Site icon Vistara News

Actor Ravichandran: ಜೇಬು, ಹೃದಯ ಎರಡೂ ಖಾಲಿ: ಬದುಕಿಗೆ ಸಮಾಧಾನ ಬೇಕು ಎಂದ ರವಿಚಂದ್ರನ್‌!

ravichandran revealed he lost 10 crore in shanthi kranthi

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ರವಿಚಂದ್ರನ್‌ (Actor Ravichandran) ಅವರು  ನಿರ್ಮಾಪಕನಾಗಿ, ನಟನಾಗಿ ಎಲ್ಲ ರೀತಿಯಲ್ಲಿ ಯಶಸ್ವು ಗಳಿಸಿದ್ದಾರೆ. ಕೊಪ್ಪಳದ ‘ಕನಕಗಿರಿ ಉತ್ಸವ’ದಲ್ಲಿ ರವಿಚಂದ್ರನ್ ಅವರು ಸಿನಿಮಾ ಜರ್ನಿ ಹೀಗೆ ಹಲವಾರು ವಿಚಾರಗಳನ್ನು ಹಂಚಿಕೊಂಡರು. ಇಂದು ಜೇಬು ಹಾಗೂ ಹೃದಯ ಎರಡೂ ಖಾಲಿ ಆಗಿದೆ ಎಂದರು ರವಿಚಂದ್ರನ್. ಮಾತ್ರವಲ್ಲ ʻಬದುಕಲು ನೂರಾರು ವಿಧಾನ ಇದೆ. ಆದರೆ ಅದರಲ್ಲಿ ತುಂಬ ಶ್ರೇಷ್ಠ ಅಂದರೆ ʻನಿಧಾನʼ. ನಿಲ್ದಾಣಕ್ಕೆ ತಲುಪುವಾಗ ತುಂಬ ಸಮಾಧಾನದಿಂದ ತಲುಪಬೇಕುʼ ಎಂದರು.

ನಂಗೆ ಬೇಕಾಗಿರೋದು ಪ್ರೀತಿ ಒಂದೆ

ʻʻಸಿನಿಮಾ ರಂಗದಲ್ಲಿ 60 ವರ್ಷ ದುಡಿದೆ. 60 ವರ್ಷದಿಂದ ಸಿನಿಮಾ ಒಂದೇ ಮಾಡಿಕೊಂಡು ಬಂದೆ. ನನಗೆ ಸಿನಿಮಾ ಮಾಡುವುದು ಒಂದೇ ಗೊತ್ತೇ ಇರೋದು. ಜೇಬು ತುಂಬಿಸಿಕೊಳ್ಳಬೇಕು ಎಂದು ಸಿನಮಾ ಮಾಡೇ ಇಲ್ಲ. ಇಂದು ಜೇಬು ಹಾಗೂ ಹೃದಯ ಎರಡೂ ಖಾಲಿ ಆಗಿದೆ. ನಂಗೆ ನನ್ನ ತಂದೆ ತಾಯಿ ರಾಜನಾಗಿ ಬೆಳೆಸಿದ್ರು. ಇಂದು ಏನು ಕಳೆದುಕೊಂಡೆ ಅಂದರೆ ಅವರ ಪ್ರೀತಿ. ದುಡ್ಡನ್ನು ಕಳೆದುಕೊಂಡೆ ಎನ್ನುವ ಬೇಜಾರು ನನಗೆ ಇಲ್ಲ. ನೀವು ನನ್ನನ್ನು ನೋಡಿ ಖುಷಿ ಪಟ್ಟಾಗ ನನ್ನ ತಂದೆ ತಾಯಿಯನ್ನು ನೋಡ್ತೀನಿ. ಬದುಕಲು ನೂರಾರು ವಿಧಾನ ಇದೆ. ಆದರೆ ಅದರಲ್ಲಿ ತುಂಬ ಶ್ರೇಷ್ಠ ಅಂದರೆ ನಿಧಾನ. ನಿಲ್ದಾಣಕ್ಕೆ ತಲುಪುವಾಗ ತುಂಬ ಸಮಾಧಾನದಿಂದ ತಲುಪಬೇಕು. ನಾನು ಇದನ್ನು ಇಷ್ಟೂ ವರ್ಷ ಆದಮೇಲೆ ಕಲಿತಾ ಇದ್ದಿದ್ದುʼʼಎಂದರು.

