Site icon Vistara News

Sapthami Gowda: ʻಯುವʼ ಹೇಳಿದ್ದಕ್ಕೆ ಮುಂದುವರಿದೆ, ನನ್ನದೂ ತಪ್ಪಿದೆ; ಸಪ್ತಮಿ ಗೌಡ ಆಡಿಯೊ ವೈರಲ್!

Sapthami Gowda viral audio about yuva Sapthami Begging For Mercy Producer

ಬೆಂಗಳೂರು: ನಟ ಯುವ ರಾಜ್‌ಕುಮಾರ್‌ (Yuva Rajkumar) ನಟಿ ಸಪ್ತಮಿ ಗೌಡ (Sapthami Gowda) ಜತೆ ಸಂಬಂಧ ಹೊಂದಿದ್ದಾರೆ ಎಂಬುದಾಗಿ ಯುವ ಪತ್ನಿ ಶ್ರೀದೇವಿ ಭೈರಪ್ಪ ಆರೋಪಿಸಿದ್ದರು. ಇದರ ಬೆನ್ನಲ್ಲೇ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್ ದಾಖಲಿಸಿದ್ದರು ಸಪ್ತಮಿ ಗೌಡ. ಇದರ ನಡುವೆ ಈಗ ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ʻʻಗುರು (ಯುವ ಮೂಲ ಹೆಸರು) ಬಂದು ಎಲ್ಲವನ್ನೂ ಹೇಳಿಕೊಂಡ ಮೇಲೆ ನಾನು ಮುಂದುವರಿದೆ. ಅದು ನಿಮ್ಮ ಸೆಟ್​ನಲ್ಲಿ ಆಯ್ತು, ಆಗಬಾರದಿತ್ತುʼʼ ಎಂಬ ಆಡಿಯೊ ವೈರಲ್‌ ಆಗಿದೆ.

ಸಪ್ತಮಿ ಆಡಿಯೊ

https://vistaranews.com/wp-content/uploads/2024/06/Sapthami-gowda-online-audio-converter.com_.mp3

ಆಡಿಯೋದಲ್ಲಿ ಏನಿದೆ?

ʻಸರ್ ನಿಮಗೆ ಈಗಾಗಲೇ ವಿಷಯ ಗೊತ್ತಿರುತ್ತೆ ಏನಾಗಿದೆ ಏನು ಅಂತ. ನನ್ನ ಸೈಡ್ ಆಫ್ ದಿ ಸ್ಟೋರಿನೂ ಕೇಳಿ. ನನ್ನಿಂದ ತಪ್ಪಾಗಿಲ್ಲ ಎಂದು ನಾನು ಹೇಳ್ತಿಲ್ಲ. ಖಂಡಿತ ನನ್ನಿಂದ ತಪ್ಪಾಗಿದೆ. ನನ್ನ ಅಮ್ಮನ ಮೇಲೆ ಆಣೆ ಮಾಡಿ ಹೇಳ್ತೀನಿ ಸರ್ ನಾನು ಎಂದಿಗೂ ಸಹ ಗುರು (ಯುವ ಮೂಲ ಹೆಸರು) ಮದ್ವೆ ಬಿಟ್ಟು ಬಾ ಅಂತ ಯಾವತ್ತೂ ಹೇಳಿಲ್ಲ. ನೀವು ಬೇಕಿದ್ದರೆ ಅವನನ್ನು ಕೇಳಬಹುದು. ಯಾರನಾದರೂ ಕೇಳಬಹುದು. ಹೌದು ಇದು ನಿಮ್ಮ ಸೆಟ್‌ನಲ್ಲಿ ಆಯ್ತು ಅದಕ್ಕೆ ನಿಮಗೆ ನಮ್ಮ ಮೇಲೆ ಎಷ್ಟೇ ಕೋಪ ಇರಬಹುದು ಸರ್ ಪರವಾಗಿಲ್ಲ. ಆದರೆ ನನ್ನ ಸೈಡ್ ಆಫ್ ದಿ ಸ್ಟೋರಿಯನ್ನೂ ಕೇಳಿʼʼ ಎಂಬ ಮಾತು ಆಡಿಯೊದಲ್ಲಿದೆ.

ಸಾರಿ ಸರ್, ಜಸ್ಟ್ ಚಾನ್ಸ್ ಕೇಳ್ತಿದ್ದೀನಿ ಅಷ್ಟೇ

ʻʻಗುರುದು ಫಸ್ಟ್ ಸಿನಿಮಾ. ನಿಮಗೂ ಸಹ ಬಹಳ ಮುಖ್ಯವಾದ ಸಿನಿಮಾ. ಎಲ್ಲರೂ ಕಷ್ಟ ಪಟ್ಟು ಮಾಡಿರುವ ಸಿನಿಮಾ. ನಾನು ಮಧ್ಯೆ ಬರಲ್ಲ ಸರ್. ನಾನು ಇದನ್ನು ಇನ್ನಷ್ಟು ಕಾಂಪ್ಲೆಕ್ಸ್ ಮಾಡುವುದಿಲ್ಲ. ಬೈಯ್ಯುವುದಾದರೆ ಬೈಯ್ಯಿರಿ ಆದರೆ ನನ್ನ ಸೈಡ್ ಆಫ್ ದಿ ಸ್ಟೋರಿ ಸಹ ದಯವಿಟ್ಟು ಕೇಳಿಸಿಕೊಳ್ಳಿ. ಯಾವತ್ತಾದರೂ ಸಪ್ತಮಿ ಇಷ್ಟು ಕೆಟ್ಟವಳ ಎಂದು ಅಂದುಕೊಳ್ಳುವ ಮುಂಚೆ ಏನಾಯಿತು ಎಂದು ನನ್ನಿಂದ ಒಮ್ಮೆ ಕೇಳಿಸಿಕೊಳ್ಳಿ. ಸರ್. ನನ್ನಿಂದ ಇನ್ನೊಬ್ಬರಿಗೆ ನೋವಾಗಿದೆ. ಆದರೆ ನಿಜವಾಗಿಯೂ ನಾನು ನಂಬಿ ಮಾಡಿದ್ದು ಸರ್ ಅದನ್ನ. ಗುರು ಬಂದು ನನ್ನ ಹತ್ರ ಅಷ್ಟು ಹೇಳಿದ ಮೇಲೆಯೇ ನಾನು ಮುಂದುವರಿದೆ. ಇಲ್ಲಾಂದ್ರೆ ನಾನು… ಸಾರಿ ಸರ್, ಜಸ್ಟ್ ಚಾನ್ಸ್ ಕೇಳ್ತಿದ್ದೀನಿ ಅಷ್ಟೇʼʼ ಎಂಬ ಮಾತುಗಳು ಆಡಿಯೊದಲ್ಲಿದೆ.

