ಬೆಂಗಳೂರು: ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ (Radhika Pandit) ಅವರಿಗೆ ಇಂದು (ಮಾ.7) ಜನುಮದಿನದ ಸಂಭ್ರಮ. 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ರಾಧಿಕಾ. ಇದೀಗ ನಟಿಗೆ ಫ್ಯಾನ್ಸ್ ಸಿಡಿಪಿ ರಿಲೀಸ್ ಮಾಡಿ ವಿಶ್ ಮಾಡುತ್ತಿದ್ದಾರೆ. ಅಭಿಮಾನಿಗಳ ಜತೆ ರಾಧಿಕಾ ಪಂಡಿತ್ ಬರ್ತಡೇ ಸೆಲೆಬ್ರೇಶನ್ ಮಾಡಿದ್ದಾರೆ. ಫ್ಯಾನ್ಸ್ ತಂದ ಕೇಕ್‌ವನ್ನು ಕಟ್ ಮಾಡಿ ಸಂಭ್ರಮಿಸಿದ್ದಾರೆ.
ರಾಧಿಕಾ ಪಂಡಿತ್ ಸಿನಿಮಾ ಜೀವನದಲ್ಲಿ ʻಮಿಸ್ಟರ್ ಆ್ಯಂಡ್ ಮಿಸಸ್ ಸಿನಿಮಾʼ ತುಂಬಾನೆ ಮಹತ್ವದ ಚಿತ್ರವೇ ಆಗಿದೆ. ಅದಕ್ಕೂ ಮೊದಲು ಬಂದ ʻಮೊಗ್ಗಿನ ಮನಸುʼ ಚಿತ್ರವೂ ಕನ್ನಡಕ್ಕೆ ಒಬ್ಬ ಸಿಂಡ್ರೇಲಾರನ್ನ ಕೊಟ್ಟಿತ್ತು. ಈ ಚಿತ್ರದಲ್ಲಿ ರಾಕಿ ಭಾಯ್ ಯಶ್ ಜೋಡಿ ಆಗಿದ್ದರು.
ʻʻಜುಲೈ 18, 2008.. “ರಾಧಿಕಾ ಪಂಡಿತ್” ನಿಮಗೆಲ್ಲ ಪರಿಚಯವಾದ ದಿನ, ‘ಮೊಗ್ಗಿನ ಮನಸ್ಸು’ ಸಿನಿಮಾ ಮೂಲಕ ರಾಧಿಕಾ ನಾಯಕಿಯಾಗಿ ಪರಿಚಯವಾದ ದಿನ. ಯಶ್‌ಗೆ ಜೋಡಿಯಾಗಿ ಸಾಥ್ ನೀಡಿದ್ದರು. ನಟಿಸಿದ ಮೊದಲ ಸಿನಿಮಾನೇ ಸೂಪರ್ ಡೂಪರ್ ಹಿಟ್ ಆಗಿತ್ತು. 2019ರಲ್ಲಿ ರಿಲೀಸ್ ಆದ ‘ಆದಿಲಕ್ಷ್ಮಿ ಪುರಾಣ’ ರಾಧಿಕಾರ ಕೊನೆಯ ಸಿನಿಮಾ ಆಗಿದೆ. ಅದಾದ ಬಳಿಕ ಇನ್ಯಾವ ಸಿನಿಮಾದಲ್ಲಿಯೂ ರಾಧಿಕಾ ನಟಿಸಿಲ್ಲ.‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾಗಳಿಗಾಗಿ ತೆರೆ ಮರೆಯಲ್ಲಿ ರಾಧಿಕಾ ಕೆಲಸ ಮಾಡಿದ್ದರು.
ಇದನ್ನೂ ಓದಿ: Radhika Pandit: ಗೌನ್ ತೊಟ್ಟು, ಗೋಲ್ಡನ್ ಲೈಟ್‌ಗಳ ಮಧ್ಯೆ ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ಪೋಸ್!
Wishing a Wonderful Happy Birthday to the Actress #RadhikaPandit
— IndianActress (@INDACTRESSPIC) March 7, 2024
Wife of KGF Superstar #Yash
#HappyBirthdayRadhikaPandit #HBDRadhikaPandit @RadhikaPandit7 pic.twitter.com/jisB7Por03
ನಟನೆಗೆ ಕಮ್‌ಬ್ಯಾಕ್ ಆಗ್ತಾರಾ ರಾಧಿಕಾ ಪಂಡಿತ್?
