ಬೆಂಗಳೂರು: ಕೋವಿಡ್ ನಂತರ ಬ್ಯಾಕ್ ಟು ಬ್ಯಾಕ್ ಸಂಕಷ್ಟಕ್ಕೆ ಸಿಲುಕಿರುವ ಸ್ಯಾಂಡಲ್‌ವುಡ್, ಹೋಮ ಹವನದ ಮೊರೆ ಹೋಗಿದೆ. ಕನ್ನಡ ಚಿತ್ರರಂಗದ ಒಳಿತಿಗಾಗಿ (Sandalwood Industry) ವಿಶೇಷ ಹೋಮ ಹವನ ಮಾಡಲಾಗುತ್ತಿದೆ. ಗಣಪತಿ ಹೋಮ, ಮೃತ್ಯುಂಜಯ ಹೋಮ, ಆಶ್ಲೇಷಾ ಬಲಿ ಹಾಗೂ ನಾಗದರ್ಶನ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಬೆಳಿಗ್ಗೆ 7.30ರಿಂದ 11.30ರವರೆಗೆ ಗಣಯಾಗ, ಆಶ್ಲೇಷ ಬಲಿ, ಸರ್ಪ ಶಾಂತಿ, ಮೃತ್ಯುಂಜಯ ಹೋಮ ಆಗಿದೆ. ಈ ವಿಶೇಷ ಪೂಜೆಯನ್ನು ಉಡುಪಿಯ ಪ್ರಕಾಶ್ ಅಣ್ಣಮ್ಮಯ್ಯ ನೆರವೇರಿಸಿದ್ದಾರೆ.
8 ಜನರ ಪುರೋಹಿತರ ತಂಡ ವಿಶೇಷ ಹೋಮ ಹವನ ನಡೆಸಿದೆ. ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು,ಸೇರಿದಂತೆ ಒಟ್ಟು 600 ಜನ ಪಾಲ್ಗೊಂಡಿದ್ದಾರೆ. ಊಟದ ವ್ಯವಸ್ಥೆಗಾಗಿ 50 ಜನ ಬಾಣಸಿಗರು ನೇಮಕವಾಗಿದೆ. ಸುಮಾರು 150ಕ್ಕೂ ಜನರಿಗೆ ತಿಂಡಿಯ ವ್ಯವಸ್ಥೆ ಆಗಿದೆ. 600ಕ್ಕೂ ಹೆಚ್ಚು ಜನರಿಗೆ ಭೋಜನ ವ್ಯವಸ್ಥೆ ಮಾಡಲಾಗುತ್ತದೆ.
5 ಜನ ಮುತ್ತೈದೆಯರು ಬಂದು ಬಂದು ದೀಪ ಹಚ್ಚಿದ ನಂತರ ಪೂಜೆ ಶುರುವಾಗಿದೆ. ದೊಡ್ಡಣ್ಣ ದಂಪತಿ ಪೂಜೆ ನೇರವೇರಿಸಿದ್ದಾರೆ. ಚಿತ್ರರಂಗ ಎಂಬ ಉದ್ಯಮಕ್ಕೆ ನಾಗದೇವರು ಅಧಿಪತಿ. ಅಂಥ ನಾಗದೇವರನ್ನು ಆರಾಧನೆ ಮಾಡುವುದಕ್ಕಾಗಿ ಆಶ್ಲೇಷಾ ಬಲಿ ಹಾಗೂ ನಾಗದರ್ಶನ ಮಾಡಲಾಗುತ್ತದೆ. ಇದಕ್ಕಾಗಿಯೇ ನಾಗಪಾತ್ರಿಗಳು ಭಾಗವಹಿಸಿದ್ದಾರೆ.
ಇದನ್ನೂ ಓದಿ: Bengaluru Police: ಸಿಟಿ ಸಿವಿಲ್ ಕೋರ್ಟ್‌ನಿಂದ ಕೊಲೆ ಆರೋಪಿ ಎಸ್ಕೇಪ್! ಸಿನಿಮಾ ಸ್ಟೈಲ್‌ನಲ್ಲಿ ಚೇಸ್ ಮಾಡಿದ ಖಾಕಿ
ಲೈಟ್ ಬಾಯ್ ನಿಂದ ಮೊದಲುಗೊಂಡು ಪ್ರೊಡಕ್ಷನ್ ನಲ್ಲಿ ಕೆಲಸ ಮಾಡುವವರ ತನಕ. ಸೌಂಡ್ ಎಂಜಿನಿಯರ್ ನಿಂದ ಮೊದಲುಗೊಂಡು ಸಂಗೀತದ ನಿರ್ದೇಶಕರ ತನಕ ಈ ಚಲನಚಿತ್ರ ಪರಿಶ್ರಮದಲ್ಲಿ ಇರುವ ಎಲ್ಲರಿಗೂ ಒಳಿತಾಗಲಿ ಎಂಬ ಉದಾತ್ತ ಧ್ಯೇಯದಿಂದ ಈ ಪೂಜಾ ಕೈಂಕರ್ಯವನ್ನು ಮಾಡಲಾಗುತ್ತಿದೆ.
ಈ ಪೂಜೆಯನ್ನು ನಟ ದರ್ಶನ್ ಅವರಿಗಾಗಿಯೇ ಮಾಡಲಾಗುತ್ತಿದೆ ಎಂಬ ಚರ್ಚೆ ವಿಪರೀತ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.ಜೂನಿಯರ್ ಆರ್ಟಿಸ್ಟ್ ಗಳೋ, ಡ್ಯೂಪ್ ಕಲಾವಿದರೋ, ಕಂಠದಾನ ಮಾಡುವವರಿಂದ ನಾಯಕ ನಟ- ನಟಿಯರು, ನಿರ್ಮಾಪಕರು, ಸಾಹಸ ಕಲಾವಿದರು ಹೀಗೆ ಎಷ್ಟೋ ವಿಭಾಗದಲ್ಲಿ ದುಡಿಯುತ್ತಿರುವ ಎಲ್ಲರಿಗೂ ಒಳಿದಾಗಲಿ ಎನ್ನುವ ದೃಷ್ಟಿಯಿಂದ ಈ ಹೋಮ ನೆರವೇರುತ್ತಿದೆ.
ಆ.11ರಂದು ಕಲಾವಿದರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಕ್‌ಲೈನ್ ವೆಂಕಟೇಶ್ (Rockline Venkatesh) ಮಾತನಾಡಿʻʻಕೋವಿಡ್ ನಂತರ ಸಿನಿಮಾರಂಗದಲ್ಲಿ ಉಂಟಾದ ಸಮಸ್ಯೆಗಳನ್ನು ಎದುರಿಸಲು ಇಂಥದ್ದೊಂದು ಪೂಜೆ ಮಾಡಲು ಯೋಚಿಸಿದೆವು. ಆದರೆ, ಆಗಿರಲಿಲ್ಲ. ಕೋವಿಡ್ ನಂತರ ಚಿತ್ರರಂಗದಲ್ಲಿ ಸಾಕಷ್ಟು ಸಾವು, ನೋವಿನ ಘಟನೆಗಳು ನಡೆದಿದೆ. ಈಗ ಕನ್ನಡ ಚಿತ್ರರಂಗದಲ್ಲಿ ದೊಡ್ಡವರು ಅಂತ ಯಾರೂ ಇಲ್ಲ. ಹೀಗಾಗಿ ನಾವು ದೇವರ ಮೊರೆ ಹೋಗುತ್ತಿದ್ದೇವೆ ಎಂದಿದ್ದರು.