ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ (Radhika Pandit) ಅವರ ಜನುಮದಿನ ಮಾರ್ಚ್ 7ರಂದು ಆಗಿತ್ತು. ಮಾರ್ಚ್ 7ರಂದು ಅಭಿಮಾನಿಗಳ ಜತೆ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದರು. ಅದಾದ ಬಳಿಕ ಕುಟುಂಬದ ಜತೆ ಹಾಗೇ ಯಶ್ ಜತೆಗಿನ ಸೆಲೆಬ್ರೇಷನ್ ಹೇಗಿತ್ತು ಎಂಬುದನ್ನು ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ.
ಕಡಲ ತೀರದಲ್ಲಿ ಪತಿ ಯಶ್ ಮತ್ತು ಕುಟುಂಬದ ಜತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: Radhika Pandit: ಯಶ್-ರಾಧಿಕಾ ಪಂಡಿತ್ ಪರ್ಸನಲ್ ಫೋಟೊಗ್ರಾಫರ್ ರಿವೀಲ್!
ರಾಧಿಕಾ ಪಂಡಿತ್ ಸಿನಿಮಾ ಜೀವನದಲ್ಲಿ ʻಮಿಸ್ಟರ್ ಆ್ಯಂಡ್ ಮಿಸಸ್ ಸಿನಿಮಾʼ ತುಂಬಾನೆ ಮಹತ್ವದ ಚಿತ್ರವೇ ಆಗಿದೆ. ಅದಕ್ಕೂ ಮೊದಲು ಬಂದ ʻಮೊಗ್ಗಿನ ಮನಸುʼ ಚಿತ್ರವೂ ಕನ್ನಡಕ್ಕೆ ಒಬ್ಬ ಸಿಂಡ್ರೇಲಾರನ್ನ ಕೊಟ್ಟಿತ್ತು. ಈ ಚಿತ್ರದಲ್ಲಿ ರಾಕಿ ಭಾಯ್ ಯಶ್ ಜೋಡಿ ಆಗಿದ್ದರು.
ʻಜುಲೈ 18, 2008.. “ರಾಧಿಕಾ ಪಂಡಿತ್” ನಿಮಗೆಲ್ಲ ಪರಿಚಯವಾದ ದಿನ, ‘ಮೊಗ್ಗಿನ ಮನಸ್ಸು’ ಸಿನಿಮಾ ಮೂಲಕ ರಾಧಿಕಾ ನಾಯಕಿಯಾಗಿ ಪರಿಚಯವಾದ ದಿನ. ಯಶ್‌ಗೆ ಜೋಡಿಯಾಗಿ ಸಾಥ್ ನೀಡಿದ್ದರು. ನಟಿಸಿದ ಮೊದಲ ಸಿನಿಮಾನೇ ಸೂಪರ್ ಡೂಪರ್ ಹಿಟ್ ಆಗಿತ್ತು. 2019ರಲ್ಲಿ ರಿಲೀಸ್ ಆದ ‘ಆದಿಲಕ್ಷ್ಮಿ ಪುರಾಣ’ ರಾಧಿಕಾರ ಕೊನೆಯ ಸಿನಿಮಾ ಆಗಿದೆ. ಅದಾದ ಬಳಿಕ ಇನ್ಯಾವ ಸಿನಿಮಾದಲ್ಲಿಯೂ ರಾಧಿಕಾ ನಟಿಸಿಲ್ಲ.‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾಗಳಿಗಾಗಿ ತೆರೆ ಮರೆಯಲ್ಲಿ ರಾಧಿಕಾ ಕೆಲಸ ಮಾಡಿದ್ದರು.