ಬೆಂಗಳೂರು: ಸಿನಿಮಾಗಳಲ್ಲಿ ಡ್ಯೂಪ್ ಹಾಕುವುದು ಸರ್ವೇ ಸಾಮಾನ್ಯ. ತೆಲುಗು ನಟ ಸಾಯಿಕುಮಾರ್‌ಗೆ (Shiva Rajkumar) ಕನ್ನಡ ನಟ ಶಿವರಾಜ್‌ಕುಮಾರ್ ಒಂದು ಸಿನಿಮಾದಲ್ಲಿ ಡ್ಯೂಪ್ ಹಾಕಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ : ಸಾಯಿಕುಮಾರ್ ಈ ವಿಚಾರವನ್ನು ಬಹಿರಂಗಪಡಿಸಿದ್ದರು.ಕನ್ನಡದಲ್ಲಿ ಓಂ ಪ್ರಕಾಶ್ ರಾವ್ ನಿರ್ದೇಶನದ ‘AK-47’ ಸಿನಿಮಾ ಹಿಟ್ ಆಗಿತ್ತು. ಶಿವರಾಜ್‌ಕುಮಾರ್ ಹೀರೊ ಆಗಿ ನಟಿಸಿದ್ದ ಚಿತ್ರಕ್ಕೆ ಕೋಟಿ ರಾಮು ಬಂಡವಾಳ ಹೂಡಿದ್ದರು. ವಿಶೇಷ ಅಂದ್ರೆ ಈ ಚಿತ್ರವನ್ನು ಏಕಕಾಲಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ತೆರೆಗೆ ತರಲಾಗಿತ್ತು. ‘AK-47’ ಕನ್ನಡ ಚಿತ್ರದಲ್ಲಿ ಶಿವಣ್ಣ ಹೀರೊ ಆಗಿ ನಟಿಸಿದರೆ ತೆಲುಗಿನಲ್ಲಿ ಸಾಯಿಕುಮಾರ್ ಮಿಂಚಿದ್ದರು.
ಈ ಬಗ್ಗೆ ನಟ ಸಾಯಿ ಕುಮಾರ್ ಮಾತನಾಡಿ ʻʻAK 47 ಸಿನಿಮಾದ ಮಾಡುವಾಗ ಡಬಲ್ ವರ್ಷನ್ ಮಾಡಬೇಕು ಎಂದು ರಾಮು ಅವರ ಪ್ಲ್ಯಾನ್ ಆಗಿತ್ತು. ಲಾಕ್‌ಅಪ್‌ಡೆತ್ ಸಿನಿಮಾ ಕೊಟ್ಟಿದ್ದು ಓಂ ಪ್ರಕಾಶ್. ರಾಮು ಅವರೇ ಪ್ರೊಡ್ಯೂಸರ್ ಆಗಿದ್ದರು. ಆ ಸಿನಿಮಾ ಕನ್ನಡವನ್ನು ಶಿವಣ್ಣ ಮಾಡ್ತಾರೆ, ತೆಲುಗು ನೀವು ಮಾಡಿ ಅಂದರು. ಖಂಡಿತ ಮಾಡ್ತೀನಿ ಎಂದೆ. ಬಾಂಬೆಯಲ್ಲಿ ಮೇಜರ್ ಎಪಿಸೋಡ್ ಇತ್ತು. ಅವರದ್ದು ನಂದೂ ಸೇಮ್ ಕಾಸ್ಟ್ಯೂಮ್ ಇತ್ತು. ಆದರೆ ನಾನು ಶೂಟ್ ಮಾಡುವಾಗ ಗಾಯಕ್ಕೆ ಒಳಗಾದೆ. ನನಗೆ ಏಟು ಬಿತ್ತು. ಆಸ್ಪತ್ರೆಗೆ ಕರೆದುಕೊಂಡರು. ತಿರಗಾ ಬಂದು ಮತ್ತೆ ಶೂಟಿಂಗ್ ಬಂದೆವು. ಟೆಲಿ ಶಾಟ್ ಒಂದು ಇತ್ತು. ಬಳಿಕ ನನ್ನ ಶಾಟ್ ಎಲ್ಲ ಅವರೇ ಮಾಡಿದ್ರು. ಇನ್ನು ಫೈಟ್ ಮಾಡುವಾಗ ಅಪ್ ಶಾಟ್ ಹೊಡೆಯಬೇಕಿತ್ತು. ಶಿವಣ್ಣ ತುಂಬಾ ಚೆನ್ನಾಗಿ ಮಾಡಿದರು. ನನಗೂ ಮಾಡೋಕೆ ಹೇಳ್ತಾರೆ ಅಂತ ನನಗೆ ಭಯವಾಗಿತ್ತು. ನನ್ನನ್ನು ಕರೆದು ಮಾಡಿ ಎಂದಾಗ ಆಗಲ್ಲ ಎಂದೆ. ಇಲ್ಲ ಮಾಡಲೇಬೇಕು ಎಂದ್ರು. ಶಿವಣ್ಣ ಬಂದ್ರು. ಸೇಮ್ ಡ್ರೆಸ್‌ನಲ್ಲಿ ಇದ್ರು. ಸ್ವಲ್ಪ ಆಂಗಲ್ ಚೇಂಜ್ ಮಾಡ್ಕೊಳ್ಳಿ ಸಾಯಿಗೆ ನಾನೇ ಡ್ಯೂಪ್ ಮಾಡ್ತೀನಿ ಅಂತ ಶಿವಣ್ಣ ಮಾಡಿಬಿಟ್ರು. ಹೈದರಾಬಾದ್ ಸಂಧ್ಯಾ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ನಾನು ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿದೆ. ಸಿನಿಮಾ ಎಲ್ಲಾ ಚೆನ್ನಾಗಿತ್ತು. ಆ ಶಾಟ್‌ಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದರು. ಆದರೆ ಜನ ಅಂದುಕೊಂಡಿದ್ದು ನಾನು ಅಂತ. ಆ ಕ್ಕ್ರೆಡಿಟ್ ಶಿವಣ್ಣ ಅವರಿಗೆ ಸೇರಬೇಕು ಎಂದರು.
ಇದನ್ನೂ ಓದಿ: Ajith Kumar: ಪ್ರಶಾಂತ್ ನೀಲ್- ಅಜಿತ್ ಭೇಟಿಯಾಗಿದ್ದು ನಿಜ; ಸಿನಿಮಾ ಬಗ್ಗೆ ಮ್ಯಾನೇಜರ್ ಹೇಳಿದ್ದೇನು?
ನಟ ಸಾಯಿಕುಮಾರ್ ಅವರನ್ನು ಕನ್ನಡ ಸಿನಿರಸಿಕರು ಡೈಲಾಗ್ ಕಿಂಗ್ ಎಂದೇ ಹೇಳುತ್ತಾರೆ. ಕನ್ನಡದ ‘ಲಾಕಪ್ ಡೆತ್’ ಸಿನಿಮಾ ಮೂಲಕ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿತ್ತು. ‘ಪೊಲೀಸ್ ಸ್ಟೋರಿ’ ಸಿನಿಮಾ ದಾಖಲೆ ಬರೆದಿತ್ತು. ಮುಂದೆ ‘ಮುದ್ದಿನ ಕಣ್ಮಣಿ’, ‘ಅಗ್ನಿ ಐಪಿಎಸ್’, ‘ಪೊಲೀಸ್ ಸ್ಟೋರಿ-2’, ‘ಕಲ್ಪನಾ’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದರು. ಇದೀಗ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಎನ್ನುವ ಚಿತ್ರದಲ್ಲಿ ನಿರೂಪ್ ಭಂಡಾರಿ ಜೊತೆ ನಟಿಸುತ್ತಿದ್ದಾರೆ.