ಬೆಂಗಳೂರು: ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ (Shiva Rajkumar) ಹಾಗೂ ಆರ್ ಚಂದ್ರು ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಘೋಷಣೆ ಆಗಿರುವುದು ಗೊತ್ತೇ ಇದೆ. ಆರ್ ಚಂದ್ರು (R Chandru) ಅವರು ಇತ್ತೀಚೆಗೆ ‘ಆರ್ಸಿ ಸ್ಟುಡಿಯೊ’ ಆರಂಭಿಸಿ ಐದು ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ಈಗ ಆ ಐದು ಸಿನಿಮಾಗಳಲ್ಲಿ ಮೊದಲ ಚಿತ್ರವಾಗಿ ‘ಡಾರ್ಲಿಂಗ್’ ಕೃಷ್ಣ ನಟನೆಯ ‘ಫಾದರ್’ ಸಿನಿಮಾ (Father Kannada Movie) ಸೆಟ್ಟೇರಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಈ ಸಿನಿಮಾದ ಮುಹೂರ್ತ ನಡೆಯಿತು. ಭಾರತೀಯ ಚಿತ್ರರಂಗದಲ್ಲೇ ಹೊಸ ಮೈಲುಗಲ್ಲು ಸೃಷ್ಟಿಸಿದ ನಿರ್ದೇಶಕ ಆರ್ ಚಂದ್ರು ಅವರು ಆರ್ ಸಿ ಪ್ರೊಡಕ್ಷನ್ ನಡಿ ಐದು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ʻಶ್ರೀರಾಮಬಾಣʼ, ʻಫಾದರ್ʼ, ʻPOKʼ, ʻಡಾಗ್ʼ ಹಾಗೂ ಕಬ್ಜ-2 ಟೈಟಲ್ ಘೋಷಣೆಯಾಗಿತ್ತು.
ಶಾಸಕ ಪ್ರದೀಪ್ ಈಶ್ವರ್, ರಾಜಕೀಯ ಮುಖಂಡ ಎಚ್.ಎಂ. ರೇವಣ್ಣ, ನಿರ್ಮಾಪಕ ಕೆ.ಪಿ. ಶ್ರೀಕಾಂತ್, ನಿರ್ದೇಶಕ ಚೇತನ್ ಕುಮಾರ್, ಮಂಜುನಾಥ್, ಮಮತಾ ದೇವರಾಜ್ ಮುಂತಾದವರು ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು ‘ಫಾದರ್’ ಚಿತ್ರತಂಡಕ್ಕೆ ಶುಭ ಹಾರೈಸಿದರು
ಶಿವರಾಜ್‌ಕುಮಾರ್ ನಟಿಸಿದ್ದ ‘ಭೈರಾಗಿ’ ಸಿನಿಮಾಗೆ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ್ದ ರಾಜ್ ಮೋಹನ್ ಅವರು ಈಗ ‘ಫಾದರ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ನಾಯಕರಾಗಿದ್ದು, ಅವರಿಗೆ ಅಮೃತಾ ಅಯ್ಯಂಗಾರ್ ಜೋಡಿ ಆಗಿದ್ದಾರೆ. ಪ್ರಕಾಶ್ ರೈ, ಸುನೀಲ್ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಬಾಲಿವುಡ್ ನಿರ್ಮಾಪಕ ಆನಂದ್ ಪಂಡಿತ್ ಈ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ. ‘ಹನುಮಾನ್’ ಸಿನಿಮಾದ ಖ್ಯಾತಿಯ ಹರಿ ಅವರು ಸಂಗೀತ ನೀಡುತ್ತಿದ್ದಾರೆ ಎಂದು ಆರ್. ಚಂದ್ರು ಮಾಹಿತಿ ಹಂಚಿಕೊಂಡಿದ್ದಾರೆ. ಇದೊಂದು ತಂದೆ-ಮಗನ ನಡುವಿನ ಬಾಂಧವ್ಯದ ಕಹಾನಿ ಇರಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಇದನ್ನೂ ಓದಿ: Shiva Rajkumar: `ವಿಕ್ಟೋರಿಯಾ ಮಾನ್ಸನ್’ ಫಸ್ಟ್ ಲುಕ್ ಔಟ್: ಶಿವಣ್ಣ ಸಾಥ್!
