Site icon Vistara News

Shiva Rajkumar: ಶಿವಣ್ಣ ಬರ್ತ್‌ಡೇ ; ʻಭೈರತಿ ರಣಗಲ್ʼ ಟೀಸರ್‌ನಲ್ಲಿ ಮಾಸ್ ಡೈಲಾಗ್ ಮೂಲಕ ಅಬ್ಬರಿಸಿದ ಕರುನಾಡ ಕಿಂಗ್!

Shiva Rajkumar birthday Bhairathi Ranagal First Verdict teaser out

ಬೆಂಗಳೂರು: ಇಂದು ಹ್ಯಾಟ್ರಿಕ್‌ ಹೀರೊ ಶಿವರಾಜ್‌ ಕುಮಾರ್‌ (Shiva Rajkumar) ಅವರ ಜನುಮದಿನ. ಬರ್ತ್‌ಡೇ ಅಂಗವಾಗಿ ಶಿವಣ್ಣ ಅಭಿನಯದ ʻ ಭೈರತಿ ರಣಗಲ್ ʼತಂಡ ಟೀಸರ್‌ ಔಟ್‌ ಮಾಡಿದೆ. ಟೀಸರ್‌ ನೋಡಿ ಶಿವಣ್ಣ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಶಿವರಾಜ್‌ ಕುಮಾರ್‌ ಅವರು ರಗಡ್‌ ಲುಕ್‌ನಲ್ಲಿ ಅಬ್ಬರಿಸಿದ್ದಾರೆ. ʻನಾನು ತಾಳ್ಮೆ ಕಳ್ಕೊಂಡಾಗಲೆಲ್ಲ.. ತುಂಬಾ ಜನ ತಲೆಗಳ್ ಕಳ್ಕೊಂಡಿದ್ದಾರೆʼ ಎಂದು ಮಾಸ್ ಡೈಲಾಗ್‌ ಹೊಡೆದು ಅಬ್ಬರಿಸಿದ್ದಾರೆ.

ನರ್ತನ್ ನಿರ್ದೇಶನದಲ್ಲಿ ಅದ್ಧೂರಿಯಾಗಿ ಮೂಡಿಬರುತ್ತಿದೆ ಭೈರತಿ ರಣಗಲ್ ಸಿನಿಮಾ. ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿತ್ತು ಈ ಸಿನಿಮಾ. ಗೀತಾ ಪಿಕ್ಚರ್ಸ್‌ನಲಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಸೆಪ್ಟೆಂಬರ್‌ನಲ್ಲಿ ರಿಲೀಸ್ ಆಗಲಿದೆ. ಆದರೆ ದಿನಾಂಕ ಅನೌನ್ಸ್‌ ಆಗಿಲ್ಲ. ಗೀತಾ ಪಿಕ್ಚರ್ಸ್ ಅಡಿಯಲ್ಲಿ ಭೈರತಿ ರಣಗಲ್ ಸಿನಿಮಾವನ್ನು ಗೀತಾ ಶಿವರಾಜಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ವೇದ ಸಿನಿಮಾ ಯಶಸ್ಸಿನ ಬಳಿಕ ಗೀತಾ ಪಿಕ್ಚರ್ಸ್ ನಿರ್ಮಾಣ ಮಾಡ್ತಿರುವ ಎರಡನೇ ಸಿನಿಮಾ ಇದು.

ಅಂದಹಾಗೆ ಮಫ್ತಿ ಸಿನಿಮಾದ ಪ್ರೀಕ್ವೆಲ್ ಇದಾಗಿದ್ದು, ನರ್ತನ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದಲ್ಲಿ ಲಾಯರ್ ಆಗಿ ಎದುರಾಗಿದ್ದಾರೆ ಶಿವಣ್ಣ.

ಇದನ್ನೂ ಓದಿ: Shiva Rajkumar: ಕರುನಾಡ ಚಕ್ರವರ್ತಿಯ ಬಹು ನಿರೀಕ್ಷಿತ ಲುಕ್ ಬಿಡುಗಡೆ ಮಾಡಿದ ʻಉತ್ತರಕಾಂಡʼ!

