Site icon Vistara News

Rakshak Bullet: ಇನ್ಮುಂದೆ ನಂದೇ ರೌಂಡು, ನಂದೇ ಸೌಂಡು ಎಂದ ಮರಿ ಬುಲೆಟ್‌!

Rakshak Bullet RB01 Movie

ಬೆಂಗಳೂರು: ಏಪ್ರಿಲ್‌ 2 ದಿವಂಗತ ಬುಲೆಟ್ ಪ್ರಕಾಶ್ ಅವರ 47ನೇ ವರ್ಷದ ಹುಟ್ಟುಹಬ್ಬ. ಈ ದಿನವೇ `ಗುರುಶಿಷ್ಯರು’, ಬಿಗ್ ಬಾಸ್ ಸೀಸನ್ 10ರ (Bigg Boss Kannada 10) ಮೂಲಕ ಮೋಡಿ ಮಾಡಿದ ರಕ್ಷಕ್ ಬುಲೆಟ್ (Rakshak Bullet) ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ್ದಾರೆ. ರಕ್ಷಕ್ ಬುಲೆಟ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರಕ್ಕೆ ಸದ್ಯ ‘RB 01’ ಎಂದು ಟೈಟಲ್ ಇಡಲಾಗಿದೆ. ಶೀಘ್ರವೇ ಸಿನಿಮಾದ ಶೀರ್ಷಿಕೆ ಹಾಗೂ ಟೀಸರ್ ಅನಾವರಣ ಮಾಡುವುದಾಗಿ ರಕ್ಷಕ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಮುಂಚೆ ತಮ್ಮ ಹೇಳಿಕೆ ಮೂಲಕ ಸಾಕಷು ವಿವಾದಕ್ಕೆ ಗುರಿಯಾಗಿದ್ದರು.

ʻʻಎಲ್ಲಾ ‌ನನ್ನ‌ ಆತ್ಮೀಯರೆ , ಇಂದು‌ ನನ್ನ ಪೂಜ್ಯ ತಂದೆ ದಿವಂಗತ “ಬುಲೆಟ್ ಪ್ರಕಾಶ್” ರವರ 47ನೇ ಜನ್ಮದಿನ. ಇಂದಿನ ವಿಶೇಷವೇನೆಂದರೆ, ನಾನು ನಾಯಕ ನಟನಾಗಿ ನಟಿಸುತ್ತಿರುವ, ನನ್ನ ಚೊಚ್ಚಲ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ನನಗೆ ಸಂತಸ ತಂದಿದೆ. ನನ್ನ ತಂದೆಯ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಆಶೀರ್ವಾದ ಕೂಡ ಸದಾ ನನ್ನ ಮೇಲಿರಲಿ ಎಂದು ಬಯಸುತ್ತೇನೆ. ನನಗೂ ಹಾಗೂ ನನ್ನ ಇಡೀ ಚಿತ್ರತಂಡಕ್ಕು ಹರಸಿ ಹಾರೈಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆʼʼಎಂದು ಬರೆದುಕೊಂಡಿದ್ದಾರೆ.

ಇದೊಂದು ರೌಡಿಸಂ ಕಥೆ ಇರಬಹುದು ಎಂದು ಅವರ ಫ್ಯಾನ್ಸ್ ಊಹಿಸುತ್ತಿದ್ದಾರೆ. ‘ಮಚ್ಚಾ ಏರಿಯಾದಲ್ಲಿ ಕಣ್ಮುಂದೆ ಬೇಜ್ಜಾನ್ ಗಾಡಿಗಳು ಸೌಂಡು ಮಾಡುತ್ತವೆ. ಆದರೆ ಸೌಂಡ್ ಕೇಳ್ತಿದ್ದ ಹಾಗೆ ಇದೇ ಗಾಡಿ ಅಂತ ಹೇಳೋಕೆ ಆಗೋದು ಒಂದನ್ನೇ ಅದುವೇ ಬುಲೆಟ್. ಇನ್ಮುಂದೆ ನಂದೇ ರೌಂಡು, ನಂದೇ ಸೌಂಡು’ ಎಂದು ಬರೆಯಲಾಗಿದೆ.

ಇದನ್ನೂ ಓದಿ: BBK SEASON 10: ಸುದೀಪ್‌ ಬಗ್ಗೆ ಆಡಿದ ಮಾತಿಗೆ ಕ್ಷಮೆ ಕೇಳಿದ ರಕ್ಷಕ್‌ ಬುಲೆಟ್‌!

‘R B 01’ ಚಿತ್ರಕ್ಕೆ ಶ್ರೀಹರಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಕ್ರಿಶ್ ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಶ್ರೀಧರ್ ಕಶ್ಯಪ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ರಕ್ಷಕ್‌ ಬುಲೆಟ್‌ ಲುಕ್‌ ಹಾಗೂ ಇನ್ನುಳಿದ ಪಾತ್ರ ವರ್ಗದ ಬಗ್ಗೆ ಅಪಡೇಟ್‌ ಬರಬೇಕಿದೆ.

Exit mobile version