Site icon Vistara News

Puneeth Parva | ನವೆಂಬರ್‌ 1ರಂದು ಪುನೀತ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ನಾಡಿನ ಜನತೆಗೆ ಬೊಮ್ಮಾಯಿ ಆಹ್ವಾನ!

Puneeth Parva

ಬೆಂಗಳೂರು : ʻಪುನೀತ ಪರ್ವʼ (Puneeth Parva) ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಹಿರಿಯರು ಮಾಡಿರುವ ಈ ಪ್ರಕೃತಿಯನ್ನು ಉಳಿಸಿಕೊಂಡು ಹೋಗಬೇಕು. ಗಂಧದ ಗುಡಿ ಕೇವಲ ಸಿನಿಮಾ ಅಲ್ಲ. ಮುಂದಿನ ಪೀಳಿಗೆಗೆ ದಂತಕಂತೆ ಆಗಲಿದೆ. ಅಂತೆಯೇ ಅಪ್ಪು ಕೂಡ ಒಂದು ದಂತ ಕತೆ ಎಂದರು. ಇದೇ ವೇಳೆ ಅವರು ನವೆಂಬರ್‌ 1ರಂದು ಪುನೀತ್‌ ರಾಜಕುಮಾರ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವುದಾಗಿ ಹೇಳಿ, ನಾಡಿನ ಜನತೆಗೆ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟರು.

ʻʻಮನಸ್ಸುಗಳು ಭಾವನಾತ್ಮಕವಾದಾಗ ಪದಗಳ ತೂಕ ಕಡಿಮೆ ಆಗುತ್ತದೆ. ಅಪ್ಪು ಅವರು ನಮ್ಮ ಜತೆಗೇ ಇದ್ದಾರೆ. ಪ್ರತಿ ಕ್ಷಣವೂ ಅವರು ನಮ್ಮನ್ನು ನೋಡುತ್ತಿರುತ್ತಾರೆ. ನಿಮ್ಮ ಅಭಿಮಾನವನ್ನು ನೋಡಿ ಸಂತೋಷಪಡುತ್ತಾರೆ. ಒಬ್ಬ ಮನುಷ್ಯ ಇದ್ದಾಗ ಅವರ ಬಗ್ಗೆ ಹೊಗಳುವುದು ಸಹಜ. ಇಲ್ಲದೇ ಇದ್ದಾಗ ನೆನಪು ಮಾಡಿಕೊಳ್ಳುವುದು ದೈವ ಆಶೀರ್ವಾದ. ದೇವರ ಆಶೀರ್ವಾದ ಅಪ್ಪು ಮೇಲೆ ಇತ್ತು. ಈ ಸಂದರ್ಭದಲ್ಲಿ ನಾವು ರಾಜ್‌ ಕುಮಾರ್‌ ನೆನಪು ಮಾಡಿಕೊಳ್ಳಬೇಕು. ಅವರ ಎಲ್ಲಾ ಗುಣಗಳನ್ನು ಅಪ್ಪು ಹೊಂದಿದ್ದರು. ದೊಡ್ಡ ಸ್ಟಾರ್‌ ಆದರೂ ನಯ ವಿನಯ ಮರೆತಿರಲಿಲ್ಲ,” ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಮುಂದುವರಿದ ಅವರು “ಸಣ್ಣ ವಯಸ್ಸಿನಲ್ಲೇ ನಟನೆ ಆರಂಭಿಸಿದ್ದ ಅಪ್ಪು ಸಣ್ಣ ವಯಸಿನಲ್ಲೇ ನಮ್ಮನ್ನು ಬಿಟ್ಟು ಹೋದಾಗ ದುಃಖ ತಡೆಯಲು ಆಗಿಲ್ಲ. ಶ್ರೇಷ್ಠ ವ್ಯಕ್ತಿಗಳು ಸಣ್ಣ ವಯಸ್ಸಿನಲ್ಲಿಯೇ ಬಿಟ್ಟು ಹೋಗುತ್ತಾರೆ. ಈ ಕಾರ್ಯಕ್ರಮ ನೋಡುವಾಗ ದೊಡ್ಮನೆ ಕುಟುಂಬಕ್ಕೆ ಹೃದಯ ಶ್ರೀಮಂತಿಕೆ ಗೊತ್ತಾಗುತ್ತದೆ. ಕನ್ನಡ ನಾಡು ಮತ್ತು ಗಂಧದ ಗುಡಿಯನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಈ ನಿಸರ್ಗವನ್ನು ಉಳಿಸುವ ಅವಶ್ಯಕತೆಯಿದ್ದು, ಹಿರಿಯರು ಮಾಡಿರುವ ಈ ಪ್ರಕೃತಿಯನ್ನು ಉಳಿಸಿಕೊಂಡು ಹೋಗಬೇಕ,ʼʼ ಎಂದರು.

Puneeth Parva

ಇದನ್ನೂ ಓದಿ | Puneeth Parva | ಅಪ್ಪುವಿನ ಡ್ಯಾನ್ಸ್‌ಗೆ ನಾನು ದೊಡ್ಡ ಅಭಿಮಾನಿ ಅಂದ್ರು ಶಿವಣ್ಣ: ವೇದಿಕೆಯಲ್ಲಿ ನಟರ ಸಮಾಗಮ!

ನವೆಂಬರ್‌ 1ರ ರಾಜ್ಯೋತ್ಸವ ದಿನದಂದು ಕರ್ನಾಟಕ ರತ್ನ ಪ್ರಶಸ್ತಿಯನ್ನು ಪುನೀತ್‌ ಅವರಿಗೆ ನೀಡುತ್ತಿದ್ದೇವೆ ಎಂದು ಬೊಮ್ಮಾಯಿ ಸಮಸ್ತ ಕನ್ನಡ ನಾಡಿನ ಜನತೆಗೆ ಆಹ್ವಾನ ನೀಡಿದರು. ನಂತರ ದೊಡ್ಮನೆ ಕುಟುಂಬದಿಂದ ಸಿಎಂ ಬೊಮ್ಮಾಯಿಗೆ ಸನ್ಮಾನ ಮಾಡಲಾಯಿತು.

ಸಚಿವ ಅಶ್ವತ್ಥ್‌ ನಾರಾಯಣ ಮಾತನಾಡಿ ʻʻಈ ಸಿನಿಮಾ ವಿಶ್ವಕ್ಕೆ ತೋರಿಸುವಂತಿದೆ. ಪ್ರಕೃತಿ ನಮ್ಮನ್ನು ಯಾವ ರೀತಿ ಕಾಪಾಡುತ್ತಿದೆ. ನಾವು ಹೇಗೆ ಗೌರವಿಸಬೇಕು ಎಂಬುದು ಸಂದೇಶ ನೀಡುವಂತಿದೆʼʼ ಎಂದು ಹೇಳಿದರು. ಸಚಿವ ಮುರುಗೇಶ್‌ ನಿರಾಣಿ, ಶಾಸಕ ಆನಂದ್‌ ಸಿಂಗ್‌ ಹಾಗೂ ಸಚಿವ ನಾರಾಯಣ ಗೌಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ | Puneeth Parva | ಬೊಂಬೆ ಹೇಳುತೈತೆ ಎಂದು ಹಾಡಿದ ಶಿವಣ್ಣ, ವೇದಿಕೆ ಮೇಲೆ ಅಶ್ವಿನಿ ಪುನೀತ್‌ ಕಣ್ಣೀರು

Exit mobile version