Site icon Vistara News

Samarjit Lankesh: ʻಗೌರಿʼ ಚಿತ್ರದ ಹುಬ್ಬಳ್ಳಿ ಜವಾರಿ ಶೈಲಿಯ `ಧೂಳ್ ಎಬ್ಬಿಸಾವ’ ಸಾಂಗ್ ರಿಲೀಸ್!

Samarjit Lankesh Dhool Yebsava Video Song Out

ಬೆಂಗಳೂರು: ಇಂದ್ರಜಿತ್ ಲಂಕೇಶ್ ನಿರ್ದೇಶನ, ನಾಯಕ ನಟ ಸಮರ್ಜಿತ್ ಲಂಕೇಶ್ (Samarjit Lankesh) ಹಾಗೂ ಸಾನ್ಯ ಅಯ್ಯರ್ ನಟಿಸಿರುವ ʻಗೌರಿ’ ಚಿತ್ರದ ʻಧೂಳ್ ಎಬ್ಬಿಸಾವ..’ ಹಾಡು ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಂಡಿದೆ. ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ಜವಾರಿ ಭಾಷಾ ಶೈಲಿಯ ಹಾಡಿಗೆ ನಾಯಕ ನಟ ಸಮರ್ಜಿತ್ ಲಂಕೇಶ್ ಹಾಗೂ ಖ್ಯಾತ ನಟಿ ಸಂಜನಾ ಆನಂದ್ ಜಬರ್ದಸ್ತ್ ಆಗಿ ನೃತ್ಯ ಮಾಡಿದ್ದಾರೆ.

ಅನಿರುದ್ಧ್ ಶಾಸ್ತ್ರೀ, ಅನನ್ಯ ಭಟ್ ಹಾಡಿರುವ ಈ ಹಾಡಿಗೆ ಶಿವು ಬೆರ್ಗಿಯವರು ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿದ್ದಾರೆ. ಭಜರಂಗಿ ಮೋಹನ್ ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ. ಈಗಾಗಲೇ ಧೂಳ್ ಎಬ್ಬಿಸಾವ..’ ಸಾಂಗ್ ಸಖತ್ ವೈರಲ್ ಆಗುವ ಮೂಲಕ ಜನಮನ ಸೂರೆಗೊಂಡಿದೆ. ನೈಜ ಘಟನೆ ಆಧರಿಸಿ ದೊಡ್ಡ ಬಜೆಟ್‌ನಲ್ಲಿ ಸಿನಿಮಾ ಮಾಡಿದ್ದು, ಬೆಂಗಳೂರು, ಚಿಕ್ಕಮಗಳೂರು ಸೇರಿ ರಾಜ್ಯದ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ.

ಅಕ್ಕ ಗೌರಿಯ ಅವರ ಮೇಲಿನ ಅಭಿಮಾನದಿಂದ ಇಂದ್ರಜಿತ್ ಲಂಕೇಶ್ ಅವರು ಈ ಚಿತ್ರಕ್ಕೆ ಅಕ್ಕನ ಹೆಸರಿಟ್ಟಿದ್ದಾರೆ. ಯುವ ನಟ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿ ಸಾನ್ಯಾ ಅಯ್ಯರ್ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದ್ದಾರೆ.

ಇದನ್ನೂ ಓದಿ: Samarjit Lankesh: `ಗೌರಿ’ ಚಿತ್ರದ ಮ್ಯೂಸಿಕಲ್ ಟೀಸರ್ ಬಿಡುಗಡೆ ಮಾಡಿದ ಮಹಿಳಾ ಕ್ರಿಕೆಟ್‌ ತಾರೆ!

ಪ್ರಿಯಾಂಕ ಉಪೇಂದ್ರ, ವಸುಂಧರಾ ದಾಸ್, ಲೂಸ್ ಮಾದ ಯೋಗಿ, ಅಕುಲ್ ಬಾಲಾಜಿ, ಸಿಹಿ ಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಕಾಂತಾರ ಖ್ಯಾತಿಯ ಮಾಲತಿ ಸುಧೀರ್, ಕೆಜಿಎಫ್ ಖ್ಯಾತಿಯ ಸಂಪತ್ ಮೈತ್ರೇಯ, ಚಂದುಗೌಡ ಸೇರಿದಂತೆ ಬಹುದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ.

ಇಂದ್ರಜಿತ್​ ಲಂಕೇಶ್ (Indrajit Lankesh)​ ಅವರ ಪುತ್ರ ಸಮರ್ಜಿತ್​ ಲಂಕೇಶ್​ (Samarjit Lankesh) ಅವರು ಹೀರೊ ಆಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಇಂದ್ರಜಿತ್‌ ಲಂಕೇಶ್ ಅವರು ತಮ್ಮ ಮಗನ ಮೊದಲ ಸಿನಿಮಾಕ್ಕೆ ‘ಗೌರಿ’ ಎಂದು ಟೈಟಲ್ ಇಟ್ಟಿದ್ದಾರೆ. ಈ ಚಿತ್ರಕ್ಕೆ ‘ಗೌರಿ’ ಎನ್ನುವ ಶೀರ್ಷಿಕೆ ಇಟ್ಟಿದ್ದು ಏಕೆ ಎನ್ನುವ ಪ್ರಶ್ನೆಗೆ ಇಂದ್ರಜಿತ್ ಅವರು ಈ ಹಿಂದೆ ಉತ್ತರ ನೀಡಿದ್ದರು.

ʻನನ್ನ ಅಕ್ಕನ ಮೇಲಿ ಪ್ರೀತಿ ಹಾಗೂ ಅಭಿಮಾನಕ್ಕಾಗಿ ಗೌರಿ ಎನ್ನುವ ಶೀರ್ಷಿಕೆ ಇಟ್ಟಿದ್ದೇನೆʼʼಎಂದಿದ್ದರು. ಈ ಸಿನಿಮಾಗಾಗಿ ಸಮರ್ಜಿತ್​ ಲಂಕೇಶ್​ ಅವರು ಡ್ಯಾನ್ಸ್​, ಫೈಟಿಂಗ್​, ಕುದುರೆ ಸವಾರಿ ಸೇರಿದಂತೆ ಅನೇಕ ಕಲೆಗಳನ್ನು ಕಲಿತು ಬಂದಿದ್ದಾರೆ. ಗೌರಿ’ ಚಿತ್ರದಲ್ಲಿ ಸಮರ್ಜಿತ್​ ಲಂಕೇಶ್​ಗೆ ಜೋಡಿಯಾಗಿ ‘ಬಿಗ್​ ಬಾಸ್​’ ಖ್ಯಾತಿಯ ಸಾನ್ಯಾ ಅಯ್ಯರ್​ ಅವರು ನಟಿಸಿದ್ದಾರೆ.

ಎಜೆ ಶೆಟ್ಟಿ ಛಾಯಾಗ್ರಹಣ ಮಾಡುತ್ತಿದ್ದು, ಬಿ ಎ ಮಧು, ರಾಜಶೇಖರ್, ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಕೆ ಕಲ್ಯಾಣ್, ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ ಬರೆಯುತ್ತಿದ್ದಾರೆ.

Exit mobile version