Site icon Vistara News

Shiva Rajkumar: ಅಭಿಮಾನಿಗಳಿಗೆ ಹುಟ್ಟುಹಬ್ಬದಂದು ಸಿಗಲ್ಲ ಶಿವಣ್ಣ; ಕಾರಣವೇನು?

Shiva Rajkumar Not Celebrating His Birthday On July 12

ಬೆಂಗಳೂರು:  ಜುಲೈ 12ರಂದು ಶಿವರಾಜ್ ಕುಮಾರ್ (Shiva Rajkumar) ಅವರ ಜನುಮದಿನ. ಪ್ರತಿವರ್ಷವೂ ಅಭಿಮಾನಿಗಳು ಶಿವರಾಜ್ ಕುಮಾರ್ ನಿವಾಸದ ಮುಂದೆ ನೆರೆದು ಸಂಭ್ರಮದಿಂದ ಹುಟ್ಟುಹಬ್ಬ ಆಚರಣೆ ಮಾಡುತ್ತಾರೆ. ಈ ಬಾರಿಯೂ ಸಹ ಅದೇ ಪ್ಲ್ಯಾನ್‌ನಲ್ಲಿದ್ದರು ಫ್ಯಾನ್ಸ್‌. ಆದರೀಗ ಶಿವರಾಜ್ ಕುಮಾರ್ ಅವರು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಟ್ಟಿಗೆ ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದಿದ್ದಾರೆ.

ಶಿವರಾಜ್‌ಕುಮಾರ್‌ ಅವರು ಪೋಸ್ಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ʻʻ‘ಅಭಿಮಾನಿ ದೇವರುಗಳಿಗೆ, ಪ್ರತಿ ವರ್ಷ ನನ್ನ ಹುಟ್ಟುಹಬ್ಬ ದೊಡ್ಡ ಹಬ್ಬ ಆಗೋದು ನಿಮ್ಮ ಜತೆ ಕಳೆದಾಗ. ನೀವು ಅಕ್ಕರೆಯಿಂದ ಕೊಡುವ ಹಸ್ತಲಾಘವ, ಪ್ರೀತಿಯ ಅಪ್ಪುಗೆ, ನೀಡುವ ಆಶೀರ್ವಾದ ನಿಮ್ಮ ಶಿವುಗೆ ಶ್ರೀರಕ್ಷೆ. ಈ ವರ್ಷ ಹುಟ್ಟುಹಬ್ಬಕ್ಕೆ ನಿಮ್ಮ ಜತೆ ಇರುವುದಕ್ಕೆ ಆಗುವುದಿಲ್ಲ, ಆದರೆ ವರ್ಷವಿಡೀ ಒಟ್ಟಿಗೆ ಪ್ರತಿ ದಿನ ಸೆಲೆಬ್ರೇಟ್ ಮಾಡೋಣ. ನಾನು ಹುಟ್ಟುಹಬ್ಬಕ್ಕೆ ಇಲ್ಲದೆ ಇದ್ದರೂ ನಿಮ್ಮ ಜೊತೆ ಭೈರತಿ ರಣಗಲ್ ಇರುತ್ತಾನೆ. ಜುಲೈ 12 ರಂದು ಬೆಳಿಗ್ಗೆ 10:10 ಕ್ಕೆ, ನಿಮ್ಮ ಆಶೀರ್ವಾದ ಸದಾ ಇರಲಿ’ ಎಂದಿದ್ದಾರೆ ಶಿವಣ್ಣ.

ಇದನ್ನೂ ಓದಿ: Shiva Rajkumar: ಶಿವಣ್ಣನ ಬರ್ತ್‌ಡೇಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ಭೈರತಿ ರಣಗಲ್!

ಭೈರತಿ ರಣಗಲ್’ ಟ್ರೈಲರ್, ‘ಭೈರವನ ಕೊನೆ ಪಾಠ’ ಸಿನಿಮಾದ ಪೋಸ್ಟರ್, ‘45’ ಸಿನಿಮಾದ ಪೋಸ್ಟರ್, ‘ಉತ್ತರಕಾಂಡ’ ಸಿನಿಮಾದ ಪೋಸ್ಟರ್, ಶಿವಣ್ಣ, ರಾಮ್ ಚರಣ್ ತೇಜ ಜೊತೆಗೆ ನಟಿಸುತ್ತಿರುವ ತೆಲುಗಿನ ಸಿನಿಮಾದ ಪೋಸ್ಟರ್ ಹೀಗೆ ಅನೇಕ ಸಿನಿಮಾಗಳ ಅಪ್​ಡೇಟ್​ಗಳು ಹೊರಬೀಳಲಿವೆ.