ರಾಧಿಕಾ ಅವರು ಈ ಮುಂಚೆ 5 ವರ್ಷದ ಹಿಂದಿನ ಪೋಸ್ಟ್ ಹಂಚಿಕೊಂಡು, ತಮ್ಮ ಬಣ್ಣದ ಲೋಕದ ಬಗ್ಗೆ ಮೆಲುಕು ಹಾಕಿದ್ದರು. ರಾಧಿಕಾ ಪೋಸ್ಟ್‌ನಲ್ಲಿ ʻʻನನ್ನನ್ನು ಪ್ರೀತಿಸುವ, ನನ್ನನ್ನು ಗೌರವಿಸುವ ನನ್ನ ಚಿತ್ರರಂಗದ ಎಲ್ಲರೂ ಈಗಲೂ ನನ್ನಲ್ಲಿದ್ದಾರೆ. ಇದೆಲ್ಲವೂ ಸುಲಭವಾಗಿ ಬರುವುದಿಲ್ಲ, ಇದಕ್ಕೆ ಜನರಿಂದ ಸಾಕಷ್ಟು ಕೊಡುಗೆ ಬೇಕು. ಮೊದಲನೆಯದಾಗಿ ನನ್ನ ಕುಟುಂಬ.. ಈ ಪ್ರಯಾಣದುದ್ದಕ್ಕೂ ನನ್ನನ್ನು ಬೆಂಬಲಿಸಿದ, ಮಾರ್ಗದರ್ಶನ ನೀಡಿದ ಅವರು ನನ್ನನ್ನು ನೆಗೆಟಿವ್‌ನಿಂದ ಕಾಪಾಡುವಲ್ಲಿ ಎಂದಿಗೂ ವಿಫಲರಾಗಲಿಲ್ಲ. ನನ್ನ ಶೂಟಿಂಗ್‌ನ ಪ್ರತಿ ದಿನವೂ ನನ್ನ ಜತೆಗಿರುವ ನನ್ನ ತಾಯಿ.. ನನ್ನ ಸಹಾಯಕ ಶಂಕರ್ ಕೂಡ, ಅವರು 10 ವರ್ಷಗಳಿಂದ ನನಗೆ ಸಹಾಯ ಮಾಡುತ್ತಿದ್ದಾರೆ. ನನ್ನ ಎಲ್ಲಾ ನಿರ್ದೇಶಕರು ಮತ್ತು ನಿರ್ಮಾಪಕರು ನನ್ನ ಸಾಮರ್ಥ್ಯವನ್ನು ನಂಬಿ ನನಗೆ ಕೆಲಸ ಕೊಟ್ಟಿದ್ದಾರೆ. ನನ್ನ ತಂತ್ರಜ್ಞರು ನನಗೆ ಕೆಲಸ ಮಾಡಲು ಸುಲಭವಾಗಿಸಿದ್ದಾರೆ. ಕನಸಿನೊಂದಿಗೆ ಈ ಉದ್ಯಮಕ್ಕೆ ಬಂದ ಎಲ್ಲಾ ಸುಂದರ ಹೊಸ ಹುಡುಗಿಯರಿಗೆ.. ನಾನು ಅವರಿಗೆ ಒಂದೇ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ.. ನಿಮ್ಮ ಕಲೆಯಲ್ಲಿ ಉತ್ತಮವಾಗಿದ್ದರೆ ಸಾಕಾಗುವುದಿಲ್ಲ ಆದರೆ ಉತ್ತಮ ಮಾನವರಾಗಿರುವುದು ಮುಖ್ಯ. “ನೀವು ನನ್ನ ಸ್ಫೂರ್ತಿ”ಎಂದು ಹೇಳಿಸಿಕೊಳ್ಳುವಂತರಾಗಬೇಕು. ನನ್ನ ಎಲ್ಲಾ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಧನ್ಯವಾದ. ಇದನ್ನು ವಿದಾಯ ಭಾಷಣ ಎಂದು ತೆಗೆದುಕೊಳ್ಳಬೇಡಿ, ‘ಪಿಕ್ಚರ್ ಇನ್ನೂ ಬಾಕಿ ಇದೆʼʼ ನಿಮ್ಮ ರಾಧಿಕಾ ಪಂಡಿತ್ʼʼಎಂದು ಸುದೀರ್ಘವಾಗಿ ಬರೆದುಕೊಂಡಿದ್ದರು.