ಬೆಂಗಳೂರು: ಇಂದು ಬರೋಬ್ಬರಿ 15 ಸಿನಿಮಾಗಳು ತೆರೆ ಕಂಡಿವೆ. ಕನ್ನಡದಲ್ಲಿ ಮಿಸ್ಟರ್ ನಟ್ವರ್‌ಲಾಲ್, ಮತ್ಸ್ಯಗಂಧ, ಧೈರ್ಯಂ ಸರ್ವತ್ರ ಸಾಧನಂ, ಫಾರ್ ರಿಜಿಸ್ಟ್ರೇಷನ್, ಒಂದು ಪಿಶಾಚಿಯ ಕಥೆ, ಪ್ರೇತ, ಕಪ್ಪು ಬಿಳುಪಿನ ನಡುವೆ ಸಿನಿಮಾಗಳು ಬಿಡುಗಡೆಯಾಗಿದೆ. ಹಿಂದಿಯಲ್ಲಿ ಕ್ರ್ಯಾಕ್ ಮತ್ತು ಆರ್ಟಿಕಲ್ 370 ಸಿನಿಮಾಗಳು ಬಿಡುಗಡೆಯಾಗಲಿವೆ.
ಫಾರ್ ರಿಜಿಸ್ಟ್ರೇಷನ್
ಪೃಥ್ವಿ ಅಂಬಾರ್ ಹಾಗೂ ಮಿಲನಾ ನಾಗರಾಜ್ (Milana Nagaraj) ನಟಿಸಿರುವ ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಮಿಲನಾ ನಟಿಸಿದ್ದ ‘ಲವ್ ಮಾಕ್ಟೇಲ್’ ಚಿತ್ರ 2020ರ ಫೆಬ್ರವರಿ ಸನಿಹ ಅಂದರೆ ಜ.31 ತೆರೆ ಕಂಡಿತ್ತು. ‘ಲವ್ ಮಾಕ್ಟೇಲ್ 2’ ಚಿತ್ರ 2022ರ ಫೆ.11ರಂದು ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು. ಅದೇ ರೀತಿ ಪೃಥ್ವಿ ಅಂಬಾರ್ ನಟಿಸಿದ್ದ ‘ದಿಯಾ’ ಚಿತ್ರ 2020ರ ಫೆ.7ರಂದು ತೆರೆಕಂಡು ಗಮನ ಸೆಳೆದಿತ್ತು. ಈಗ ಮಿಲನಾ ಮತ್ತು ಪೃಥ್ವಿ ಅಂಬಾರ್ ಅವರು ಜತೆಯಾಗಿ ನಟಿಸಿರುವ ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾ ಕೂಡ ಫೆಬ್ರವರಿ ತಿಂಗಳಲ್ಲೇ ರಿಲೀಸ್ ಆಗಿದೆ. ರವಿಶಂಕರ್, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್ ಭಟ್, ಉಮೇಶ್ ಎಂಬ ದೊಡ್ಡ ತಾರಾ ಬಳಗವೇ ಇದೆ. ಚಿತ್ರದ ಚಿತ್ರಕಥೆ, ನಿರ್ದೇಶನ ದ್ವಾರಕನಾಥ್, ಸಂಗೀತ ಸಂಯೋಜನೆ ಆರ್.ಕೆ ಹರೀಶ್, ಅಭಿಲಾಷ್ ಕಳತ್ತಿ, ಅಭಿಷೇಕ್ ಜಿ.ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್ ಸಂಕಲನ ಚಿತ್ರಕ್ಕಿದೆ.
ಇದನ್ನೂ ಓದಿ: Milana Nagaraj: ಫೆಬ್ರವರಿ 23ಕ್ಕೆ ‘ಫಾರ್ ರಿಜಿಸ್ಟ್ರೇಷನ್’ ರಿಲೀಸ್; ಅದೃಷ್ಟದ ತಿಂಗಳಲ್ಲೇ ಅಖಾಡಕ್ಕಿಳಿದ ಮಿಲನಾ-ಪೃಥ್ವಿ!
ಮಿಸ್ಟರ್ ನಟ್ವರ್‌ಲಾಲ್
ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಮಿ. ನಟ್ವರ್‌ಲಾಲ್ ಸಿನಿಮಾ ಬಿಡುಗಡೆಯಾಗಲಿದೆ. ಅಯೋಧ್ಯಾಪುರ ನಿರ್ದೇಶಕ ವಿ ಲವ ಅವರು ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ನಿರ್ದೇಶನವನ್ನೂ ಮಾಡಿದ್ದಾರೆ. ಈ ಹಿಂದೆ ‘ನಂಜುಂಡಿ ಕಲ್ಯಾಣ’, ‘ಮಡಮಕ್ಕಿ’ ಚಿತ್ರಗಳಲ್ಲಿ ಅಭಿನಯಿಸಿದ್ದ ನಟ, ನಿರ್ಮಾಪಕ ತನುಷ್ ಶಿವಣ್ಣ ಈಗ ‘ನಟ್ವರ್ ಲಾಲ್’ ಚಿತ್ರದಲ್ಲಿ ನಟಿಸಿದ್ದಾರೆ.