‘ಯುವ’ ಸಿನಿಮಾದ ಸೆಟ್​ನಲ್ಲಿಯೇ ಶ್ರೀದೇವಿ ಬಂದು ಜಗಳ ಸಹ ಮಾಡಿದ್ದರು ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಈ ಕಾರಣಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಸಪ್ತಮಿ ಹಾಗೂ ಯುವ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದರು ಎಂಬ ಸುದ್ದಿಯೂ ಹರಿದಾಡುತ್ತಿದೆ.

ಇದನ್ನೂ ಓದಿ: Sapthami Gowda: ಯುವ ಪತ್ನಿ ವಿರುದ್ಧ ಸಪ್ತಮಿಗೌಡ ಮಾನಹಾನಿ ಕೇಸ್; ನಟಿ ಹೆಸರು ಎಲ್ಲಿಯೂ ಬಳಸದಂತೆ ಕೋರ್ಟ್ ಆದೇಶ

ಏನಿದು ಪ್ರಕರಣ?

ಡಾ.ರಾಜ್‌ಕುಮಾರ್‌ ವಂಶದ ಕುಡಿ, ನಟ ಯುವ ರಾಜ್‌ಕುಮಾರ್‌ (Yuva Rajkumar) ಅವರು ಪತ್ನಿ ಶ್ರೀದೇವಿ ಭೈರಪ್ಪ (Sridevi Byrappa) ಅವರಿಗೆ ಡಿವೋರ್ಸ್ ನೋಟಿಸ್‌ ನೀಡಿದ ಬಳಿಕ ಇಬ್ಬರ ನಡುವಿನ ಆರೋಪ- ಪ್ರತ್ಯಾರೋಪಗಳು ಜಾಸ್ತಿಯಾಗಿದ್ದವು. “ಶ್ರೀದೇವಿ ಭೈರಪ್ಪ ಅವರು ರಾಧಯ್ಯ ಎಂಬ ವ್ಯಕ್ತಿ ಜತೆ ಅನೈತಿಕ ಸಂಬಂಧ ಹೊಂದಿದ್ದಾರೆ” ಎಂಬುದಾಗಿ ಯುವ ರಾಜ್‌ಕುಮಾರ್‌ ಪರ ವಕೀಲ ಸಿರಿಲ್‌ ಪ್ರಸಾದ್‌ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದರು. ಇನ್ನು, ನಟನ ಲೀಗಲ್‌ ನೋಟಿಸ್‌ಗೆ ಉತ್ತರಿಸಿದ ಶ್ರೀದೇವಿ ಭೈರಪ್ಪ, “ಯುವ ರಾಜ್‌ಕುಮಾರ್‌ ನಟಿ ಸಪ್ತಮಿ ಗೌಡ (Sapthami Gowda) ಜತೆ ಸಂಬಂಧ ಹೊಂದಿದ್ದಾರೆ” ಎಂಬುದಾಗಿ ಆರೋಪಿಸಿದ್ದರು.

ನಟ ಯುವ ರಾಜ್‌ಕುಮಾರ್‌ ಕಳುಹಿಸಿದ ಲೀಗಲ್‌ ನೋಟಿಸ್‌ಗೆ ಶ್ರೀದೇವಿ ಭೈರಪ್ಪ ಮರುತ್ತರ ನೀಡಿದ್ದು, ಹಲವು ಆರೋಪಗಳನ್ನು ಮಾಡಿದ್ದರು. ಇದೇ ವರ್ಷದ ಮೇ 30ರಂದು ಶ್ರೀದೇವಿ ಭೈರಪ್ಪ ಅವರು ರಿಪ್ಲೈ ನೋಟಿಸ್‌ ನೀಡಿದ್ದರು “ಸಪ್ತಮಿ ಗೌಡ ಜತೆಗೆ ಯುವ ರಾಜ್‌ಕುಮಾರ್‌ ಒಂದು ವರ್ಷದಿಂದ ಸಂಬಂಧ ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ನನ್ನನ್ನು ಮನೆಯಿಂದ ಹೊರಹಾಕಲು ಪ್ರಯತ್ನಿಸಿದರು. ಪ್ರೀತಿಸಿ ಮದುವೆಯಾದ ಯುವ ರಾಜ್‌ಕುಮಾರ್‌, ಬಳಿಕ ಸಪ್ತಮಿ ಗೌಡ ಹಿಂದೆ ಬಿದ್ದಿದ್ದಾರೆ” ಎಂಬುದಾಗಿ ಶ್ರೀದೇವಿ ಭೈರಪ್ಪ ಆರೋಪಿಸಿದ್ದರು.

Exit mobile version