Site icon Vistara News

Radhika Pandit: ಗೌನ್ ತೊಟ್ಟು, ಗೋಲ್ಡನ್‌ ಲೈಟ್‌ಗಳ ಮಧ್ಯೆ ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ಪೋಸ್‌!

ಸ್ಯಾಂಡಲ್‌ವುಡ್‌ ನಟಿ ರಾಧಿಕಾ ಪಂಡಿತ್‌ (Radhika Pandit) ಸಿನಿಮಾದಿಂದ ದೂರ ಇದ್ದರೂ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಹಿಂದೆ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡು “ಪ್ರೇಮಿಗಳ ಮಾಸಕ್ಕೆ ಹಲೋ ” ಎಂದು ಬರೆದುಕೊಂಡಿದ್ದರು. ಇದೀಗ ಪ್ರೇಮಿಗಳ ವಾರದಲ್ಲಿ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ರಾಧಿಕಾ ಪಂಡಿತ್ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.

ಕೆಂಪು ಬಣ್ಣದ ಗೌನ್ ತೊಟ್ಟು, ಗೋಲ್ಡನ್‌ ಲೈಟ್‌ಗಳ ಮಧ್ಯೆ ಥೇಟ್ ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾರಂತೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.

ಇದನ್ನೂ ಓದಿ: Radhika Pandit: ʻಪ್ರೇಮಿಗಳ ಮಾಸಕ್ಕೆ ಹಲೋʼ ಎಂದು ಫೋಟೊಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್‌!

ʻನನ್ನ ಪ್ರೀತಿಪಾತ್ರರು ಕಾಣಿಸಿಕೊಂಡಾಗ ಸುಂದರ ಕ್ಷಣಗಳು ಆರಂಭ ಆಗುತ್ತವೆ ” ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.

ರಾಧಿಕಾ ಪಂಡಿತ್ ಫೋಟೊಗಳನ್ನು ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್ ರಾಕಿಂಗ್ ಸ್ಟಾರ್ ಯಶ್‌ರನ್ನು ಹುಡುಕಾಡುತ್ತಿದ್ದಾರೆ.

2019ರಲ್ಲಿ ರಿಲೀಸ್ ಆದ ‘ಆದಿಲಕ್ಷ್ಮಿ ಪುರಾಣ’ ರಾಧಿಕಾರ ಕೊನೆಯ ಸಿನಿಮಾ ಆಗಿದೆ. ಅದಾದ ಬಳಿಕ ಇನ್ಯಾವ ಸಿನಿಮಾದಲ್ಲಿಯೂ ರಾಧಿಕಾ ನಟಿಸಿಲ್ಲ.‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾಗಳಿಗಾಗಿ ತೆರೆ ಮರೆಯಲ್ಲಿ ರಾಧಿಕಾ ಕೆಲಸ ಮಾಡಿದ್ದರು.
Exit mobile version