Site icon Vistara News

Actor Yash: ಮಲೇಷಿಯಾಗೆ ಹಾರಿದ ʻರಾಕಿಂಗ್‌ ಸ್ಟಾರ್‌’ ಯಶ್‌ʼ: ಫೋಟೊ ವೈರಲ್‌!

Rocking star Yash fly to Malaysia photo viral

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಈಗಾಗಲೇ `ಟಾಕ್ಸಿಕ್‌’ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಈ ಸಿನಿಮಾ ಅಪ್‌ಡೇಟ್‌ಗೆ ಕಾಯುತ್ತಿರುವಾಗಲೇ ‘ರಾಮಾಯಣ’ ಚಿತ್ರದಲ್ಲಿ ರಾವಣನಾಗಿ ಯಶ್ ನಟಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಇದೀಗ ಯಶ್‌ ಅವರು ಏಕಾಏಕಿ ಮಲೇಷಿಯಾ ಫ್ಲೈಟ್ ಏರಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಲು ಯಶ್ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ರಾಕಿ ಭಾಯ್ ಏರ್‌ಪೋರ್ಟ್ ಹಾಗೂ ಮಲೇಷಿಯಾದಲ್ಲಿ ಅಭಿಮಾನಿಗಳ ಜತೆ ಕ್ಲಿಕ್ಕಿಸಿಕೊಂಡಿರುವ ಫೋಟೊಗಳು ವೈರಲ್ ಆಗುತ್ತಿದೆ.

ಬಾಲಿವುಡ್‌ನಲ್ಲಿ ನಿತೇಶ್ ತಿವಾರಿ ರಾಮಾಯಣ ಕಾವ್ಯವನ್ನು ಸಿನಿಮಾ ಮಾಡುವ ಸಾಹಸ ಮಾಡುತ್ತಿದ್ದಾರೆ. ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ರಣ್‌ಬೀರ್ ಕಪೂರ್, ಸೀತಾಮಾತೆಯಾಗಿ ಸಾಯಿ ಪಲ್ಲವಿ ನಟಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಅನಿಲ್ ಕಪೂರ್, ಬಾಬಿ ಡಿಯೋಲ್ ಸೇರಿದಂತೆ ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Actor Yash: ಮತ್ತೊಂದು ಬಾಲಿವುಡ್‌ ಚಿತ್ರದಲ್ಲಿ ಯಶ್‌?

ಕಡೆಗಳಲ್ಲಿ ಚಿತ್ರೀಕರಣ ಆರಂಭ

ಕೆಜಿಎಫ್‌ʼ ಚಿತ್ರದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ ರಾಕಿಂಗ್‌ ಸ್ಟಾರ್‌ ಯಶ್‌ (Yash) ಅವರ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ʼಕೆಜಿಎಫ್‌ 2ʼ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಸುಮಾರು ಒಂದೂವರೆ ವರ್ಷದ ಬಳಿಕ ಯಶ್‌ ಅಭಿನಯದ ʼಟಾಕ್ಸಿಕ್‌ʼ (Toxic) ಸಿನಿಮಾ ಘೋಷಣೆಯಾಗಿದೆ. ಮಲೆಯಾಳಂ ಮೂಲದ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಬಾಲಿವುಡ್‌ ಖ್ಯಾತ ನಟಿ ಕರೀನಾ ಕಪೂರ್‌ (Kareena Kapoor) ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆಕರೀನಾ ಕಪೂರ್‌ ʼಟಾಕ್ಸಿಕ್‌ʼ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಚಿತ್ರತಂಡ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಲಿದೆ. ಡಿಸೆಂಬರ್‌ನಲ್ಲಿ ಟೈಟಲ್‌ ರಿವೀಲ್‌ ಮಾಡಿದ ಬಳಿಕ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಂದಿರಲಿಲ್ಲ. ಶೀಘ್ರದಲ್ಲೇ ಗೋವಾ ಸೇರಿದಂತೆ ವಿವಿಧ ಕಡೆಗಳಲ್ಲಿ ಚಿತ್ರೀಕರಣ ಆರಂಭವಾಗುವ ನಿರೀಕ್ಷೆ ಇದೆ.

ನಾಯಕಿ ಯಾರು?

