Site icon Vistara News

Ranganayaka Song: ರಂಗನಾಯಕ ಹಾಡಲ್ಲಿ ಮೀಟೂ ‘ಶ್ರುತಿ’ ಮೀಟಿದ ಗುರುಪ್ರಸಾದ್​​ ವಿರುದ್ಧ ಆಕ್ರೋಶ

Ranganayaka Song Controversy Guru Prasadh About Me too Shruthi

ಬೆಂಗಳೂರು: ನಟಿ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿ ಕೆಲ ವರ್ಷಗಳ ಹಿಂದೆ ಈ ಪ್ರಕರಣ ಕೋರ್ಟ್ ಮೆಟ್ಟಿಲನ್ನೂ ಹತ್ತಿತ್ತು. ಇದೀಗ ʻಮಠʼ ಸಿನಿಮಾ ಖ್ಯಾತಿಯ ಗುರುಪ್ರಸಾದ್ ತಮ್ಮ ಮುಂಬರುವ ಸಿನಿಮಾದಲ್ಲಿ ʻಬಿಗ್‌ಬಾಸ್ ಶ್ರುತಿʼ, ʻಮಿಟೂ ಶ್ರುತಿʼ ಎನ್ನುವ ಸಾಲುಗಳನ್ನು ಬಳಕೆ ಮಾಡಿದ್ದು, ಇದೀಗ ವಿವಾದ ಸೃಷ್ಟಿಸಿದೆ. ಗುರುಪ್ರಸಾದ್ ಹಾಗೂ ನವರಸ ನಾಯಕ ಜಗ್ಗೇಶ್ ಜೋಡಿಯ ‘ರಂಗನಾಯಕ’ ಸಿನಿಮಾ (Ranganayaka Song) ಬಿಡುಗಡೆಗೆ ಸಜ್ಜಾಗುತ್ತಿದೆ.

‘ರಂಗನಾಯಕ’ ಸಿನಿಮಾದ ‘ಗಾಳಿ ತಂಗಾಳಿ’ ಸಾಂಗ್‌ ಬಿಡುಗಡೆಯಾಗಿದೆ. ಶಾರದಾಸುತ ಸಾಹಿತ್ಯ, ಅನೂಪ್ ಸಿಳೀನ್ ಮ್ಯೂಸಿಕ್ ಇದೆ. ಈ ಹಾಡಿನಲ್ಲಿ ಬಿಗ್‌ಬಾಸ್ ಶ್ರುತಿ, ಮೀಟೂ ಶ್ರುತಿ ಎನ್ನುವ ಸಾಲುಗಳನ್ನು ಬಳಕೆ ಮಾಡಿದ್ದಾರೆ. ಈ ಸಾಲಿನ ಬಗ್ಗೆ ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದೀಗ ಮಾಧ್ಯಮವೊಂದರ ಸಂದರ್ಶನದಲ್ಲಿ ಗುರುಪ್ರಸಾದ್‌ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಗುರುಪ್ರಸಾದ್‌ ಮಾತನಾಡಿ ʻʻಶ್ರುತಿ ಹರಿಹರನ್ ಮೂಲ ಕನ್ನಡವಲ್ಲ. ಎಲ್ಲಿಂದಲೋ ಬಂದು ಕನ್ನಡದಲ್ಲಿ ರಾಡಿ ಎಬ್ಬಿಸಿದರು. ಆ ಘಟನೆಗಳ ಸಂಪೂರ್ಣ ಮಾಹಿತಿ ನನಗೆ ಗೊತ್ತು. ಸೀಕ್ರೆಟ್ ಗೊತ್ತಿತ್ತು. ಹಾಗಾಗಿ ನನಗೆ ಕೋಪ ಇತ್ತು. ತೀರಿಸಿಕೊಳ್ಳಲು ಒಂದು ಅವಕಾಶ ಬೇಕಿತ್ತು. ನನ್ನ ಮಾಧ್ಯಮ ಸಿನಿಮಾ. ಹೇಳಬೇಕಿತ್ತು. ಹಾಗಾಗಿ ಮೀಟೂ ಶ್ರುತಿ ಬಳಕೆ ಮಾಡಿದ್ದೇವೆ. ಬೇಕು ಎಂದೇ ತಂದಿದ್ದೇವೆʼʼಎಂದರು.

ಇದನ್ನೂ ಓದಿ: Me too case:‌ ಮೀಟೂ ಪ್ರಕರಣದಲ್ಲಿ ನಟಿ ಶೃತಿ ಹರಿಹರನ್‌ಗೆ ನೋಟಿಸ್‌

ʻʻಮೀಟೂ ಪ್ರಪಂಚದಲ್ಲಿ ಇಲ್ಲದೇ ಇರೋದಾ?ಕನ್ನಡ ಚಿತ್ರರಂಗದಲ್ಲಿ ಮಾತ್ರವಾ?ಗಂಡು ಹೆಣ್ಣು ಆತ್ಮೀಯವಾಗಿ ಒಪ್ಪಿಕೊಂಡು ಅವರಿಬ್ಬರು ಏನಾದರೂ ವ್ಯವಸ್ಥೆ ಮಾಡಿಕೊಂಡರೆ ಮುಗೀತು. ಸುಪ್ರೀಂ ಕೋರ್ಟ್ ಓಕೆ ಮಾಡಿದೆ. ಸುಪ್ರೀಂ ಕೋರ್ಟ್‌ಗಿಂತ ದೊಡ್ಡವರು ಯಾರಿದ್ದಾರೆ?” ಶ್ರುತಿ ಕನ್ನಡದವರಲ್ಲ. ತಾನು ಏನೋ ಪತಿವ್ರತೆ ಎನ್ನುವುದು ಪ್ರೂವ್‌ ಮಾಡಕ್ಕೆ ಹೊರಟ್ಟಿದ್ದರು ಆಕೆʼʼಎಂದರು.

“ಮೀಟೂ ಶ್ರುತಿ ಅಂತ ಒಬ್ಬ ಹುಡುಗಿ ಇದ್ದಾಳೆ. ಅವಳು ಕನ್ನಡದ ನೆಲದಲ್ಲಿ ರಾಡಿ ಎಬ್ಬಿಸಿದಳು. ನಮಗೆ ಬೇಕಿರುವ ಸಿನಿಮಾ ನಾವು ಮಾಡಿಕೊಳ್ತೀವಿ. ಆಕೆ ತಮಿಳು ನಾಡಿನವಳೋ, ಮಲಯಾಳಂನವಳೊ ನನಗೆ ಗೊತ್ತಿಲ್ಲ. ಅಲ್ಲಿನವರು ಬಂದು ಹಾಗೆ ಮಾತನಾಡಿದ್ದು ಯಾಕೆ ಎನ್ನುವುದು ಗೊತ್ತಿಲ್ಲ”ಎಂದರು. ಇದೀಗ ಗುರುಪ್ರಸಾದ್‌ ಅವರ ಹೇಳಿಕೆಗೆ ಭಾರಿ ಆಕ್ರೋಶ ಹೊರಹಾಕುತ್ತಿದ್ದಾರೆ ನೆಟ್ಟಿಗರು.

Exit mobile version