ಬೆಂಗಳೂರು: ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಬಿ’ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಹೇಮಂತ್ ಎಂ ರಾವ್ ʻಭೈರವನ ಕೊನೆ ಪಾಠʼ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ (Shiva Rajkumar) ಈ ಸಿನಿಮಾಗೆ ನಾಯಕ. ಇದೀಗ ಸಿನಿಮಾದ ಮೊದಲ ಲುಕ್ ಬಿಡುಗಡೆಯಾಗಿದೆ. ಶಿವಣ್ಣ ಬಿಳಿ ಗಡ್ಡ-ಮೀಸೆಯ ಯೋಧನಾಗಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಗಮನ ಸೆಳೆದಿದೆ.
ಸಿನಿಮಾದ ಟೈಟಲ್ ಅನೌನ್ಸ್ ಆದಾಗಲೇ ಶಿವಣ್ಣ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದರು. ಆದರೀಗ ಶಿವರಾಜ್ ಕುಮಾರ್ ಅವರ ಹೊಸ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಭೈರವ ಲುಕ್‌ನಲ್ಲಿ ಶಿವಣ್ಣ ಅವರ ಕುಮಾರ್) ಗಡ್ಡ ಹಾಗೂ ಮೀಸೆ ಬೆಳ್ಳಗಾಗಿದೆ. ಅವನು ಬೆನ್ನಿಗೆ ಬಾಣಗಳನ್ನು ಇಟ್ಟುಕೊಂಡಿದ್ದಾರೆ. ‘ಭೈರವನ ಕೊನೆ ಪಾಠ’ ಎಂಬುದರ ಜೊತೆಗೆ ‘ರಾಜನಿಗೆ ಪಾಠಗಳು’ ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿದೆ.
ಜುಲೈ 12ಕ್ಕೆ ನಟ ಶಿವರಾಜ್‌ಕುಮಾರ್ 62ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಬಾರಿ ಶಿವಣ್ಣ ಹುಟ್ಟುಹಬ್ಬಕ್ಕೆ ಸಾಕಷ್ಟು ಸರ್‌ಪ್ರೈಸ್‌ಗಳು ಕಾದಿವೆ. ಅದಕ್ಕೂ ಮುಂಚೆಯೇ ಶಿವಣ್ಣ ಇದೀಗ ಹೊಸ ಲುಕ್ ಔಟ್ ಆಗಿದೆ.
ಇದನ್ನೂ ಓದಿ: Shiva Rajkumar: ಹಾವೇರಿ ಅಪಘಾತ; ಮೃತಪಟ್ಟ ಕುಟುಂಬಗಳಿಗೆ ಧನ ಸಹಾಯ ಮಾಡಿದ ಶಿವಣ್ಣ ದಂಪತಿ
ಸ್ಯಾಂಡಲ್‌ವುಡ್‌ನಲ್ಲಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’, ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಬಿ’ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಹೇಮಂತ್ ಎಂ ರಾವ್ ʻಭೈರವನ ಕೊನೆ ಪಾಠʼ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಡಾ. ವೈಶಾಕ್ ಜೆ ಗೌಡ ಅವರು ತಮ್ಮ ನಿರ್ಮಾಣ ಸಂಸ್ಥೆಯಾದ ವಿಜೆಎಫ್ – ವೈಶಾಕ್ ಜೆ ಫಿಲ್ಮ್ಸ್ ಅಡಿಯಲ್ಲಿ ‘ಭೈರವನ ಕೊನೆ ಪಾಠ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇನ್ನು ಸಿನಿಮಾ ಟೈಟಲ್ ಕೂಡ ಕ್ಯಾಚಿ ಆಗಿದ್ದು, ಶಿವಣ್ಣ ಫ್ಯಾನ್ಸ್ ಸಖತ್ ಥ್ರಿಲ್ ಆಗೋದು ಗ್ಯಾರಂಟಿ ಎನ್ನಲಾಗುತ್ತಿದೆ. ಇನ್ನು ಸಿನಿಮಾ ಶೀರ್ಷಿಕೆ ಕುರಿತು ಹೇಮಂತ್ ರಾವ್ ಮಾತನಾಡಿ ʻʻನಮ್ಮ ಭಾಷೆಗೆ ಹತ್ತಿರವಿರುವ ಶೀರ್ಷಿಕೆಗಳನ್ನು ನಾನು ಇಷ್ಟಪಡುತ್ತೇನೆ. ಈ ಮುಂಚೆ ನಾನು ಮಾಡಿದ ಸಿನಿಮಾಗಳಾದ ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ, ಸಪ್ತ ಸಾಗರದಾಚೆ ಎಲ್ಲೋ ಹೀಗೆ ಎಲ್ಲ ಟೈಟಲ್‌ಗಳು ನಮ್ಮ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಇದೀಗ ʻಭೈರವನ ಕೊನೆ ಪಾಠʼ ಕೂಡ ವಿಭಿನ್ನ ಹಾಗೂ ಕ್ಯಾಚಿ ಟೈಟಲ್ ಆಗಿದೆ. ಶಿವಣ್ಣನ ಫ್ಯಾನ್ಸ್‌ಗೂ ಈ ಶೀರ್ಷಿಕೆ ಇಷ್ಟವಾಗಲಿದೆ. ಭೈರವ ಪಾತ್ರ ತುಂಬ ಪ್ರಮುಖವಾದದ್ದು. ಆದ್ದರಿಂದ ಕಥೆಗೆ ಸೂಕ್ತ ಎಂದೆನಿಸಿ ಈ ಶೀರ್ಷಿಕೆ ಇಟ್ಟಿದ್ದೇವೆ. ಆದರೆ ಯಾರು ಈ ಭೈರವ? ಭೈರವ ಪಾಠ ಎಂದರೆ ಏನು? ಎಂಬುದು ಕಥೆಯ ಮುಖ್ಯ ತಿರುಳಾಗಿದೆʼʼಎಂದರು.
ಸದ್ಯಕ್ಕೆ ಶಿವರಾಜ್‌ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಒಂದೆಡೆ ನರ್ತನ್ ನಿರ್ದೇಶನದ ‘ಭೈರತಿ ರಣಗಲ್’ ಚಿತ್ರೀಕರಣ ನಡೆಯುತ್ತಿದ್ದು, ಇದರ ಜತೆಗೆ ರೋಹಿತ್ ಪದಕಿ ನಿರ್ದೇಶನದ ‘ಉತ್ತರಕಾಂಡ’ ಸಿನಿಮಾ ಮಾಡುತ್ತಿದ್ದಾರೆ ಶಿವಣ್ಣ. ಈ ನಡುವೆ ‘45’ ಸಿನಿಮಾ ಸೇರಿ ತಮಿಳು, ತೆಲುಗು ಚಿತ್ರರಂಗದಲ್ಲೂ ಶಿವಣ್ಣ ನಟಿಸುತ್ತಿದ್ದಾರೆ ಎನ್ನಲಾಗಿದೆ. ‘ಘೋಸ್ಟ್ 2’, ‘ದಳವಾಯಿ ಮುದ್ದಣ್ಣ’ ಚಿತ್ರಗಳೂ ಅವರ ಕೈಯಲ್ಲಿವೆ.