ಬೆಂಗಳೂರು: ನಟ ಯುವ ರಾಜ್‌ಕುಮಾರ್ (Yuva Rajkumar) ನಟಿ ಸಪ್ತಮಿ ಗೌಡ (Sapthami Gowda) ಜತೆ ಸಂಬಂಧ ಹೊಂದಿದ್ದಾರೆ ಎಂಬುದಾಗಿ ಯುವ ಪತ್ನಿ ಶ್ರೀದೇವಿ ಭೈರಪ್ಪ ಆರೋಪಿಸಿದ್ದರು. ಇದರ ಬೆನ್ನಲ್ಲೇ ಶ್ರೀದೇವಿ ವಿರುದ್ಧ ಕಾನೂನು ಹೋರಾಟಕ್ಕೆ ಸಪ್ತಮಿ ಗೌಡ ಕುಟುಂಬ ನಿರ್ಧರಿಸಿತ್ತು. ಇದೀಗ ಸಪ್ತಮಿ ಗೌಡ ಬಾಯ್‌ಫ್ರೆಂಡ್ ಕುರಿತಾದ ಸುದ್ದಿಗಳು ಭಾರಿ ವೈರಲ್ ಆಗುತ್ತಿವೆ. ಕೆಲವು ದಿನಗಳ ಹಿಂದೆ ನನ್ನಮ್ಮ ಸೂಪರ್‌ಸ್ಟಾರ್ ರಿಯಾಲಿಟಿ ಶೋ ಫೈನಲ್ ವೇದಿಕೆಗೆ ಬಂದಿದ್ದ ಸಪ್ತಮಿ ಗೌಡ ತಮ್ಮ ಲವ್ ಲೈಫ್ ಬಗ್ಗೆ ಮಾತನಾಡಿದ್ದರು. ʻನನಗೊಂದು ಲವ್ ಬ್ರೇಕಪ್ ಆಗಿದೆ, ಸದ್ಯಕ್ಕೆ ಲವ್ ಮಾಡಲ್ಲʼ ಎಂದು ನೇರವಾಗಿಯೇ ಸಪ್ತಮಿ ಗೌಡ ಹೇಳಿದ್ದಾರೆ.
ಸಪ್ತಮಿ ಹೇಳಿದ್ದೇನು?
‘ಹೌದು ನನಗೆ ಬಾಯ್‌ಫ್ರೆಂಡ್ ಇದ್ದ. ಆದರೆ ಈಗ ಇಲ್ಲ. ಅಂದರೆ ನನ್ನ ಜತೆ ಇಲ್ಲ. ಹೊಸ ಅಪ್ಲಿಕೇಶನ್‌ಗೂ ಅವಕಾಶ ಇಲ್ಲ. ಯಾಕೆಂದರೆ, ನನಗೆ ಈಗ ಕೆಲಸ ಸಿಕ್ಕಾಪಟ್ಟೆ ಮುಖ್ಯ ಆಗಿದೆ. ಅದರಲ್ಲೇ ಬ್ಯೂಸಿ ಆಗಿದ್ದೇನೆ. ಅದರ ಮೇಲೆಯೇ ಹೆಚ್ಚು ಫೋಕಸ್ ಆಗಿದ್ದೇನೆ. ಬೇರೆ ಯಾವುದಕ್ಕೂ ನನಗೆ ಟೈಮ್ ಇಲ್ಲ. ಹಾಗಾಗಿ ಹೊಸ ಅಪ್ಲಿಕೇಶನ್‌ಅನ್ನು ಯಾರಿಂದಲೂ ತೆಗೆದುಕೊಳ್ಳುತ್ತಿಲ್ಲʼ ಎಂದು ಹೇಳಿದ್ದರು. ಇದೀಗ ಸಪ್ತಮಿ ಕೊಟ್ಟಿರುವ ಹೇಳಿಕೆ ಭಾರಿ ವೈರಲ್ ಆಗುತ್ತಿದೆ.