ಇತ್ತೀಚೆಗೆ ಕೆಲವು ಸಿನಿಮಾ ನಟರು ತಮ್ಮ ಹುಟ್ಟುಹಬ್ಬ ಆಚರಣೆಯಿಂದ ಹಿಂದೆ ಸರಿದಿದ್ದಾರೆ. ಇದಕ್ಕೆ ದರ್ಶನ್ ಪ್ರಕರಣವೇ ಕಾರಣ ಎನ್ನಲಾಗುತ್ತಿದೆ. ಚಿತ್ರರಂಗದ ಪ್ರಮುಖ ನಟನೊಬ್ಬ ಜೈಲಿನಲ್ಲಿರುವಾಗ ಹುಟ್ಟುಹಬ್ಬ ಆಚರಣೆ ಸೂಕ್ತವಲ್ಲ ಎಂಬ ಕಾರಣಕ್ಕೆ ನಟರುಗಳು ತಮ್ಮ ಹುಟ್ಟುಹಬ್ಬ ಆಚರಣೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.

ನರ್ತನ್ ನಿರ್ದೇಶನದಲ್ಲಿ ಅದ್ಧೂರಿಯಾಗಿ ಮೂಡಿಬರುತ್ತಿದೆ ಭೈರತಿ ರಣಗಲ್ ಸಿನಿಮಾ. ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಈ ಸಿನಿಮಾ ಇದೀಗ, ದೊಡ್ಡ ಅಚ್ಚರಿಯೊಂದನ್ನು ಎಲ್ಲರೆದಿರಿಡಲು ಸಿದ್ಧತೆ‌ ನಡೆಸಿದೆ. ಅಂದರೆ ಶಿವಣ್ಣನ ಬರ್ತಡೇಗೆ ಭೈರತಿ ರಣಗಲ್ ಚಿತ್ರದ ಟೀಸರ್ ಬಿಡುಗಡೆ ಆಗಲಿದೆ.ಗೀತಾ ಪಿಕ್ಚರ್ಸ್ ಅಡಿಯಲ್ಲಿ ಭೈರತಿ ರಣಗಲ್ ಸಿನಿಮಾವನ್ನು ಗೀತಾ ಶಿವರಾಜಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ವೇದ ಸಿನಿಮಾ ಯಶಸ್ಸಿನ ಬಳಿಕ ಗೀತಾ ಪಿಕ್ಚರ್ಸ್ ನಿರ್ಮಾಣ ಮಾಡ್ತಿರುವ ಎರಡನೇ ಸಿನಿಮಾ ಇದು.

ಆನಂದ್ ಆಡಿಯೋಗೆ ಭೈರತಿ ಹಕ್ಕುಗಳು

ಆನಂದ್ ಆಡಿಯೋ ಸಂಸ್ಥೆ ಭೈರತಿ ರಣಗಲ್ ಚಿತ್ರದ ಆಡಿಯೋ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಪಡೆದುಕೊಂಡಿದೆ. ಈ ವರ್ಷ ತೆರೆಕಾಣುತ್ತಿರುವ ಕನ್ನಡದ ದೊಡ್ಡ ಸಿನಿಮಾ ಇದು. ಇದೀಗ ಚಿತ್ರದ ಜೊತೆ ಕೈ ಜೋಡಿಸಿರುವುದು ನಮಗೂ ಖುಷಿ ತಂದಿದೆ. ಪ್ರಚಾರ ಕೆಲಸವೂ ದೊಡ್ಡ ಮಟ್ಟದಲ್ಲಿಯೇ ಸಾಗಲಿದೆ ಎಂದಿದ್ದಾರೆ ಆನಂದ್ ಆಡಿಯೋದ ಶ್ಯಾಮ್ ಚಾಬ್ರಿಯಾ.

ಕೆಲ ಮೂಲಗಳ ಪ್ರಕಾರ, ಭೈರತಿ ರಣಗಲ್ ಚಿತ್ರದ ಆಡಿಯೋ ಹಕ್ಕನ್ನು ಬಹುಕೋಟಿ ಕೊಟ್ಟು ಖರೀದಿಸಿದೆಯಂತೆ ಆನಂದ್ ಆಡಿಯೋ. ಇನ್ನೇನು ಶೀಘ್ರದಲ್ಲಿ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದ್ದು, ಚಿತ್ರಮಂದಿರದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಸಿನಿಮಾ ರಿಲೀಸ್ ಆಗಲಿದೆ.

 

Exit mobile version