ಬೆಂಗಳೂರು: ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL 2024) ಪ್ರಾರಂಭಗೊಂಡಿದೆ. ಸಲ್ಮಾನ್ ಖಾನ್ ಅವರು ಸಹೋದರ ಸೋಹೈಲ್ ಖಾನ್ ಇರುವ ಮುಂಬೈ ಹೀರೋಸ್ ತಂಡವನ್ನು ಬೆಂಬಲಿಸಲು ಭಾಗಿಯಾಗಿದ್ದರು. ಈ ವೇಳೆ ಸಲ್ಮಾನ್ ಅವರ ಇಡೀ ಕುಟುಂಬ ಮ್ಯಾಚ್ ನೋಡಲು ನೆರೆದಿತ್ತು. ಸಲ್ಮಾನ್ ಖಾನ್, ಸಲ್ಮಾ ಖಾನ್, ಹೆಲೆನ್, ಅರ್ಪಿತಾ ಖಾನ್, ಅರ್ಪಿತಾ ಅವರ ಮಕ್ಕಳು, ಸೀಮಾ ಸಜ್ದೇಹ್ ಮತ್ತು ಲುಲಿಯಾ ವಂತೂರ್ ಸೊಹೈಲ್ ತಂಡವನ್ನು ಬೆಂಬಲಿಸಿದರು. ಸಲ್ಮಾನ್ ಹಂಚಿಕೊಂಡ ವೀಡಿಯೊದಲ್ಲಿ ತಾಯಿ, ಸೋದರಳಿಯ ಮತ್ತು ಸೊಸೆಯೊಂದಿಗೆ ಅದ್ಭುತ ಕ್ಷಣಗಳನ್ನು ಹಂಚಿಕೊಂಡರು. ತಾಯಿ ಸಲ್ಮಾಳ ಮುಖಕ್ಕೆ ಮುದ್ದಾಗಿ ಮುತ್ತಿಟ್ಟಿದ್ದಾರೆ ಸಲ್ಲು.
ಸಲ್ಮಾನ್ ಖಾನ್ ಇನ್‌ಸ್ಟಾದಲ್ಲಿ ಈ ಕ್ಯೂಟ್ ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ಮುಂಬೈ ಹೀರೋಸ್ ಜೆರ್ಸಿಯನ್ನು ಹಾಕಿಕೊಂಡು ತಮ್ಮ ತಂಡದೊಂದಿಗೆ ಸ್ಥಳಕ್ಕೆ ಪ್ರವೇಶಿಸಿದ್ದಾರೆ. ಬಳಿಕ ತಾಯಿ ಸಲ್ಮಾಳ ಮುಖಕ್ಕೆಲ್ಲ ಮುತ್ತಿಟ್ಟರು. ಸೋದರಳಿಯ ಮತ್ತು ಸೊಸೆಗೆ ಫ್ರೆಂಚ್ ಫ್ರೈಗಳನ್ನು ತಿನ್ನಿಸಿ ಮುದ್ದು ಮಾಡಿದ್ದಾರೆ.
ಸಲ್ಮಾನ್ ಖಾನ್ ಈ ವೇಳೆ ಮಾಧ್ಯಮದ ಜತೆ ಮಾತನಾಡಿ, “ಕ್ರಿಕೆಟ್ ನಮಗೆ ಒಂದು ಧರ್ಮ. ನಾವೆಲ್ಲರೂ ಅದನ್ನು ಪ್ರೀತಿಸುತ್ತೇವೆ. ಅದಕ್ಕಾಗಿಯೇ ನಾವು ಸಿಸಿಎಲ್‌ನಲ್ಲಿದ್ದೇವೆ. 10 ವರ್ಷಗಳಿಂದ ಸಿಸಿಎಲ್ ಮಾಡಿಕೊಂಡು ಬಂದಿದ್ದೇವೆ. ವರ್ಷದಿಂದ ವರ್ಷಕ್ಕೆ ನಾವು ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆʼʼಎಂದು ಹೇಳಿದ್ದಾರೆ.
ಸೊಹೈಲ್ ಮುಂಬೈ ಹೀರೋಸ್ ತಂಡದ ಮಾಲೀಕರಾಗಿದ್ದರೆ, ಸಲ್ಮಾನ್ ಖಾನ್ ತಂಡದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಮತ್ತು ರಿತೇಶ್ ದೇಶಮುಖ್ ತಂಡದ ನಾಯಕರಾಗಿದ್ದಾರೆ.
ಇದನ್ನೂ ಓದಿ: Cricket Fraud: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಹೆಸರಿನಲ್ಲಿ ಮಹಿಳೆಯಿಂದ 1.5 ಕೋಟಿ ರೂ. ದೋಚಿದ ಗ್ಯಾಂಗ್, 4 ವರ್ಷದ ಬಳಿಕ ಕೇಸ್!
ವೈರಲ್ ವಿಡಿಯೊ
ಯಾವ ತಂಡಕ್ಕೆ ಯಾರು ನಾಯಕರು?:
ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಮುಂಬೈ ಹೀರೋಸ್ ತಂಡಕ್ಕೆ ಸಲ್ಮಾನ್ ಖಾನ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ರಿತೇಶ್ ದೇಶಮುಖ್ ಈ ತಂಡದ ನಾಯಕ. ಸೋಹೈಲ್ ಖಾನ್, ಮುಂಬೈ ಹೀರೊಸ್ ತಂಡದ ಮಾಲೀಕರಾಗಿದ್ದಾರೆ. ‘ತೆಲುಗು ವಾರಿಯರ್ಸ್’ ತಂಡಕ್ಕೆ ವೆಂಕಟೇಶ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅಖಿಲ್ ಅಕ್ಕಿನೇನಿ ‘ತೆಲುಗು ವಾರಿಯರ್ಸ್’ ತಂಡದ ನಾಯಕ. ‘ಕರ್ನಾಟಕ ಬುಲ್ಡೋಜರ್ಸ್’ ತಂಡಕ್ಕೆ ಕಿಚ್ಚ ಸುದೀಪ್ ನಾಯಕನಾಗಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 10 ಅನ್ನು ಈಗಷ್ಟೇ ಮುಗಿಸಿರುವ ಸುದೀಪ್, ಮತ್ತೊಮ್ಮೆ ಸಿಸಿಎಲ್ 10 ಮೂಲಕ ಜಿಯೊಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೋಹನ್‌ಲಾಲ್ ಸಹಮಾಲೀಕರಾಗಿರುವ ‘ಕೇರಳ ಸ್ಟ್ರೈಕರ್ಸ್’ ತಂಡಕ್ಕೆ ಇಂದ್ರಜಿತ್ ನಾಯಕರಾಗಿದ್ದಾರೆ. ‘ಭೋಜಪುರಿ ದಬಾಂಗ್ಸ್’ ತಂಡಕ್ಕೆ ಮನೋಜ್ ತಿವಾರಿ ನಾಯಕರಾಗಿದ್ದಾರೆ. ‘ಪಂಜಾಬ್ ದೆ ಶೇರ್’ ತಂಡಕ್ಕೆ ಸೋನು ಸೂದ್ ನಾಯಕರಾಗಿದ್ದಾರೆ. ಬೋನಿ ಕಪೂರ್ ಮಾಲೀಕರಾಗಿರುವ ‘ಬೆಂಗಾಲ್ ಟೈಗರ್ಸ್’ ತಂಡಕ್ಕೆ ಜಿಸ್ಸು ಸೆನ್‌ಗುಪ್ತ ನಾಯಕರಾಗಿದ್ದಾರೆ.