Site icon Vistara News

Ravike Prasanga: ‘ರವಿಕೆ ಪ್ರಸಂಗ’ ತೆರೆಗೆ; ಪ್ರೇಕ್ಷಕರಿಂದ ಮೆಚ್ಚುಗೆ

Ravike Prasanga Review social media

ಬೆಂಗಳೂರು: ಸಂತೋಷ್ ಕೊಡಂಕೇರಿ ನಿರ್ದೇಶನದ `ರವಿಕೆ ಪ್ರಸಂಗ’ (Ravike Prasanga) ಫೆ.16ರಂದು ಶುಕ್ರವಾರ ತೆರೆಕಂಡಿದೆ. ಈ ಸಿನಿಮಾದಲ್ಲಿ ಮದುವೆಯ ಸುತ್ತಲಿನ ಜಂಜಾಟ, ಬಾಡಿ ಶೇಮಿಂಗ್‌ ಇದೆಲ್ಲವನ್ನೂ ಒಳಗೊಂಡ ಸಿನಿಮಾವಾಗಿದೆ. ಇದೀಗ ಸಿನಿಮಾ ನೋಡಿ ಪ್ರೆಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ರವಿಕೆ ಮೇಲೆ ಪ್ರೀತಿ. ಅದರ ಅಳತೆ ಸರಿಯಾಗಿರಬೇಕು ಎಂದು ಸಾಕಷ್ಟು ಸಲ ಟೈಲರ್ ಜತೆ ಚರ್ಚಿಸುತ್ತಾರೆ. ಈ ರೀತಿ ಮಹಿಳೆ ಹಾಗೂ ಟೈಲರ್ ನಡುವೆ ರವಿಕೆಗಾಗಿ ನಡೆಯುವ ಮುಖ್ಯ ವಿಷಯವೇ “ರವಿಕೆ ಪ್ರಸಂಗ”. ಸಂಭಾಷಣೆ ಮಂಗಳೂರು ಕನ್ನಡದಲ್ಲಿದೆ. ʻಸುಂದರ ಕೌಟುಂಬಿಕ ಕಥಾಹಂದರ ಹೊಂದಿರುವ ಸಾನ್ವಿಯಾಗಿ ಗೀತಾ ಭಾರತಿ ಭಟ್ ಅಭಿನಯದ, ದೃಷ್ಟಿ ಸಂಸ್ಥೆಯ ನಿರ್ಮಾಣದಲ್ಲಿ ಮೂಡಿಬಂದಿರುವ ಕನ್ನಡದ ಹೊಸ ಮನರಂಜನಾತ್ಮಕ ಚಿತ್ರ “ರವಿಕೆ ಪ್ರಸಂಗ”ಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ʻದಕ್ಷಿಣ ಕನ್ನಡದ ಭಾಷೆ, ಸಂಸ್ಕೃತಿ ಮತ್ತು ಜೀವನ ಶೈಲಿಯ ಸಾರದೊಂದಿಗೆ ಸೊಗಸಾಗಿ ಮೂಡಿ ಬಂದಿದೆʼʼ ಎಂದು ಒಬ್ಬರು ಟ್ವೀಟ್‌ ಮಾಡಿದ್ದಾರೆ. ʻವಿವಾಹದ ಸುತ್ತ ಉಂಟಾಗುವ ಕೌಟುಂಬಿಕ ಒತ್ತಡ ಹೀಗೆ ಅನೇಕ ವಿಚಾರಗಳ ಸಂದೇಶವಿದೆʼʼ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ನ್ಯಾಯಾಧೀಶೆಯ ಪಾತ್ರದಲ್ಲಿ ಸುಮನ್ ರಂಗನಾಥ್‌ ಕಾಣಿಸಿಕೊಂಡಿದ್ದಾರೆ. ’ಸಾನ್ವಿ’ ಪಾತ್ರಕ್ಕೆ ಗೀತಾ ಭಾರತಿ ಭಟ್ ಜೀವ ತುಂಬಿದ್ದಾರೆ. ರಾಕೇಶ್ ಮಯ್ಯ, ಹನುಮಂತೇಗೌಡ, ಪದ್ಮಜಾ ರಾವ್, ಕೃಷ್ಣಮೂರ್ತಿ ಕವತ್ತಾರ್‌, ಸಂಪತ್ ಮೈತ್ರೇಯ, ಪ್ರವೀಣ್ ಅಥರ್ವ ಮೊದಲಾದವರು ತಾರಾಗಣದಲ್ಲಿದ್ದಾರೆ.

ಇದನ್ನೂ ಓದಿ: Kannada New Movie: ನ್ಯಾಷನಲ್‌ ಇಶ್ಯೂ ʻರವಿಕೆ ಪ್ರಸಂಗʼದ ಟ್ರೈಲರ್‌ ಔಟ್‌!

ವಿನಯ್ ಶರ್ಮ ಸಂಗೀತ ನಿರ್ದೇಶನ, ಮುರಳಿದರ್ ಎನ್ ಛಾಯಾಗ್ರಹಣ ಹಾಗೂ ರಘು ಶಿವರಾಮ್ ಸಂಕಲನವಿರುವ ʻʻರವಿಕೆ ಪ್ರಸಂಗ” ಚಿತ್ರದ ಪೋಸ್ಟರ್‌ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್ ವತಿಯಿಂದ ನಿರ್ಮಾಣವಾಗಿರುವ ಎರಡನೇ ಚಿತ್ರವಿದು. ಶಂತನು ಮಹರ್ಷಿ, ಗಿರೀಶ್ ಗೌಡ, ನಿರಂಜನ್ ಗೌಡ ಹಾಗೂ ಶಿವರುದ್ರಯ್ಯ ಅವರು ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. 

Exit mobile version