Site icon Vistara News

Shiva Rajkumar: ಶಿವಣ್ಣನ ಬರ್ತ್‌ಡೇ ದಿನ, ಬರೋಬ್ಬರಿ 4 ತಿಂಗಳ ಬಳಿಕ ಒಟಿಟಿಗೆ ʻಕರಟಕ ದಮನಕʼ ಎಂಟ್ರಿ!

Shiva Rajkumar karataka damanaka In ott

ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಡ್ಯಾನ್ಸ್ ಕಿಂಗ್ ಪ್ರಭುದೇವ ಕಾಂಬಿನೇಶನ್‌ನ ಯೋಗರಾಜ್ ಭಟ್ ಆ್ಯಕ್ಷನ್ ಕಟ್ ಹೇಳಿರುವ ʻಕರಟಕ ದಮನಕʼ (Karataka Damanaka)  ಮಾರ್ಚ್‌ 8ರಲ್ಲಿ ತೆರೆಗೆ ಬಂದಿತ್ತು. ಇದೀಗ ಬರೋಬ್ಬರಿ ನಾಲ್ಕು ತಿಂಗಳ ಬಳಿಕ ಒಟಿಟಿಗೆ (Shiva Rajkumar) ಲಗ್ಗೆ ಇಟ್ಟಿದೆ. ಇಂದು ಶಿವರಾಜ್‌ ಕುಮಾರ್‌ ಅವರ ಜನುಮದಿನ. ಹೀಗಾಗಿ ಸಾಲು ಸಾಲು ಸಾಲು ಸಿನಿಮಾಮಗಳು ಬಿಡುಗಡೆಯಾಗಿವೆ. ಇದರ ಜತೆಗೆ ʻಕರಟಕ ದಮನಕʼ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದೆ.

ರಾಕ್‌ಲೈನ್ ವೆಂಕಟೇಶ್ ‘ಕರಟಕ ದಮನಕ’ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಪ್ರಿಯಾ ಆನಂದ್ ಹಾಗೂ ನಿಶ್ವಿಕಾ ನಾಯ್ಡು ಚಿತ್ರದಲ್ಲಿ ಶಿವಣ್ಣ-ಪ್ರಭುದೇವಾಗೆ ನಾಯಕಿಯರಾಗಿ ನಟಿಸಿದ್ದರು.ವಿ. ಹರಿಕೃಷ್ಣ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ. ರವಿಶಂಕರ್, ರಂಗಾಯಣ ರಘು, ರಾಕ್‌ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.ಅಮೇಜಾನ್ ಪ್ರೈಂನಲ್ಲಿ ‘ಕರಟಕ ದಮನಕ’ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಸಾಮಾನ್ಯವಾಗಿ ತೆರೆಕಂಡ 45 ದಿನಕ್ಕೆಲ್ಲಾ ಸಿನಿಮಾಗಳು ಓಟಿಟಿಗೆ ಬರ್ತಾವೆ. 25 ದಿನಕ್ಕೆ ದೊಡ್ಡ ಚಿತ್ರಗಳು ಸ್ಟ್ರೀಮಿಂಗ್ ಆಗುತ್ತಿವೆ. ಆದರೆ ಯಾಕೋ ‘ಕರಟಕ ದಮನಕ’ 4 ತಿಂಗಳ ಬಳಿಕ ಬಂದಿದೆ.

ರಾಕ್ ಲೈನ್ ವೆಂಕಟೇಶ್ ಕೂಡ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸಿದ್ದರು. ʻಕರಟಕ ದಮನಕʼ ಎಂದರೆ ‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು ಕರಟಕ ಇನ್ನೊಂದರ ಹೆಸರು ದಮನಕ. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಈ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ. ಸಂತೋಷ್ ರೈ ಪಾತಾಜೆ ಈ ಚಿತ್ರದ ಛಾಯಾಗ್ರಾಹಕರು. ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ನಾಯಕಿಯರು. ಮುಖ್ಯ ಮಂತ್ರಿ ಚಂದ್ರು ಹಾಗೂ ತನಿಕೆಲ್ಲ ಭರಣಿ ಅವರಂತಹ ಹಿರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: Shiva Rajkumar: ಶಿವರಾಜ್‌ಕುಮಾರ್‌ ಅಭಿನಯದ ʻ45ʼ ಸಿನಿಮಾದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿದ ರಿಷಬ್ ಶೆಟ್ಟಿ!

ಸಿನಿಮಾ ಕುರಿತು ಮಾಧ್ಯಮದ ಜತೆ ಈ ಹಿಂದೆ ಯೋಗರಾಜ್‌ ಭಟ್‌ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದರು ʻʻʻಕರಟಕ ದಮನಕʼ ಲಾಕ್ ಡೌನ್‌ನಲ್ಲಿ ಹುಟ್ಟಿದ ಕಥೆ. ಈ ಚಿತ್ರಕ್ಕೂ ಮೊದಲು ಸರಸ್ವತಿ ಎಂಬ ಟೈಟಲ್‌ನಲ್ಲಿ ಅಪ್ರೋಚ್ ಮಾಡಿದ್ದೆ. ಶಿವಣ್ಣ ಕೂಡ ಕಥೆ ಒಪ್ಕೊಂಡಿದ್ದರು. ನಮ್ಮ ಇಡೀ ತಂಡ ಎನರ್ಜಿ ಕಲಿತಿದ್ದೆ ಶಿವಣ್ಣ ಅವರಿಂದ, ಪ್ರಭು ದೇವ್ ಹಾಗೂ ಶಿವಣ್ಣ ಸಿನಿಮಾದಲ್ಲಿ ಇಬ್ಬರು ದೋಸ್ತ್ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ 7 ಹಾಡುಗಳಿದ್ದು, ಹರಿಕೃಷ್ಣ ಮುತ್ತು ಪೋಣಿಸಿದಂತೆ ಹಾಡುಗಳ ಕೊಟ್ಟಿದ್ದಾರೆʼʼಎಂದು ಹೇಳಿಕೊಂಡಿದ್ದರು.

Exit mobile version