Site icon Vistara News

Ranganayaka Twitter Review: ತಲೆ ಹೊರಗೂ ಖಾಲಿ, ಒಳಗೂ ಖಾಲಿ! ʻರಂಗನಾಯಕʼ ಚಿತ್ರಕ್ಕೆ ನೆಟ್ಟಿಗರ ಪ್ರತಿಕ್ರಿಯೆ ಇದು!

Ranganayaka Twitter Review audiences reacts

ಬೆಂಗಳೂರು: ಮಾ.8ರಂದು ಗುರುಪ್ರಸಾದ್ ಹಾಗೂ ನವರಸ ನಾಯಕ ಜಗ್ಗೇಶ್ ಜೋಡಿಯ ‘ರಂಗ ನಾಯಕ’ ಸಿನಿಮಾ (Ranganayaka Twitter Review) ತೆರೆ ಕಂಡಿತು. ಆದರೆ ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲವಾಗಿದೆ. ‘ಮಠ’ ಹಾಗೂ ‘ಎದ್ದೇಳು ಮಂಜುನಾಥ’ ಸಿನಿಮಾ ಬಳಿಕ ಅದೇ ಕಾಂಬಿನೇಷನ್‌ 3ನೇ ಸಿನಿಮಾ ಇದು. ಭಾರಿ ನಿರೀಕ್ಷೆ ಹೊತ್ತಿದ್ದ ಜಗ್ಗು ಫ್ಯಾನ್ಸ್‌ಗೆ ಬೇಸರವಾಗಿದೆ. ಮಾತ್ರವಲ್ಲ ʻಮಠʼ, ʻಎದ್ದೇಳು ಮಂಜುನಾಥʼ ಇನ್ನೊಂದು ಬಾರಿ ರಿ ರಿಲೀಸ್‌ ಮಾಡಿ,‌ ನೋಡ್ತಿವಿ. ಆದರೆ ರಂಗನಾಯಕ ತರಹದ ಚಿತ್ರ ಮಾಡಬೇಡಿʼʼ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರವೀಣ್ ಶಂಕರ್ ಎಕ್ಸ್‌ನಲ್ಲಿ ಸಿನಿಮಾ ಬಗ್ಗೆ ʻʻನಿಜಕ್ಕೂ ಬೇಕಿದ್ದರೆ ʻಮಠʼ, ʻಎದ್ದೇಳು ಮಂಜುನಾಥʼ ಇನ್ನೊಂದು ಬಾರಿ ರಿ ರಿಲೀಸ್‌ ಮಾಡಿ,‌ ನೋಡ್ತಿವಿ. ಆದರೆ ರಂಗನಾಯಕ ರೀತಿಯ ಚಿತ್ರ ಮಾಡಬೇಡಿ, ಗುರು-ಜಗ್ಗೇಶ್ ಮತ್ತೆ ಒಂದಾಗಿ ಚಿತ್ರ ಮಾಡ್ತಾರೆ ಅಂತ ಕಾದು ಕುಳಿತವರಿಗೆ ದೊಡ್ಡ ಮೋಸ.‌ ನಿರೀಕ್ಷೆಯ ಆ ಕನಸೇ ಚೆನ್ನಾಗಿತ್ತು. ಆದರೆ ಭಾರಿ ನಿರಾಸೆಯಾಯಿತುʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Ranganayaka Song: ರಂಗನಾಯಕ ಹಾಡಲ್ಲಿ ಮೀಟೂ ‘ಶ್ರುತಿ’ ಮೀಟಿದ ಗುರುಪ್ರಸಾದ್​​ ವಿರುದ್ಧ ಆಕ್ರೋಶ

ಮತ್ತೊಬ್ಬರು ʻಪ್ರೇಕ್ಷಕ ಗುರುಪ್ರಸಾದ್ ಅವರು ನಿರ್ದೇಶಕ ಗುರುಪ್ರಸಾದ್ ಅವರ ‘ರಂಗನಾಯಕ’ ಚಿತ್ರ ಥಿಯೇಟರ್‌ ಅಲ್ಲಿ ನೋಡಿದ್ರೆ ಅವರಿಗೆ ಅವರೇ ಹೇಳಿಕೊಳ್ಳಬಹುದಾದ ಮಾತು, ತಲೆ ಹೊರಗೂ ಖಾಲಿ, ತಲೆ ಒಳಗೂ ಖಾಲಿʼʼ ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬರು ʻʻಜಗ್ಗೇಶ್‌ ಅವರೇ, ನೀವು ನೆನಪಿಟ್ಟುಕೊಳ್ಳಬೇಕಾದ ಅಂಶವೆಂದರೆ ನೀವು ಸಂಸದರು ಮತ್ತು ಹಿರಿಯ ನಟರು. ಕರ್ನಾಟಕದ ಜನರಿಗೆ ಮಾದರಿ ಆಗಬೇಕು ನೀವು. ರಂಗನಾಯಕ, ತೋತಾಪುರಿಯಂತಹ ವಯಸ್ಕ ಹಾಸ್ಯಗಳನ್ನು ಮಾಡುವ ಬದಲು ಮುಂಬರುವ ಚಲನಚಿತ್ರಗಳಿಗೆ ಉತ್ತಮ ಸ್ಕ್ರಿಪ್ಟ್‌ಗಳನ್ನು ಆರಿಸಿʼʼ ಎಂದು ಬರೆದುಕೊಂಡಿದ್ದಾರೆ.

ಇನ್ನು ಹಬ್ಬದ ಸಂದರ್ಭದಲ್ಲಿ ಯಾಕೋ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಸಿನಿಮಾ ಪ್ರೇಕ್ಷಕರ ಬರ ಎದುರಿಸುತ್ತಿದೆ. ಈಗಾಗಲೇ ಜೀ ಸ್ಟುಡಿಯೋಸ್‌ ಸಿನಿಮಾದ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ವಿಖ್ಯಾತ್‌ ಚಿತ್ರ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಎ.ಆರ್‌.ವಿಖ್ಯಾತ್‌ ಸಿನಿಮಾ ನಿರ್ಮಾಣ ಮಾಡಿದೆ.

Exit mobile version