ಬೆಂಗಳೂರು: ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯ ಸಂದರ್ಭದಲ್ಲೇ ತಮ್ಮ ಮದುವೆ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಡಿಲಿಟ್ ಮಾಡಿದ್ದಾರೆ. ಎಲ್ಲವೂ ಸರಿಯಿರುವಾಗಲೇ ರಣ್‌ವೀರ್ ಸಿಂಗ್ ಯಾಕೆ ಈ ನಿರ್ಧಾರ ತೆಗೆದುಕೊಂಡರು? ದಿಢೀರನೇ ಫೋಟೊಗಳನ್ನು ತೆಗೆದು ಹಾಕಿದ್ದು ಯಾಕೆ? ಈ ಎಲ್ಲಾ ಪ್ರಶ್ನೆ ಈಗ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿವೆ.
ದೀಪಿಕಾ ಹಾಗೂ ರಣವೀರ್ 2018ರಲ್ಲಿ ದೂರದ ಇಟಲಿಯಲ್ಲಿ ವಿವಾಹ ಆದರು. ಕೊಂಕಣಿ ಹಾಗೂ ಸಿಂಧಿ ಶೈಲಿಯಲ್ಲಿ ಇವರ ವಿವಾಹ ನಡೆಯಿತು. ಆ ಬಳಿಕ ಇವರು ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದರು. ಕಳೆದ ವರ್ಷ ಕರಣ್ ಜೋಹರ್ ಶೋನಲ್ಲಿ ಮದುವೆ ವಿಡಿಯೋ ರಿಲೀಸ್ ಮಾಡಿದ್ದರು. ಇದರಿಂದ ರಣವೀರ್ ಸಿಂಗ್ ಹಾಗೂ ದೀಪಿಕಾ ಮಧ್ಯೆ ಏನಾದರೂ ಗಂಭೀರ ಜಗಳ ಆಯಿತೇ ಎನ್ನುವ ಅನುಮಾನ ಮೂಡಿದೆ.
ತಾಯಿಯಾಗಲಿರುವ ದೀಪಿಕಾ ಪಡುಕೋಣೆ ( Deepika Padukone) ಸದ್ಯ `ಸಿಂಗಂ ಅಗೇನ್’ ಚಿತ್ರದ ಶೂಟಿಂಗ್ ನಲ್ಲಿದ್ದಾರೆ. ʻಸಿಂಗಂ ಅಗೇನ್ʼ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಹಲವು ಪ್ರಮುಖ ನಟರು ಇದ್ದಾರೆ. ಲೇಡಿ ಸಿಂಗಮ್ ಚಿತ್ರದಲ್ಲಿ ಅಜಯ್ ದೇವಗನ್ ಅವರ ಸಹೋದರಿ ಪಾತ್ರವನ್ನು ನಿರ್ವಹಿಸಲಿದ್ದಾರೆʼʼಎನ್ನಲಾಗಿತ್ತು.ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಪರಸ್ಪರ ಪ್ರೀತಿ ಮದುವೆ ಆಗಿದ್ದು 2018ರಲ್ಲಿ.
ಇದನ್ನೂ ಓದಿ: Ranveer Singh: ಕಾಂಗ್ರೆಸ್ ಪರ ರಣವೀರ್ ಸಿಂಗ್ ಪ್ರಚಾರ? ಕೇಸ್ ದಾಖಲು
ಆರು ವರ್ಷಗಳ ಬಳಿಕ ಅವರು ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಫೈಟರ್‌ನಲ್ಲಿ ಹೃತಿಕ್ ರೋಷನ್ ಜತೆಗೆ ಕೊನೆಯದಾಗಿ ಕಾಣಿಸಿಕೊಂಡ ದೀಪಿಕಾ, ಸದ್ಯ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ.
ಈ ಮೊದಲೇ ವದಂತಿಗಳು ಹಬ್ಬಿದ್ದವು
ದಿ ವೈಟ್ ಲೋಟಸ್ ಸೀಸನ್ 3 ರಿಂದ ದೀಪಿಕಾ ಹೊರಗುಳಿದಿದ್ದಾರೆ ಎಂದು ವರದಿಯಾದ ಕೆಲವೇ ದಿನಗಳಲ್ಲಿ ದೀಪಿಕಾ ಗರ್ಭಿಣಿಯಾಗಿರುವ ಸುದ್ದಿ ಹೊರಬಂದಿತ್ತು. ಎಚ್‌ಒಬಿಯ ಅತ್ಯಂತ ಜನಪ್ರಿಯ ಶೋ ಆಗಿರುವ ದಿ ವೈಟ್ ಲೋಟಸ್ ಸೀಸನ್ 3ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ, ವಾರಾಂತ್ಯದಲ್ಲಿ ದೀಪಿಕಾ ಕಾರ್ಯಕ್ರಮದಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿತ್ತು.
ದೀಪಿಕಾ ಗರ್ಭಿಣಿಯಾಗಿದ್ದಾರೆಂಬ ವದಂತಿಗಳಿಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ‘ಫೈಟರ್’ ಚಿತ್ರದ ಪ್ರಚಾರದ ಫೋಟೋಗಳನ್ನು ದೀಪಿಕಾ ಹಂಚಿಕೊಂಡಾಗ, ಅಭಿಮಾನಿಗಳು ಹೊಟ್ಟೆ ಉಬ್ಬಿರುವುದನ್ನು ಅನ್ನು ಗಮನಿಸಿದ್ದರು. ಅಲ್ಲದೇ, ಕಮೆಂಟ್ ವಿಭಾಗದಲ್ಲಿ ಗರ್ಭಿಣಿಯೇ ಎಂಬ ಪ್ರಶ್ನೆಗಳು ತುಂಬಿದ್ದವು.
ಈ ವರ್ಷದ ಆರಂಭದಲ್ಲಿ ದೀಪಿಕಾ ರಣವೀರ್ ಜತೆ ಮಕ್ಕಳನ್ನು ಹೊಂದಲು ಬಯಸುವುದಾಗಿ ಹೇಳಿದ್ದರು. ಪತ್ರಿಕೆಯೊಂದಿಗೆ ಮಾತನಾಡಿದ್ದ ದೀಪಿಕಾ, “ಖಂಡಿತವಾಗಿಯೂ. ರಣವೀರ್ ಮತ್ತು ನಾನು ಮಕ್ಕಳನ್ನು ಪ್ರೀತಿಸುತ್ತೇವೆ. ನಾವು ನಮ್ಮ ಸ್ವಂತ ಕುಟುಂಬವನ್ನು ಪ್ರಾರಂಭಿಸುವ ದಿನಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದ್ದರು.