ʼಟಾಕ್ಸಿಕ್‌ʼ ಚಿತ್ರದಲ್ಲಿ ಟಾಲಿವುಡ್‌ನ ಸಾಯಿ ಪಲ್ಲವಿ ನಾಯಕಿಯಾಗಿ ಅಭಿನಯಿಸುತ್ತಾರೆ. ಜತೆಗೆ ಮಲೆಯಾಳಂ ನಟಿ ಸಂಯುಕ್ತಾ ಮೆನನ್‌ ಮತ್ತೊಬ್ಬ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಮಾತ್ರವಲ್ಲ ಬಹುಭಾಷಾ ನಟಿ ರಾಶಿ ಖನ್ನಾ ಅವರ ಹೆಸರೂ ಕೇಳಿ ಬಂದಿದೆ. ಇದರ ಜತೆಗೆ ಮಲಯಾಳಂ ನಟ ಟೊವಿನೋ ಥಾಮಸ್ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿದೆ. ಬರೋಬ್ಬರಿ 170 ಕೋಟಿ ರೂಪಾಯಿ ಬಜೆಟ್‌ನ ಈ ಯಶ್‌ ಚಿತ್ರ ಡ್ರಗ್‌ ಮಾಫಿಯಾ ಬಗ್ಗೆ ಬೆಳಕು ಚೆಲ್ಲಲಿದೆ ಎಂದು ಮೂಲಗಳು ತಿಳಿಸಿದ್ದು, ಪ್ರಮುಖ ಪಾತ್ರದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವ ವಿಚಾರವನ್ನು ಚಿತ್ರತಂಡ ಇದುವರೆಗೆ ಬಹಿರಂಗಪಡಿಸಿಲ್ಲ. 2025ರಲ್ಲಿ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ.

ಇದನ್ನೂ ಓದಿ: Actor Yash: ಚಿಕ್ಕಣ್ಣ `ಉಪಾಧ್ಯಕ್ಷʼ ಸಿನಿಮಾಗೆ ಶುಭ ಹಾರೈಸಿ , ಒಟ್ಟಿಗೆ ಬ್ರೇಕ್​ಫಾಸ್ಟ್ ಮಾಡಿದ ಯಶ್-ರಾಧಿಕಾ!

ಕರೀನಾ ಪಾತ್ರವೇನು?

ಕಥೆಗೆ ಬಹು ಮುಖ್ಯ ತಿರುವು ನೀಡುವ ಪಾತ್ರದಲ್ಲಿ ಕರೀನಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆಯೂ ಯಶ್‌ ಬಾಲಿವುಡ್‌ ಕಲಾವಿದರ ಜತೆ ತೆರೆ ಹಂಚಿಕೊಂಡಿದ್ದಾರೆ. ಪ್ರಶಾಂತ್‌ ನೀಲ್‌ ನಿರ್ದೇಶನದ ʼಕೆಜಿಎಫ್‌ 2ʼ ಚಿತ್ರದಲ್ಲಿ ಬಾಲಿವುಡ್‌ ತಾರೆಯರಾದ ಸಂಜಯ್‌ ದತ್‌ ಮತ್ತು ರವೀನಾ ಟಂಡನ್‌ ಕಾಣಿಸಿಕೊಂಡಿದ್ದರು. ಯಶ್‌ ಜತೆ ಇವರ ಪಾತ್ರಗಳೂ ಮೆಚ್ಚುಗೆ ಪಡೆದಿದ್ದವು. ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ʼಟಾಕ್ಸಿಕ್‌ʼ ಚಿತ್ರವನ್ನು ನಿರ್ಮಿಸಲಿದ್ದಾರೆ.

ಕಳೆದ ತಿಂಗಳು ಭಾರತ, ಮಲೇಶಿಯಾ, ಜಪಾನ್, ನ್ಯೂಜಿಲ್ಯಾಂಡ್, ಆಫ್ರಿಕಾ, ಆಸ್ಟ್ರೇಲಿಯಾ, ರಷ್ಯಾ, ಇಂಗ್ಲೆಂಡ್‌, ಯೂರೋಪ್ ಸೇರಿದಂತೆ ಹಲವೆಡೆ ʼಟಾಕ್ಸಿಕ್‌ʼ ಟೈಟಲ್ ಅದ್ಧೂರಿಯಾಗಿ ರಿವೀಲ್ ಆಗಿತ್ತು. ಇದುವರೆಗೂ ಕನ್ನಡ ಯಾವ ಸಿನಿಮಾದ ಟೈಟಲ್ ಕೂಡ ವಿಶ್ವದಾದ್ಯಂತ ಈ ರೀತಿ ರಿಲೀಸ್ ಆಗಿಲ್ಲ. ಈ ಮೂಲಕ ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ರಿಲೀಸ್‌ ಆಗುತ್ತಿದೆ ಎನ್ನುವುದು ಇದರಿಂದ ಕನ್ಫರ್ಮ್ ಆಗಿದೆ.

Exit mobile version