ನನ್ನ ವೇಗ ತಡೆಯಲು ಆಗ್ತಾ ಇರಲಿಲ್ಲ

86ರಲ್ಲಿ ನನ್ನ ವೇಗ ತಡೆಯಲು ಆಗ್ತಾ ಇರಲಿಲ್ಲ. ʻಪ್ರೇಮಲೋಕʼ, ʻರಣಧೀರʼ, ʻಶಾಂತಿ ಕ್ರಾಂತಿʼ ಹೀಗೆ ಸಿನಿಮಾಗಳನ್ನು ಮಾಡಿದೆ. ಯಾಕೋ ಸರಿ ಹೋಗುತ್ತಿಲ್ಲ. ದಾರಿ ತಪ್ಪುತ್ತಿದೆ ಎಂದು ಗೊತ್ತಾಗುತ್ತೆ. ಆ ನಮ್ಮ ಅಪ್ಪನ ಬಳಿ ಹೋಗಿ ಈ ಸಿನಿಮಾ ಬೇಡ ನಿಲ್ಲಿಸಿಬಿಡೋಣ ಎನ್ನುತ್ತೇನೆ. ಅವರು ಯಾವತ್ತೂ ಜನರಿಗೆ ಮೋಸ ಮಾಡೋದು ಬೇಡ. ನಾಲ್ಕು ಭಾಷೆಯ ಸಿನಿಮಾ ನೀನೆ ಮೊದಲು ಮಾಡುತ್ತಿದ್ದೀಯ. ನಿನ್ನ ನಂಬಿ ರಜನಿಕಾಂತ್ ಡೇಟ್ ಕೊಟ್ಟಿದ್ದಾರೆ. ನಾಗಾರ್ಜುನಾ ಡೇಟ್ ಕೊಟ್ಟಿದ್ದಾರೆ. ಇದು ಈಶ್ವರಿ ಸಂಸ್ಥೆಯ ಪ್ರೆಸ್ಟೀಜ್. ಯಾವುದೇ ಕಾರಣಕ್ಕೂ ನೀನು ಹೆಜ್ಜೆ ಹಿಂದೆ ಹಾಕೋದಿಲ್ಲʼʼ ಅಂದರು.

ಇದನ್ನೂ ಓದಿ: Actor Ravichandran: ಪ್ರೇಮಲೋಕ 2 : ಸಿನಿಮಾದಲ್ಲಿ ಎಲ್ಲರಿಗೂ ನಟಿಸೋ ಅವಕಾಶ ಇದೆ ಎಂದ ರವಿಚಂದ್ರನ್‌!

10 ಕೋಟಿ ರೂ. ಕಳೆಯುತ್ತೇನೆ

ʻʻಸಿನಿಮಾ ಅಂತೂ ಮುಗಿಸಿದೆ. ಒಂದು ಸಿನಿಮಾದಲ್ಲಿ ನಾನು 10 ಕೋಟಿ ರೂ. ಕಳೆಯುತ್ತೇನೆ. ನನ್ನ ತಂದೆಗೆ ಸಿನಿಮಾ ತೋರಿಸಿದಾಗ ಆರೋಗ್ಯ ಸರಿಯಿರಲಿಲ್ಲ. ಅವರು ಆಸ್ಪತ್ರೆಯ ಬೆಡ್ ಮೇಲೆ ಇದ್ದರು. ಆಗ ಸ್ಟ್ರೆಚರ್‌ನಲ್ಲೇ ಅವರನ್ನು ಕರೆದುಕೊಂಡು ಹೋಗಿ ಸಿನಿಮಾ ತೋರಿಸಿದ್ದೆ. ಸಿನಿಮಾ ಹೇಗಿದೆ? ಎಂದು ಕೇಳಿದರು. ಸುಮಾರಿಗಿದೆ ಎಂದೆ. ಆಗ ನಿನ್ನ ತಪ್ಪು ನಿನಗೆ ಗೊತ್ತಾದರೆ ಸಾಕು. ಮುಂದೆ ಬೆಳೆಯುತ್ತೀಯಾ ಎಂದರು. ಆದರೆ, ಶಾಂತಿ ಕ್ರಾಂತಿ ಸೋಲಿನ ಕೊರಗಲ್ಲಿ ನಮ್ಮ ಅಪ್ಪ ತೀರಿಕೊಳ್ಳುವುದು ಇಷ್ಟವಿರಲಿಲ್ಲ. ನನ್ನ ಗೆಲುವನ್ನು ತೋರಿಸಿ ಕಳಿಸಿಕೊಡಬೇಕು ಅಂತ ರಾಮಚಾರಿ ಸಿನಿಮಾ ಮಾಡಿದೆʼʼ ಎಂದು ರವಿಚಂದ್ರನ್ ಹೇಳಿಕೊಂಡಿದ್ದಾರೆ.

Exit mobile version