site icon Vistara News

Pruthvi Ambaar: ಪ್ರೇಕ್ಷಕರು ಅಪ್ಪಿದ ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾಗೆ 25 ದಿನದ ಸಂಭ್ರಮ!

Pruthvi Ambaar For Regn compleated 25 days

ಬೆಂಗಳೂರು: ಪೃಥ್ವಿ ಅಂಬಾರ್‌ (Pruthvi Ambaar) ಹಾಗೂ ಮಿಲನಾ ನಾಗರಾಜ್ (Milana Nagaraj) ನಟನೆಯ ‘ಫಾರ್ ರಿಜಿಸ್ಟ್ರೇಷನ್’ (For Regn) ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದೆ. ಚಿತ್ರತಂಡ ಈ ಸಂಭ್ರಮವನ್ನು ಬೆಂಗಳೂರಿನ ರೇಣುಕಾಂಬ ಸ್ಟುಡಿಯೊದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಿನಿಮಾ ಯಶಸ್ಸಿಗೆ ಕಾರಣರಾದ ಇಡೀ ಚಿತ್ರತಂಡ ನೆನಪಿನ ಕಾಣಿಕೆ ನೀಡಿ ಗೌರವ ಸಲ್ಲಿಸಿದರು.

ಈ ವೇಳೆ ನಿರ್ಮಾಪಕ ನವೀನ್ ರಾವ್ ಮಾತನಾಡಿ ʻಪ್ರಾರಂಭದ ದಿನದಲ್ಲೇ ಬಹುತೇಕ ಕಡೆ ನಮ್ಮ ಚಿತ್ರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಪರಭಾಷಾ ಸಿನಿಮಾಗಳ ಅಬ್ಬರದ ನಡುವೆ ʻಫಾರ್ ರಿಜಿಸ್ಟ್ರೇಷನ್ ಸಿನಿಮಾʼ 25 ದಿನ ಪೂರೈಸಿದೆ. ನಮ್ಮ ಮೊದಲ ಸಿನಿಮಾಗೆ ಎಲ್ಲೆಡೆಯಿಂದ ಬೆಂಬಲ ಸಿಕ್ಕಿದೆ. ಚಿತ್ರ ಗೆದ್ದಿರುವುದು ಖುಷಿ ಕೊಟ್ಟಿದೆʼʼ ಎಂದರು.

ನಿರ್ದೇಶಕ ನವೀನ್ ದ್ವಾರಕನಾಥ್ ಮಾತನಾಡಿ ʻʻನನ್ನ ಮೊದಲ ಕನಸಿಗೆ ನವೀನ್ ಜತೆಯಾದರು. ನಾವು ಏನೇ ಕಥೆ ಬರೆದರು. ಕಥೆಗೆ ರೂಪ ಕೊಡುವುದು ಪಾತ್ರಧಾರಿಗಳು. ಅದರಂತೆ ಇಡೀ ತಂಡ ನಮ್ಮ ಪಯಣಕ್ಕೆ ಜತೆಯಾಗಿ ನಿಂತಿದೆ. ನಮ್ಮ ಕನಸು ಇಂದು ನನಸಾಗಿದೆ. ಪಿಕ್ಚರ್ ಮಾಡುವುದು ಮುಖ್ಯವಲ್ಲ. ರಿಲೀಸ್ ಮಾಡುವುದು ಎಷ್ಟು ಮುಖ್ಯ ಎನ್ನುವುದು ಅರ್ಥ ಆಗಿದೆ. ಜೂನ್ ನಲ್ಲಿ ಸಿನಿಮಾ ತೆಲುಗಿಗೆ ಡಬ್ ಆಗಲಿದೆ. 25 ದಿನ ಸೆಲೆಬ್ರೆಟ್ ಮಾಡುತ್ತೇವೆ ಎಂದು ಅಂದುಕೊಂಡಿರಲಿಲ್ಲ. ಈಗ ಖುಷಿಯಾಗುತ್ತಿದೆ ʼʼಎಂದು ಸಂತಸ ಹಂಚಿಕೊಂಡರು.