ಆರ್. ಚಂದ್ರು ನಿರ್ದೇಶನದ, ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ (Kabzaa Movie) ಎರಡು ದಿನಗಳಲ್ಲೇ ನೂರು ಕೋಟಿ ರೂ. ಕ್ಲಬ್ ಸೇರಿತ್ತು. ಆದರೆ ಭಾರಿ ಕಲೆಕ್ಷನ್ ಮಾಡಿರುವ ಈ ಸಿನಿಮಾವನ್ನು ಸಾಕಷ್ಟು ಜನ ಇಷ್ಟ ಪಟ್ಟಿರಲಿಲ್ಲ. ಹೀಗಾಗಿ ʻಕಬ್ಜʼ ಸೀಕ್ವೆಲ್ ಯಾವುದೇ ಕಾರಣಕ್ಕೂ ಸಿದ್ಧವಾಗುವುದಿಲ್ಲ ಎಂದು ಹಲವರು ಅಂದುಕೊಂಡಿದ್ದರು. ಇದಾದ ಬಳಿಕ ಜನವರಿ 23ರಂದು ಚಂದ್ರು ಅವರು ಐದು ಸಿನಿಮಾ ಘೋಷಣೆ ಮಾಡಿದರು.
ಭಾರತೀಯ ಚಿತ್ರರಂಗದಲ್ಲೇ ಹೊಸ ಮೈಲುಗಲ್ಲು ಸೃಷ್ಟಿಸಿದ ನಿರ್ದೇಶಕ ಆರ್ ಚಂದ್ರು ಅವರು ಆರ್ ಸಿ ಪ್ರೊಡಕ್ಷನ್ ನಡಿ ಐದು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ʻಶ್ರೀರಾಮಬಾಣʼ, ʻಫಾದರ್ʼ, ʻPOKʼ, ʻಡಾಗ್ʼ ಹಾಗೂ ಕಬ್ಜ-2 ಟೈಟಲ್ ಘೋಷಣೆಯಾಗಿತ್ತು.
ಈ ಬಗ್ಗೆ ಆರ್ ಚಂದ್ರು ಮಾತನಾಡಿ ʻʻಯಾವುದೇ ಕೆಲಸ ಮಾಡಬೇಕು ಅಂದರೆ ಯೋಗಬೇಕು. ಯೋಗ್ಯತೆ ಬೇಕು. 10 ತಿಂಗಳು ನಾನು ಸುಮ್ನೆ ಕೂತಿರಲಿಲ್ಲ. ಕೈ ಹಾಕಿದರೆ ಕರಂಟ್ ಕಂಬಕ್ಕೆ ಕೈ ಹಾಕಬಾರದು. ಚಂದ್ರಲೋಕಕ್ಕೆ ಕೈ ಹಾಕಬೇಕು. ಕಬ್ಜ’ ಸಿನಿಮಾದ ಕಲೆಕ್ಷನ್ ಫೇಕ್ ಎಂದು ಅನೇಕರು ಹೇಳಿದ್ದರು.‘ಕಬ್ಜ ಸಿನಿಮಾದಿಂದ ನಾನು ಸರ್ಕಾರಕ್ಕೆ 20 ಕೋಟಿ ರೂಪಾಯಿ ಟ್ಯಾಕ್ಸ್ ಕಟ್ಟಿದ್ದೀನಿ. ಇದನ್ನು ಓಪನ್ ಆಗಿ ಹೇಳಿಕೊಳ್ಳುತ್ತಿದ್ದೇನೆ. ಕನ್ನಡ ಸಿನಿಮಾಗಳನ್ನು ನೋಡ್ಬೇಕು ಅಂದ್ರೆ ಒಳ್ಳೊಳ್ಳೆ ಸಿನಿಮಾಗಳನ್ನ ಮಾಡ್ಬೇಕು. ಬಾಯಿ ಇದೆ ಎಂದು ಮಾತನಾಡಿದರೆ ಐದು ಸಿನಿಮಾ, ಹತ್ತು ಸಿನಿಮಾ ಆಗಲ್ಲ’ ಎಂದು ಅವರು ನೇರವಾಗಿ ಹೇಳಿದ್ದರು.