Site icon Vistara News

Samarjit Lankesh: `ಗೌರಿ’ ಚಿತ್ರದ ಮ್ಯೂಸಿಕಲ್ ಟೀಸರ್ ಬಿಡುಗಡೆ ಮಾಡಿದ ಮಹಿಳಾ ಕ್ರಿಕೆಟ್‌ ತಾರೆ!

Samarjit Lankesh Love you Samantha Song Teaser

ಬೆಂಗಳೂರು: ಸಾಂಸ್ಕೃತಿಕ ನಗರಿ (Samarjit Lankesh) ಮೈಸೂರಿನ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಭ್ರಮವೋ ಸಂಭ್ರಮ. ಕಾರಣ ಈ ಕಾಲೇಜಿನ ಕ್ಲಾಸ್ ರೂಂನಲ್ಲಿ ʻಗೌರಿ’ ಚಿತ್ರತಂಡ ಚಿತ್ರದ ಮ್ಯೂಸಿಕಲ್ ಟೀಸರ್ ರಿಲೀಸ್ (Love you Samantha Song Teaser) ಮಾಡಿದೆ. ಕರ್ನಾಟಕದ ಹೆಮ್ಮೆಯ ಕ್ರಿಕೆಟ್‌ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಅವರು ʻಲವ್ ಯೂ ಸಮಂತ’ ಸಾಂಗ್‌ ಟೀಸರನ್ನು ಬಿಡುಗಡೆಗೊಳಿಸಿದರು.

ತೆರೆ ಮೇಲೆ ಟೀಸರ್ ಮೂಡುತ್ತಿದ್ದಂತೆ ನೆರೆದಿದ್ದ ನೂರಾರು ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ಕ್ಲಾಸ್ ರೂಂನಲ್ಲಿದ್ದ ಬೆಂಚ್ ಮೇಲೆ ಹತ್ತಿ ಶಿಳ್ಳೆ ಹೊಡೆಯುತ್ತ ʻಲವ್ ಯೂ ಸಮಂತಾ’ ಹಾಡಿಗೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ʻಗೌರಿ’ ಚಿತ್ರದ ನಾಯಕ ಸಮರ್ಜಿತ್ ಲಂಕೇಶ್ ಜತೆ ʻಟೈಂ ಬರುತ್ತೆ.. ಟೈಂ ಬರುತ್ತೆ..’ ಹಾಡಿಗೆ ಶ್ರೇಯಾಂಕಾ ಪಾಟೀಲ್ ಹುಕ್ ಸ್ಟೆಪ್ ಹಾಕಿದರು.

ಶ್ರೇಯಾಂಕಾ ಮತ್ತು ಸಮರ್ಜಿತ್ ಡ್ಯಾನ್ಸ್‌ಗೆ ವಿದ್ಯಾರ್ಥಿಗಳು ಫಿದಾ ಆಗಿದ್ದಾರೆ. ಒಮ್ಮೆಲೆ ನೂರಾರು ವಿದ್ಯಾರ್ಥಿಗಳು ಶ್ರೇಯಾಂಕಾ ಪಾಟೀಲ್ ಹಾಗೂ ಸಮರ್ಜಿತ್ ಲಂಕೇಶರನ್ನು ಮುತ್ತಿಕೊಂಡು ಅಭಿನಂದನೆಗಳ ಮಹಾಪೂರ ಹರಿಸಿದರು. ಈ ವೇಳೆ ವಿದ್ಯಾರ್ಥಿಗಳಿಗೆ ʻಗೌರಿ’ ಚಿತ್ರದ ವಿಶೇಷ ಚಾಕ್‍ಲೇಟ್‍ಗಳನ್ನು ಸಹ ವಿತರಿಸಲಾಯಿಗಿದೆ.
ʻಲವ್ ಯೂ ಸಮಂತಾ’ಗೆ ಸಾಹಿತ್ಯ ಕವಿರಾಜ್ ಅವರದ್ದಾದರೆ, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನವಿದೆ.
ಕಾರ್ಯಕ್ರಮದಲ್ಲಿ ಬಿಗ್‍ಬಾಸ್ ಖ್ಯಾತಿಯ ಶೈನ್ ಶೆಟ್ಟಿ, ʻಮಿಸ್ ಟೀನ್ ಯುನಿವರ್ಸ್ʼ ಸ್ವೀಜಲ್ ಮುಂತಾದವರು ಹಾಜರಿದ್ದರು.

ಇದನ್ನೂ ಓದಿ: Karan Johar: ಬರ್ತ್‌ಡೇ ದಿನ ಹೊಸ ಸಿನಿಮಾ ಅನೌನ್ಸ್‌ ಮಾಡಿದ ಕರಣ್ ಜೋಹರ್!

ಇಂದ್ರಜಿತ್​ ಲಂಕೇಶ್ (Indrajit Lankesh)​ ಅವರ ಪುತ್ರ ಸಮರ್ಜಿತ್​ ಲಂಕೇಶ್​ (Samarjit Lankesh) ಅವರು ಹೀರೊ ಆಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಇಂದ್ರಜಿತ್‌ ಲಂಕೇಶ್ ಅವರು ತಮ್ಮ ಮಗನ ಮೊದಲ ಸಿನಿಮಾಕ್ಕೆ ‘ಗೌರಿ’ ಎಂದು ಟೈಟಲ್ ಇಟ್ಟಿದ್ದಾರೆ. ಈ ಚಿತ್ರಕ್ಕೆ ‘ಗೌರಿ’ ಎನ್ನುವ ಶೀರ್ಷಿಕೆ ಇಟ್ಟಿದ್ದು ಏಕೆ ಎನ್ನುವ ಪ್ರಶ್ನೆಗೆ ಇಂದ್ರಜಿತ್ ಅವರು ಈ ಹಿಂದೆ ಉತ್ತರ ನೀಡಿದ್ದರು.

ʻʻನನ್ನ ಅಕ್ಕನ ಮೇಲಿ ಪ್ರೀತಿ ಹಾಗೂ ಅಭಿಮಾನಕ್ಕಾಗಿ ಗೌರಿ ಎನ್ನುವ ಶೀರ್ಷಿಕೆ ಇಟ್ಟಿದ್ದೇನೆʼʼಎಂದಿದ್ದರು. ಈ ಸಿನಿಮಾಗಾಗಿ ಸಮರ್ಜಿತ್​ ಲಂಕೇಶ್​ ಅವರು ಡ್ಯಾನ್ಸ್​, ಫೈಟಿಂಗ್​, ಕುದುರೆ ಸವಾರಿ ಸೇರಿದಂತೆ ಅನೇಕ ಕಲೆಗಳನ್ನು ಕಲಿತು ಬಂದಿದ್ದಾರೆ. ಗೌರಿ’ ಚಿತ್ರದಲ್ಲಿ ಸಮರ್ಜಿತ್​ ಲಂಕೇಶ್​ಗೆ ಜೋಡಿಯಾಗಿ ‘ಬಿಗ್​ ಬಾಸ್​’ ಖ್ಯಾತಿಯ ಸಾನ್ಯಾ ಅಯ್ಯರ್​ ಅವರು ನಟಿಸಿದ್ದಾರೆ.

ಎಜೆ ಶೆಟ್ಟಿ ಛಾಯಾಗ್ರಹಣ ಮಾಡುತ್ತಿದ್ದು, ಬಿ ಎ ಮಧು, ರಾಜಶೇಖರ್, ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಕೆ ಕಲ್ಯಾಣ್, ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ ಬರೆಯುತ್ತಿದ್ದಾರೆ.

Exit mobile version