ಡಾ. ರಾಜ್‌ಕುಮಾರ್ ವಂಶದ ಕುಡಿ, ನಟ ಯುವ ರಾಜ್‌ಕುಮಾರ್ (Yuva Rajkumar) ಅವರು ಪತ್ನಿ ಶ್ರೀದೇವಿ ಭೈರಪ್ಪ (Sridevi Byrappa) ಅವರಿಗೆ ಡಿವೋರ್ಸ್ ನೋಟಿಸ್ ನೀಡಿದ ಬಳಿಕ ಇಬ್ಬರ ನಡುವಿನ ಆರೋಪ- ಪ್ರತ್ಯಾರೋಪಗಳು ಜಾಸ್ತಿಯಾತ್ತು. ಶ್ರೀದೇವಿ ಭೈರಪ್ಪ ಅವರು ರಾಧಯ್ಯ ಎಂಬ ವ್ಯಕ್ತಿ ಜತೆ ಅನೈತಿಕ ಸಂಬಂಧ ಹೊಂದಿದ್ದಾರೆ” ಎಂಬುದಾಗಿ ಯುವ ರಾಜ್‌ಕುಮಾರ್ ಪರ ವಕೀಲ ಸಿರಿಲ್ ಪ್ರಸಾದ್ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದರು. ಇನ್ನು, ನಟನ ಲೀಗಲ್ ನೋಟಿಸ್‌ಗೆ ಉತ್ತರಿಸಿದ ಶ್ರೀದೇವಿ ಭೈರಪ್ಪ “ಯುವ ರಾಜ್‌ಕುಮಾರ್ ನಟಿ ಸಪ್ತಮಿ ಗೌಡ (Sapthami Gowda) ಜತೆ ಸಂಬಂಧ ಹೊಂದಿದ್ದಾರೆ” ಎಂಬುದಾಗಿ ಆರೋಪಿಸಿದ್ದರು. “ಸಪ್ತಮಿ ಗೌಡ ಜತೆಗೆ ಯುವ ರಾಜ್‌ಕುಮಾರ್ ಒಂದು ವರ್ಷದಿಂದ ಸಂಬಂಧ ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ನನ್ನನ್ನು ಮನೆಯಿಂದ ಹೊರಹಾಕಲು ಪ್ರಯತ್ನಿಸಿದರು. ಪ್ರೀತಿಸಿ ಮದುವೆಯಾದ ಯುವ ರಾಜ್‌ಕುಮಾರ್, ಬಳಿಕ ಸಪ್ತಮಿ ಗೌಡ ಹಿಂದೆ ಬಿದ್ದಿದ್ದಾರೆ” ಎಂಬುದಾಗಿ ಶ್ರೀದೇವಿ ಭೈರಪ್ಪ ಆರೋಪಿಸಿದ್ದರು. ಇದರ ಬೆನ್ನಲ್ಲೇ ಸಪ್ತಮಿ ಅವರ ಬಾಯ್‌ಫ್ರೆಂಡ್ ಕುರಿತಾದ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: Sapthami Gowda: ʻಯುವʼ ಸಿನಿಮಾದಲ್ಲಿನ ಪಾತ್ರ ಬಹಿರಂಗ ಪಡಿಸಿದ ಹೊಂಬಾಳೆ; ಇದು ಸಪ್ತಮಿ ಗೌಡ ಬರ್ತಡೇ ಸ್ಪೆಷಲ್!
ಯುವ ಪರ ವಕೀಲರು ಹೇಳಿದ್ದೇನು?
ಯುವ ರಾಜ್‌ಕುಮಾರ್ ಪರ ವಕೀಲ ಸಿರಿಲ್ ಪ್ರಸಾದ್ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. “ಮಾನಸಿಕ ಹಾಗೂ ದೈಹಿಕ ದೌರ್ಜನ್ಯದ ಆಧಾರದ ಮೇಲೆ ನಾವು ಅರ್ಜಿ ಹಾಕಿದ್ದೇವೆ. ಒಟ್ಟು 54 ಪೇಜಿನ ಡಿವೋರ್ಸ್ ಪಿಟೀಷನ್ ಹಾಕಿದ್ದೇವೆ. ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ, ಇವರು ನೋಟಿಸ್ ಜಾರಿಗೊಳಿಸಲಾಗಿದೆ. ಶ್ರೀದೇವಿ ಭೈರಪ್ಪ ಅವರಿಗೆ ರಾಧಯ್ಯ ಎಂಬ ವ್ಯಕ್ತಿ ಜತೆ ಅಕ್ರಮ ಸಂಬಂಧ ಇದೆ. ಇದರಿಂದಾಗಿ ಕಳೆದ ಎರಡು ವರ್ಷಗಳಿಂದ ಯುವ ಹಾಗೂ ಶ್ರೀದೇವಿ ನಡುವಿನ ಸಂಬಂಧ ಹಳಸಿತ್ತು” ಎಂಬುದಾಗಿ ಅವರು ಹೇಳಿದ್ದರು
“ನಾನು ಅಮೆರಿಕದಲ್ಲಿ ಇರುತ್ತೇನೆ, ನೀನು ಬೆಂಗಳೂರಿನಲ್ಲಿಯೇ ಇರು ಎಂಬುದಾಗಿ ಕಿರುಕುಳ ಕೊಟ್ಟಿದ್ದಾರೆ. ಒಂದು ತಿಂಗಳ ಹಿಂದೆ ರಾಧಯ್ಯನಿಗೆ ಮದುವೆ ಆಗಿದೆ. ಆ ಸಮಯದಲ್ಲಿ ಆಕೆ ಬಹಳ ಖಿನ್ನತೆಗೆ ಜಾರಿದ್ದರು. ಇದಕ್ಕೆ ಈಗ ಯುವನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ದೈಹಿಕವಾಗಿ ಸಂಪರ್ಕಿಸಲು ಹೋದಾಗ ಅವಮಾನ ಮಾಡುತ್ತಿದ್ದರು. ಹಲ್ಲುಜ್ಜಿಕೊಂಡು ಬಾ, ಸ್ನಾನ ಮಾಡು ಅಂತ ಹೇಳುತ್ತಿದ್ದರು. ನೀನು ದೈಹಿಕವಾಗಿ ಫಿಟ್ ಇಲ್ಲ, ರಾಧಯ್ಯ ಫಿಟ್ ಇದ್ದಾನೆ ಎಂದು ಅವಮಾನ ಮಾಡುತ್ತಿದ್ದರು. ರಾಧಯ್ಯನ ಹೆಂಡತಿ ಮನೆಯಲ್ಲಿ ಇದ್ದಿದ್ದಾಗ ಆತನ ಮನೆಗೆ ಹೋಗುತ್ತಾರೆ. ಈ ರೀತಿಯ ಸಂಬಂಧ ಇಟ್ಟುಕೊಂಡಿದ್ದಾರೆ” ಎಂಬುದಾಗಿ ತಿಳಿಸಿದ್ದರು.