Site icon Vistara News

Puneeth Rajkumar: ಅಪ್ಪು ಸ್ಪೆಷಲ್‌ ಫ್ಯಾನ್‌ ಈ ʻಗೊಂಬೆ ಮ್ಯಾನ್‌ʼ: ಅಭಿಮಾನಿಗಳ ಸಂಭ್ರಮ ನೀವೆ ನೋಡಿ!

puneeth Rajkumar fans pays tribute

ಇಂದು (ಮಾ.17) ಅಭಿಮಾನಿಗಳ ಮೆಚ್ಚಿನ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ಜನುಮದಿನ. ಈಗಾಗಲೇ ಲಕ್ಷಾಂತರ ಅಬಿಮಾನಿಗಳು ಅಪ್ಪು ಸಮಾಧಿಗೆ ಭೇಟಿ ಕೊಟ್ಟಿದ್ದಾರೆ. ಜತೆಗೆ ಸ್ಪೆಷಲ್‌ ಗಿಫ್ಟ್‌ ಕೂಡ ತಂದಿದ್ದಾರೆ. ಹೆಚ್ಚು ಹೈಲೈಟ್‌ ಆಗಿದ್ದು ಈ ʻಗೊಂಬೆ ಮ್ಯಾನ್ʼ. ಅಪ್ಪು ಸ್ಪೆಷಲ್‌ ಫ್ಯಾನ್‌ ಈ ʻಗೊಂಬೆ ಮ್ಯಾನ್‌ʼ ಡ್ಯಾನ್ಸ್‌ ಕೂಡ ಕಲಿತಾ ಇದ್ದಾರೆ. ಅದು ಕೂಡ ಅಪ್ಪು ಅವರ ಜಾಕಿ ಸಿನಿಮಾ ನೋಡಿ ಪ್ರಭಾವಿರಾದೆ ಎನ್ನುತ್ತಾರೆ ಇವರು!

ದೇವರ ಅಭಿಮಾನಿಗಳಿಗೆ ಬಿಸಿ ಬಿಸಿ ಬಿರಿಯಾನಿ ರೆಡಿ! ಇಂದು 1 ಲಕ್ಷ ಜನಕ್ಕೆ ಯುವರಾಜ್ ಕುಮಾರ್ ಅನ್ನದಾನ ವ್ಯವಸ್ಥೆ ಮಾಡಿದ್ದಾರೆ. ಅಭಿಮಾನಿಗಳಿಗೆ ಸಮಾಧಿ ಬಳಿ ಚಿಕನ್ ಬಿರಿಯಾನಿ ಹಂಚಿಕೆ ಕೂಡ ಆಗಲಿದೆ. 

ದಾರದಲ್ಲಿ ಮೂಡಿದ ಅಪ್ಪು. ಫ್ಯಾನ್‌ ಸ್ಪೆಷಲ್‌ ಗಿಫ್ಟ್‌! ಇದೀಗ ಪುನೀತ್‌ ಅವರ ಅಭಿಮಾನಿಯಾದ ವೆಂಕಟ ಸುಬ್ಬು ಅವರು  ದಾರದಿಂದ ಅಪ್ಪು ಚಿತ್ರ ಬಿಡಿಸಿದ್ದಾರೆ. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಈ ಗಿಫ್ಟ್‌ ಕೊಡಲಿದ್ದಾರೆ.

ಬೆಳಗ್ಗೆ ಹತ್ತು ಗಂಟೆಗೆ ಕುಟುಂಬದಿಂದ ಸಮಾಧಿ ಪೂಜೆ ನೆರವೇರಿದೆ. ಯುವ ಮತ್ತು ವಿನಯ್ ಸೇರಿದಂತೆ ಇಡೀ ದೊಡ್ಮನೆ ಭಾಗಿಯಾಗಿದೆ. ರಾತ್ರಿಯೇ ಕೇಕ್ ಕತ್ತರಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಅಂದಹಾಗೆ ಅಪ್ಪುವಿನ ಈ ಹುಟ್ಟುಹಬ್ಬವನ್ನು ‘ಸ್ಫೂರ್ತಿಯ ಹಬ್ಬ’ವನ್ನಾಗಿ ಆಚರಿಸುತ್ತಿರುವುದು ವಿಶೇಷ.

ಇದನ್ನೂ ಓದಿ: Puneeth Rajkumar: ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ ಪುನೀತ್‌ ರಾಜ್‌ಕುಮಾರ್‌ ಅಭಿನಯದ “ಜಾಕಿ” ಸಿನಿಮಾ!

ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅಭಿಮಾನಿಗಳು ಅಮೆರಿಕದ ನ್ಯೂಯಾರ್ಕ್‌ನ ಟೈಂಸ್ಕ್ವೇರ್‌ನಲ್ಲಿ ಇಬ್ಬರಿಗೂ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೊ ವೈರಲ್ ಆಗುತ್ತಿದೆ.

Exit mobile version