ಕಪ್ಪು ಬಿಳುಪಿನ ನಡುವೆ
ತಮಿಳು ನಟ ವಿಜಯ್ ಸೇತುಪತಿ ನಟನೆಯ ಅಖಾಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟ ವಸಂತ್ ವಿಷ್ಣು ಅವರು ನಂತರ ತಾಂಡವ ಮತ್ತು ಪವಿತ್ರ ಎಂಬ ತುಳು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಇದೀಗ ವಸಂತ್ ವಿಷ್ಣು ಅವರು ನಟನೆಯಿಂದ ನಿರ್ದೇಶನದತ್ತ ಹೊರಳಿದ್ದು, ‘ಕಪ್ಪು ಬಿಳುಪಿನ ನಡುವೆ’ ಮೂಲಕ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಚಿತ್ರವನ್ನು ಹಾರರ್ ಥ್ರಿಲ್ಲರ್ ಎಂದು ಹೇಳಲಾಗಿದೆ.ವಸಂತ್ ವಿಷ್ಣು ಈ ಚಿತ್ರವನ್ನು ನಿರ್ದೇಶಿಸುವುದರೊಂದಿಗೆ, ನಾಯಕನಾಗಿಯೂ ಅಭಿನಯಿಸಿದ್ದಾರೆ.
ಪ್ರೇತ
ಪ್ರೇತ’ ಸಿನಿಮಾದಲ್ಲಿ ಹರೀಶ್ ರಾಜ್ ಅವರೊಂದಿಗೆ ಅಮೂಲ್ಯ ಭಾರದ್ವಾಜ್, ಅಹಿರಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿ. ಎಂ. ವೆಂಕಟೇಶ್, ಅಮಿತ್ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಹರೀಶ್ ರಾಜ್ ಪ್ರೊಡಕ್ಷನ್’ ಬ್ಯಾನರ್‌ನಲ್ಲಿ “ಪ್ರೇತ’ ಸಿನಿಮಾ ನಿರ್ಮಾಣವಾಗಿದೆ. ಈವರೆಗೆ ‘ಕಲಾಕಾರ್’, ‘ಗನ್’, ‘ಶ್ರೀ ಸತ್ಯನಾರಾಯಣ’, ‘ಕಿಲಾಡಿ ಪೊಲೀಸ್’ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಹರೀಶ್ ರಾಜ್ ಅವರು 3 ವರ್ಷದ ಗ್ಯಾಪ್ ಬಳಿಕ ಪ್ರೇತ ಚಿತ್ರದ ಮೂಲಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್
ತೊಟ್ಟಿದ್ದಾರೆ.
ಮತ್ಸ್ಯಗಂಧ
ಉತ್ತರ ಕನ್ನಡ, ಅಲ್ಲಿನ ಪರಿಸರ, ಸಂಸ್ಕ್ರತಿ ಹಾಗೂ ಬದುಕಿಗೆ ಕೈ ಗನ್ನಡಿ ಹಿಡಿಯುವ ಪ್ರಯತ್ನವೇ ಮತ್ಸ್ಯಗಂಧ ಸಿನಿಮಾ. ಕರಾವಳಿ ಮೀನುಗಾರರ ಭಾಷೆ, ಬದುಕು, ಸಂಪ್ರದಾಯ, ಹೋರಾಟದ ಕಥೆಯ ಮತ್ಸ್ಯಗಂಧದಲ್ಲಿ ಸ್ಯಾಂಡಲ್‌ವುಡ್‌ನ ಲವ್ಲೀ ಹುಡುಗ ಪೃಥ್ವಿ ಅಂಬಾರ್ ಖಾಕಿ ತೊಟ್ಟಿದ್ದು ಅಪರಾಧಿಗಳಿಗೆ ಹಡೆಮುರಿ ಕಟ್ಟಲು ಸಜ್ಜಾಗಿದ್ದಾರೆ.
ಧೈರ್ಯಂ ಸರ್ವತ್ರ ಸಾಧನಂ
‘ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾಗೆ ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಹೃದಯಶಿವ, ಅರಸು ಅಂತಾರೆ, ಕಿನ್ನಾಳ್ ರಾಜ್ ಅವರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ರವಿಕುಮಾರ್ ಸನಾ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಶ್ರೀಕಾಂತ್ ಸಂಕಲನ ಈ ಚಿತ್ರಕ್ಕಿದೆ. ಕುಂಗ್ಫು ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ. ಕ್ಯಾಪ್ಟನ್ ಕಿಶೋರ್ ಅವರ ನೃತ್ಯ ನಿರ್ದೇಶನ ಈ ಸಿನಿಮಾಗೆ ಇದೆ. ತುಮಕೂರು, ದೇವರಾಯನದುರ್ಗ, ಕೊರಟಗೆರೆ ಮುಂತಾದ ಕಡೆಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಒಂದು ಪಿಶಾಚಿಯ ಕಥೆ, ಹಿಂದಿಯಲ್ಲಿ ಕ್ರ್ಯಾಕ್, ಆರ್ಟಿಕಲ್ 370 ರಿಲೀಸ್ ಆಗಿದೆ.
ಶುಕ್ರವಾರ ಬಿಡುಗಡೆಯಾಗುವ ತೆಲುಗು ಸಿನಿಮಾಗಳು
- – ಸಿದ್ಧಾರ್ಥ್ ರಾಯ್
- – ಸುಂದರಂ ಮಾಸ್ಟರ್
- – ಮಸ್ತು ಶೇಡ್ಸ್ ಉನ್ನೈ ರಾ…
- – ಮುಖ್ಯ ಗಮನಿಕ
- ತಮಿಳು ಸಿನಿಮಾಗಳು
- – ಬರ್ತ್ಮಾರ್ಕ್
- – ಪಂಬಾತ್ತಂ