ಆನಂದ್ ಆಡಿಯೋಗೆ ಭೈರತಿ ಹಕ್ಕುಗಳು

ಆನಂದ್ ಆಡಿಯೋ ಸಂಸ್ಥೆ ಭೈರತಿ ರಣಗಲ್ ಚಿತ್ರದ ಆಡಿಯೋ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಪಡೆದುಕೊಂಡಿದೆ. ಈ ವರ್ಷ ತೆರೆಕಾಣುತ್ತಿರುವ ಕನ್ನಡದ ದೊಡ್ಡ ಸಿನಿಮಾ ಇದು. ಇದೀಗ ಚಿತ್ರದ ಜೊತೆ ಕೈ ಜೋಡಿಸಿರುವುದು ನಮಗೂ ಖುಷಿ ತಂದಿದೆ. ಪ್ರಚಾರ ಕೆಲಸವೂ ದೊಡ್ಡ ಮಟ್ಟದಲ್ಲಿಯೇ ಸಾಗಲಿದೆ ಎಂದಿದ್ದಾರೆ ಆನಂದ್ ಆಡಿಯೋದ ಶ್ಯಾಮ್ ಚಾಬ್ರಿಯಾ.

ಕೆಲ ಮೂಲಗಳ ಪ್ರಕಾರ, ಭೈರತಿ ರಣಗಲ್ ಚಿತ್ರದ ಆಡಿಯೋ ಹಕ್ಕನ್ನು ಬಹುಕೋಟಿ ಕೊಟ್ಟು ಖರೀದಿಸಿದೆಯಂತೆ ಆನಂದ್ ಆಡಿಯೋ. ಇನ್ನೇನು ಶೀಘ್ರದಲ್ಲಿ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದ್ದು, ಚಿತ್ರಮಂದಿರದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಸಿನಿಮಾ ರಿಲೀಸ್ ಆಗಲಿದೆ.

ʻಭೈರವನ ಕೊನೆ ಪಾಠʼ

‘ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮತ್ತು ಬಿ’ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಹೇಮಂತ್‌ ಎಂ ರಾವ್‌ ʻಭೈರವನ ಕೊನೆ ಪಾಠʼ ಸಿನಿಮಾಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ (Shiva Rajkumar) ಈ ಸಿನಿಮಾಗೆ ನಾಯಕ. ಇದೀಗ ಸಿನಿಮಾದ ಮೊದಲ ಲುಕ್ ಬಿಡುಗಡೆಯಾಗಿದೆ. ಶಿವಣ್ಣ ಬಿಳಿ ಗಡ್ಡ-ಮೀಸೆಯ ಯೋಧನಾಗಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಗಮನ ಸೆಳೆದಿದೆ.

ಸಿನಿಮಾದ ಟೈಟಲ್‌ ಅನೌನ್ಸ್‌ ಆದಾಗಲೇ ಶಿವಣ್ಣ ಫ್ಯಾನ್ಸ್‌ ಸಖತ್‌ ಥ್ರಿಲ್‌ ಆಗಿದ್ದರು. ಆದರೀಗ ಶಿವರಾಜ್‌ ಕುಮಾರ್‌ ಅವರ ಹೊಸ ಲುಕ್‌ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಭೈರವ ಲುಕ್‌ನಲ್ಲಿ ಶಿವಣ್ಣ ಅವರ ಕುಮಾರ್) ಗಡ್ಡ ಹಾಗೂ ಮೀಸೆ ಬೆಳ್ಳಗಾಗಿದೆ. ಅವನು ಬೆನ್ನಿಗೆ ಬಾಣಗಳನ್ನು ಇಟ್ಟುಕೊಂಡಿದ್ದಾರೆ. ‘ಭೈರವನ ಕೊನೆ ಪಾಠ’ ಎಂಬುದರ ಜೊತೆಗೆ ‘ರಾಜನಿಗೆ ಪಾಠಗಳು’ ಎಂದು ಇಂಗ್ಲಿಷ್​ನಲ್ಲಿ ಬರೆಯಲಾಗಿದೆ.

ಜುಲೈ 12ಕ್ಕೆ ನಟ ಶಿವರಾಜ್‌ಕುಮಾರ್ 62ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಬಾರಿ ಶಿವಣ್ಣ ಹುಟ್ಟುಹಬ್ಬಕ್ಕೆ ಸಾಕಷ್ಟು ಸರ್‌ಪ್ರೈಸ್‌ಗಳು ಕಾದಿವೆ. ಅದಕ್ಕೂ ಮುಂಚೆಯೇ ಶಿವಣ್ಣ ಇದೀಗ ಹೊಸ ಲುಕ್‌ ಔಟ್‌ ಆಗಿದೆ.

Exit mobile version