ಬೆಂಗಳೂರು: ರಕ್ಷಿತ್ ಶೆಟ್ಟಿ (Rakshit Shetty) ತಮ್ಮ ನಿರ್ಮಾಣ ಸಂಸ್ಥೆಯಿಂದ ಒಟಿಟಿ ಫ್ಲಾರ್ಟ್ ಫಾರಂಗೆ 8 ಎಪಿಸೋಡ್‌ಗಳ ‘ಏಕಂ’ ವೆಬ್ ಸಿರೀಸ್ ನಿರ್ಮಾಣ ಮಾಡಿದ್ದಾರೆ. ಅವರೇ ನಿರ್ದೇಶನ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಇದೀಗ ಈ ವೆಬ್ ಸಿರೀಸ್ ಜುಲೈ 13ರಂದು ರಿಲೀಸ್ ಆಗುತ್ತಿದೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ಪೋಸ್ಟ್ ಮಾಡಿದ್ದು ಹೀಗೆ.
ʻʻ2020 ಜನವರಿ. ಅಥವಾ ಫೆಬ್ರವರಿಯೇ? ನೆನಪು ಮಬ್ಬಾಗಿದೆ! ಇರಲಿ. ಪರಂವಃ ಹಾಗು ಜರ್ನಿಮ್ಯಾನ್
ಫಿಲಂಸ್ ಒಟ್ಟಿಗೆ “ಏಕಂ” ಮಾಡಲು ಹೊರಟಿದ್ದು ಅಂದು. ಏನೋ ಹೊಸತೊಂದನ್ನು ಮಾಡುವ
ಉತ್ಸಾಹ ನಮ್ಮಲ್ಲಿ. ಕನ್ನಡದಲ್ಲೊಂದು ವೆಬ್ ಸೀರೀಸ್ ಹೊರ ಬರಲು ಇದೆ ಸೂಕ್ತ ಸಮಯ
ಎಂದೆನಿಸಿತ್ತು. ಆದರೆ ಅದೇ ಸಮಯಕ್ಕೆ ಕೋವಿಡ್ ವಕ್ಕರಿಸಿತು! ಜಗತ್ತೇ ತಲೆ ಕೆಳಗಾದ ಸಮಯ.
ನಮ್ಮಲ್ಲೂ ಆತಂಕ, ಅನಿಶ್ಚಿತತೆ. ಆದರೂ ಹಿಂದೆ ಸರಿಯದೆ ಮುನ್ನುಗ್ಗಿದೆವು.
ಅಕ್ಟೋಬರ್ 2021. “ಏಕಂ”ನ ಫೈನಲ್ ಕಟ್ ನೋಡಿದೆ. ಖುಷಿ ಆಯಿತು. ಹೆಮ್ಮೆ ಎನಿಸಿತು.
ಇದನ್ನ ಜಗತ್ತಿಗೆ ತೋರಿಸಬೇಕೆನಿಸಿತು. ಅದಾಗಿ ಇಂದಿಗೆ ಬರೋಬ್ಬರಿ ಎರಡೂವರೆ ವರ್ಷಗಳು! “ಏಕಂ”
ಅನ್ನು ಹೊರ ತರಲು ಪಟ್ಟ ಶ್ರಮ ಅಷ್ಟಿಷ್ಟಲ್ಲ! ಎಲ್ಲೆಡೆ ನಿರಾಸೆ. ಅದೇ ನೆಪ. ಅದೇ ಸಬೂಬು| ಯಾವುದೇ
ಕೃತಿಯ ಅರ್ಹತೆಯನ್ನ ನಿರ್ಧರಿಸುವ ಅವಕಾಶ, ಹಾಗು ಹಕ್ಕು. ಪ್ರೇಕ್ಷಕರಿಗಿರಬೇಕು ಎ೦ದು ನಾನು
ಭಾವಿಸುತ್ತೇನೆ.
ಇದನ್ನೂ ಓದಿ: Rakshit Shetty: ಸಿಂಪಲ್ ಸ್ಟಾರ್‌ಗೆ ಇಂದು ಜನುಮದಿನದ ಸಂಭ್ರಮ; ರಕ್ಷಿತ್ ಸಿನಿ ಜರ್ನಿ ಹೀಗಿತ್ತು!
ಹಾಗಾಗಿ, “ಏಕಂ” ಅನ್ನು ನಾವು ನಮ್ಮದೇ ಆದ ವೇದಿಕೆಯಲ್ಲಿ ನಿಮ್ಮ ಮುಂದೆ ತರಲು ನಿಶ್ಚಯಿಸಿದ್ದೇವೆ.
