Site icon Vistara News

Dhruva Sarja: ಗಂಡು ಮಗುವಿನ ತಂದೆಯಾದ ಧ್ರುವ ಸರ್ಜಾ; ಗೌರಿ ಗಣೇಶ ಹಬ್ಬದಂದೇ ಸಿಹಿ ಸುದ್ದಿ

Dhruva Sarja And Prerana Shankar

Sandalwood Actor Dhruva Sarja Blessed With Baby Boy

ಬೆಂಗಳೂರು: ಸ್ಯಾಂಡಲ್‌ವುಡ್‌ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಅವರ ಮನೆಗೆ ಗೌರಿ ಗಣೇಶ ಹಬ್ಬದ ದಿನವೇ (Ganesh Chaturthi) ಹೊಸ ಅತಿಥಿಯ ಆಗಮನವಾಗಿದೆ. ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಶಂಕರ್‌ (Prerana Shankar) ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಸರ್ಜಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.

ಬೆಂಗಳೂರಿನ ಕೆ.ಆರ್.ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಪ್ರೇರಣಾ ಹೆರಿಯಾಗಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ನಾರ್ಮಲ್‌ ಡೆಲಿವರಿಯಾದ ಕಾರಣ ಶೀಘ್ರದಲ್ಲೇ ಮಗನನ್ನು ಮನೆ ತುಂಬಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಗೆ ಹೆಣ್ಣು ಮಗು ಇದೆ.

ಸೀಮಂತದ ವಿಡಿಯೊ

ಕೆಲ ದಿನಗಳ ಹಿಂದಷ್ಟೇ ಧ್ರುವ ಸರ್ಜಾ ಅವರ ಕುಟುಂಬದರು ಪ್ರೇರಣಾಗೆ ಸೀಮಂತ ಶಾಸ್ತ್ರ ನೆರೇರಿಸಿದ್ದರು. ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ತಮ್ಮ ಪಾಲಿಗೆ ತುಂಬ ಸ್ಪೆಷಲ್​ ಆಗಿತ್ತು ಎಂದು ಧ್ರುವ ಸರ್ಜಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡು ವಿಡಿಯೊ ಶೇರ್‌ ಮಾಡಿಕೊಂಡಿದ್ದರು.

ಇದನ್ನೂ ಓದಿ: Dhruva Sarja: 3 ವರ್ಷಗಳ ಬಳಿಕ ಧ್ರುವ ಸರ್ಜಾ ಬರ್ತ್‌ಡೇ ಆಚರಣೆ; ಶಾಲಾ ಮಕ್ಕಳಿಗೆ ಆ್ಯಕ್ಷನ್ ಪ್ರಿನ್ಸ್‌ ಸಹಾಯ!

ಪ್ರೇರಣಾ ಅವರ ಸೀಮಂತ ಸಮಾರಂಭದಲ್ಲೂ ಚಿರು ಸ್ಮರಣೆ ಮಾಡಿಕೊಳ್ಳಲಾಗಿತ್ತು. ಚಿರಂಜೀವಿ ಅವರ ಸಮಾಧಿ ಇರುವ ಫಾರ್ಮ್​ ಹೌಸ್​ನಲ್ಲೇ ಸೀಮಂತ ನಡೆದಿತ್ತು. ಫಾರ್ಮ್​ ಹೌಸ್​ ಸಿಂಗಾರಗೊಂಡಿತ್ತು. ಬಂಧು ಬಳಗದವರು ಆಗಮಿಸಿ ಪ್ರೇರಣಾಗೆ ಆಶೀರ್ವಾದ ಮಾಡಿದ್ದರು.

Exit mobile version