Site icon Vistara News

RCB Unbox: ಕಿಚ್ಚ ಸುದೀಪ್ ಯಾಕೆ ಆ ಇಡ್ಲಿ ಬೇಡ ಅಂದ್ರು ಅರ್ಥ ಆಯ್ತಾ?

rcb unbox event 2024 kichcha sudeeps special promo

ಬೆಂಗಳೂರು: ಆರ್‌ಸಿಬಿ ಫ್ರಾಂಚೈಸಿಯು ತನ್ನ ಆರ್‌ಸಿಬಿ ಅನ್‌ಬಾಕ್ಸ್ (RCB Unbox) ಕಾರ್ಯಕ್ರಮದ ಮೊದಲ ಟ್ರೈಲರ್‌ ಬಿಡುಗಡೆ ಮಾಡಿತ್ತು. ಮೊದಲ ಪ್ರೋಮೊದಲ್ಲಿ ರಿಷಬ್​ ಶೆಟ್ಟಿ (Rishabh Shetty) ಕಾಣಿಸಿಕೊಂಡಿದ್ದರು. ಎರಡನೇ ಪ್ರೋಮೊದಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್ (Ashwini Puneeth Rajkumar) ಕಾಣಿಸಿಕೊಂಡಿದ್ದು, ಆರ್​ಸಿಬಿ (RCB) ಹೆಸರು ಬದಲಾವಣೆಯಾಗುವುದು ಖಚಿತ ಎಂಬ ಹಿಂಟ್‌ ಕೊಟ್ಟಿದ್ದರು. ಇದಾದ ಬಳಿಕ ಲಾಂಗ್‌ ಹಿಡಿದು ಶಿವಣ್ಣ ಪ್ರೋಮೊ ಹಂಚಿಕೊಂಡಿದ್ದರು. ಇದೀಗ ಇದೀಗ ಸುದೀಪ್ ಆ ಇಡ್ಲಿ ಬೇಡ ಎಂದು ಹೇಳಿ ಮತ್ತದೇ ಪ್ರಶ್ನೆ ಕೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಬದಲು ಈ ಬಾರಿಯ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಗಿ ಬದಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆರ್​ಸಿಬಿ ತನ್ನ ಅಭಿಯಾನ ಆರಂಭಿಸುವ ಮುನ್ನ ಪೂರ್ವಭಾವಿಯಾಗಿ ಅಭಿಮಾನಿಗಳಿಗಾಗಿ ಈ ಸಲವೂ ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಕಳೆದೆರಡು ವರ್ಷಗಳಿಂದ ಆರ್​ಸಿಬಿ ಅನ್​ಬಾಕ್ಸ್​(RCB’s Unbox Event) ಹೆಸರಿನಲ್ಲಿ ನಡೆಯುತ್ತ ಬಂದಿದೆ. ಅಭಿಮಾನಿಗಳಿಗಾಗಿ ನಡೆಸುವ ಈ ಕಾರ್ಯಕ್ರಮದಲ್ಲಿ ತಂಡದ ಹೊಸ ಜೆರ್ಸಿ ಅನಾವರಣ ಸೇರಿ ಹಲವು ಅಚ್ಚರಿಯನ್ನು ಘೋಷಣೆ ಮಾಡುವುದು ಈ ಕಾರ್ಯಕ್ರಮದ ವಿಶೇಷತೆ. ಈ ಬಾರಿ ಹೆಸರಿನ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: RCB Unbox: ನಮ್ಮ ಶಿವಣ್ಣ ರೊಚ್ಚಿಗೆದ್ದು ಏನ್ ಹೇಳ್ತಿದ್ದಾರೆ ಅರ್ಥ ಆಯ್ತಾ?

ಈ ಬಾರಿ ಮಾರ್ಚ್ 22ರಿಂದ ಮೇ 26ರವರೆಗೆ ಐಪಿಎಲ್ ಟೂರ್ನಿ ನಡೆಯಲಿದೆ. ಮಾರ್ಚ್ 19ಕ್ಕೆ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ಗೆ ವೇದಿಕೆ ಸಜ್ಜಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನ್‌ಬಾಕ್ಸ್ ಈವೆಂಟ್ ಕುರಿತ ಪ್ರೋಮೊದಲ್ಲಿ ಸುದೀಪ್ ಸಹ ಕಾಣಿಸಿಕೊಂಡಿದ್ದಾರೆ. ಹೋಟೆಲ್‌ನಲ್ಲಿ ಕಿಚ್ಚ ಸ್ಟೈಲಿಶ್ ಆಗಿ ಬಂದು ಡೈನಿಂಗ್ ಟೇಬಲ್ ಮೇಲೆ ಕೂತಿದ್ದಾರೆ. ಮೂರು ಇಡ್ಲಿ ಬರತ್ತೆ . ಅದರಲ್ಲಿ ಮೂರನೆ ಇಡ್ಲಿ ಬೇಡ ಎಂದು ಬಳಿಕ ಯಾಕೆ ಅಂತ ಅರ್ಥ ಆಯ್ತಾ ಎಂದು ಕೇಳಿದ್ದಾರೆ.

ದಿವಂಗತ ಪುನೀತ್ ರಾಜ್‌ಕುಮಾರ್ ಅವರು ಆರ್​ಸಿಬಿ ತಂಡದ ಬ್ರ್ಯಾಂಡ್‌ ಅಂಬಾಸಿಡರ್ ಆಗಿದ್ದರು. ಆರ್​ಸಿಬಿ ಮೊದಲ ಪಂದ್ಯವನ್ನು ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಮಾರ್ಚ್​ 22ರಂದು ಆಡಲಿದೆ. ಇದು ಈ ಬಾರಿಯ ಟೂರ್ನಿಯ ಉದ್ಘಾಟನ ಪಂದ್ಯವಾಗಿದೆ. ಉಭಯ ತಂಡಗಳ ಈ ಸೆಣಸಾಟಕ್ಕೆ ಎಂ.ಎ. ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ.

Exit mobile version