‘ಏಕಂ” ನಿಮಗೆ ಇಷ್ಟವಾಗಬಹುದು. ಇಷ್ಟವಾಗದೇ ಇರಬಹುದು. ಆದರೆ ಈ ಪ್ರಯತ್ನವನ್ನು
ನಿರ್ಲಕ್ಷಿಸುವಂತಿಲ್ಲ ಎ೦ಬುದನ್ನು ನಾನು ಬಲವಾಗಿ. ನಂಬಿದ್ದೇನೆ. “ಏಕಂ” ಒಂದು ಶ್ಲಾಘನೀಯ ಪ್ರಯತ್ನ.
ಇದನ್ನು ನಾವು ಎಷ್ಟು ಪ್ರೀತಿಯಿಂದ ಮಾಡಿದ್ದೇವೋ, ಅಷ್ಟೇ ಪ್ರೀತಿಯಿಂದ ನೀವು ನಮ್ಮ ಈ ಪ್ರಯತ್ನವನ್ನ
ಸ್ವೀಕರಿಸುತ್ತೀರಿ ಎಂದು ಆಶಿಸುತ್ತೇನೆʼʼಎಂದು ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ. ಇನ್ನು ಪೋಸ್ಟರ್ ಮಾಹಿತಿ ಪ್ರಕಾರ ಈ ಸಿರೀಸ್ ಜುಲೈ 13ರಂದು www.ekamtheseries.comನಲ್ಲಿ ರಿಲೀಸ್ ಆಗಲಿದೆ.
ರಿಚರ್ಡ್ ಆ್ಯಂಟನಿ’ ಸಿನಿಮಾ ಸೇರಿದಂತೆ ರಕ್ಷಿತ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟನೆ, ನಿರ್ದೇಶನ ಮತ್ತು ನಿರ್ಮಾಣ ಅಂತ ನಟ ತೊಡಗಿಸಿಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಪಾರ್ಟ್ ʻಎʼ ಹಾಗೂ ʻಬಿʼ ಕಳೆದ ವರ್ಷ ರಿಲೀಸ್ ಆಗಿತ್ತು. ಇದೀಗ ರಿಚರ್ಡ್ ಆಂಟನಿ ಹಾಗೂ ‘ಪುಣ್ಯಕೋಟಿ ಸಿನಿಮಾಗಳನ್ನು ರಕ್ಷಿತ್ ನಿರ್ದೇಶನ ಮಾಡುತ್ತಿದ್ದಾರೆ. ನನ್ನ ಮುಂದಿನ ಎರಡು ಸಿನಿಮಾಗಳಿಗೆ (ʻರಿಚರ್ಡ್ ಆಂಟನಿ’ ಹಾಗೂ ‘ಪುಣ್ಯಕೋಟಿ’) ಪರಶುರಾಮ ಹಾಗೂ ಆತನ ಕೊಡಲಿಯೇ ಸ್ಫೂರ್ತಿ. ಈ ಕಥೆ ಜತೆ ಹೀಗಾಗಲೇ 4 ವರ್ಷ ಕಳೆದಿದ್ದೇನೆ. ಇನ್ನೂ ನಾಲ್ಕು ವರ್ಷ ಕಳೆಯೋದು ಇದೆ ಅನಿಸುತ್ತಿದೆ ಎಂದು ರಕ್ಷಿತ್ ಶೆಟ್ಟಿ ಈ ಹಿಂದೆ ಹೇಳಿಕೊಂಡಿದ್ದರು.
ರಿಚರ್ಡ್ ಆಂಟನಿ ಜತೆಗೆ ರಕ್ಷಿತ್ ಶೆಟ್ಟಿ ಹಲವು ಯೋಜನೆಗಳನ್ನು ಹೊಂದಿದ್ದಾರೆ. ಈ ಬಗ್ಗೆ ಈ ಹಿಂದೆ ಅವರು ಟ್ವೀಟ್ ಹಂಚಿಕೊಂಡಿದ್ದರು. ʻʻಸಪ್ತ ಸಾಗರದಾಚೆ ಎಲ್ಲೋ ನಂತರ ನನ್ನ ಲೈನ್ ಅಪ್‌ಗಳು ಸಾಕಷ್ಟು ಸ್ಪಷ್ಟವಾಗಿವೆ. ಅಂದರೆ ರಿಚರ್ಡ್ ಆಂಟನಿ, ಪುಣ್ಯ ಕೋಟಿ 1 (PK 1), ಪುಣ್ಯ ಕೋಟಿ 2 (PK 2), (RA), PK 1 ಮತ್ತು 2,ಮಿಡ್ನೈಟ್ ಟು ಮೋಕ್ಷ (M2M) ಇವುಗಳು ನನಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡುವ ನಾಲ್ಕು ಚಲನಚಿತ್ರಗಳಾಗಿವೆ. ಆದರೆ ಕಿರಿಕ್ ಪಾರ್ಟಿ 2 (KP2) ಗಾಗಿ ನಾನು ವಿಭಿನ್ನ ಯೋಜನೆಗಳನ್ನು ಹೊಂದಿದ್ದೇನೆʼʼ ಎಂದಿದ್ದರು.