ಇದನ್ನೂ ಓದಿ: Pruthvi Ambaar: `ಮತ್ಸ್ಯಗಂಧ’ ಕಡಲ ಒಡಲ ಹಾಡು ರಿಲೀಸ್; ಫೆ. 23ಕ್ಕೆ ಸಿನಿಮಾ ರಾಜ್ಯದಾದ್ಯಂತ ರಿಲೀಸ್‌

ನಟ ಪೃಥ್ವಿ ಅಂಬಾರ್ ಮಾತನಾಡಿ, ʻʻಸಿನಿಮಾ ಗೆದ್ದಿರುವುದು ತುಂಬಾ ಖುಷಿ ಇದೆ. ಇದೊಂದು ದೊಡ್ಡ ಜರ್ನಿ. ನಿರ್ದೇಶಕರು ನಿರ್ಮಾಪಕರು ಇಬ್ಬರು ಫ್ಯಾಷನೇಟೇಡ್. ಇಬ್ಬರು ಇದೇ ರೀತಿ ಮುಂದೆ ಸಾಗಲಿ. ನಿಮ್ಮ ಮುಂದಿನ ಸಿನಿಮಾ 100 ದಿನ ಆಚರಣೆ ಮಾಡುವಂತೆ ಆಗಲಿದೆʼʼ ಎಂದು ಹಾರೈಸಿದರು. ಸಂಬಂಧ ಹಾಗೂ ಭಾವನಾತ್ಮಕ ಎಳೆಯನ್ನು ಒಳಗೊಂಡು ಫಾರ್ ರಿಜಿಸ್ಟ್ರೇಷನ್ ಸಿನಿಮಾಗೆ ನವೀನ್ ದ್ವಾರಕನಾಥ್ ಆಕ್ಷನ್ ಕಟ್ ಹೇಳಿದ್ದರು. ಮೊದಲ ಸಿನಿಮಾದಲ್ಲಿಯೇ ಒಂದೊಳ್ಳೆ ಕಥೆ ಮೂಲಕ ನವೀನ್ ಗೆದ್ದಿದ್ದಾರೆ. ನವೀನ್ ಕನಸಿಗೆ ಅವರ ಗೆಳೆಯರಾದ ನವೀನ್ ರಾವ್ ಸಾಥ್ ಕೊಟ್ಟಿದ್ದರು.

ಥಿಯೇಟರ್‌ನಲ್ಲಿ ಅದ್ಭುತ ಪ್ರದರ್ಶನ ಕಂಡಿರುವ ಫಾರ್ ರಿಜಿಸ್ಟ್ರೇಷನ್ ಸಿನಿಮಾದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕು ಖರೀದಿ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಎಲ್ಲವೂ ಫೈನಲ್ ಆಗಲಿದೆ. ಮೊದಲ ಪ್ರಯತ್ನದಲ್ಲಿಯೇ ಗೆದ್ದಿರುವ ನಿರ್ದೇಶಕ ನವೀನ್ ದ್ವಾರಕನಾಥ್ ಅವರು ಈಗಾಗಲೇ ಮೂರು ಕಥೆಗಳನ್ನು ರೆಡಿ ಮಾಡಿದ್ದು, ಒಂದಷ್ಟು ನಿರ್ಮಾಪಕರು ಅಪ್ರೋಚ್ ಆಗಿದ್ದಾರೆ.

ರವಿಶಂಕರ್, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್ ಭಟ್, ಉಮೇಶ್ ತಾರಾಬಗಳಗದಲ್ಲಿದ್ದಾರೆ. ಚಿತ್ರದ ಚಿತ್ರಕಥೆ, ನಿರ್ದೇಶನ ನವೀನ್ ದ್ವಾರಕನಾಥ್, ಸಂಗೀತ ಸಂಯೋಜನೆ ಆರ್.ಕೆ ಹರೀಶ್, ಅಭಿಲಾಷ್ ಕಳತ್ತಿ, ಅಭಿಷೇಕ್ ಜಿ.ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್ ಸಂಕಲನ ಚಿತ್ರಕ್ಕಿದೆ.

Exit mobile version