Site icon Vistara News

Shiva Rajkumar: ತಮಿಳಿನ ‘ನಾನ್ ವೈಲೆನ್ಸ್’ ಸಿನಿಮಾಗೆ ಕರುನಾಡ ಚಕ್ರವರ್ತಿ ಶಿವಣ್ಣ ಸಾಥ್: ಫಸ್ಟ್ ಲುಕ್ ಔಟ್‌!

Shiva Rajkumar support Tamil Movie Non Voilance Cinema

ಬೆಂಗಳೂರು: ತಮಿಳಿನ ʻಮೆಟ್ರೋʼ ಖ್ಯಾತಿಯ ನಿರ್ದೇಶಕ ಆನಂದ್ ಕೃಷ್ಣನ್ ಆಕ್ಷನ್ ಕಟ್ ಹೇಳುತ್ತಿರುವ ʻನಾನ್ ವೈಲೆನ್ಸ್ʼ (Shiva Rajkumar) ಸಿನಿಮಾಗೆ ನಟ ಶಿವರಾಜ್ ಕುಮಾರ್ (Non Voilance Cinema) ಸಾಥ್ ಕೊಟ್ಟಿದ್ದಾರೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ. ಶಿವಣ್ಣ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಮೆಟ್ರೋ ಶಿರೀಶ್, ಬಾಬಿ ಸಿಂಹ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸುತಿದ್ದಾರೆ. ದಿತಿ ಬಾಲನ್, ಗರುಡ ರಾಮ್, ಆದಿತ್ಯ ಕಥಿರ್ ತಾರಾಬಳಗದಲ್ಲಿದ್ದಾರೆ.

90ರ ದಶಕದಲ್ಲಿ ಮಧುರೈ ಜೈಲಿನೊಳಗೆ ಸಂಭವಿಸುವ ಘಟನೆಗಳ ಸುತ್ತ ಸುತ್ತುವ ಒಂದು ಆಕರ್ಷಕ ಚಿತ್ರಕಥೆಯನ್ನು ಆನಂದ್ ರಚಿಸಿದ್ದಾರೆ. ‘ಮೆಟ್ರೋ’ ಮತ್ತು ‘ಕೊಡಿಯಲ್ಲಿ ಒರುವನ್’ ಚಿತ್ರಗಳ ಸತತ ಗೆಲುವಿನ ನಂತರ ನಿರ್ದೇಶಕ ಆನಂದ ಕೃಷ್ಣನ್ ಈ ಚಿತ್ರದ ಮೂಲಕ ಹ್ಯಾಟ್ರಿಕ್ ಯಶಸ್ಸನ್ನು ತಮ್ಮದಾಗಿಸಿಕೊಳ್ಳವ ನಿರೀಕ್ಷೆಯಲ್ಲಿದ್ದಾರೆ.

ʻನಾನ್ ವೈಲೆನ್ಸ್ʼ ಚಿತ್ರೀಕರಣ ಮುಕ್ತಾಯ ಹಂತಕ್ಕೆ ಬಂದಿದೆ. ಶೀಘ್ರದಲ್ಲೇ ಚಿತ್ರದ ಟೀಸರ್ ಮತ್ತು ಟ್ರೈಲರ್‌ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಎಕೆ ಪಿಕ್ಚರ್ಸ್ ನಡಿ ಲೇಖಾ ನಾನ್ ವೈಲೆನ್ಸ್ ಸಿನಿಮಾ ನಿರ್ಮಾಣ ಮಾಡುತ್ತಿದ್ದು, 90ರ ದಶಕವನ್ನು ಮರುಸೃಷ್ಟಿಸಲು ಚಿತ್ರತಂಡ ಭಾರೀ ಶ್ರಮವಹಿಸುತ್ತಿದೆ. ಯುವನ್ ಶಂಕರ್ ರಾಜ್ ಸಂಗೀತ, ಎನ್ ಎಸ್ ಉದಯ್ ಕುಮಾರ್ ಛಾಯಾಗ್ರಹಣ, ಶ್ರೀಕಾಂತ್ ಎನ್ ಬಿ ಸಂಕಲನ ಚಿತ್ರಕ್ಕಿದೆ.

ಶಿವಣ್ಣ ಸಿನಿಮಾ

ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ (Shiva Rajkumar) ಹಾಗೂ ಆರ್ ಚಂದ್ರು ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಘೋಷಣೆ ಆಗಿದೆ. ಆರ್​ ಚಂದ್ರು (R Chandru) ಅವರು ಇತ್ತೀಚೆಗೆ ‘ಆರ್​ಸಿ ಸ್ಟುಡಿಯೊ’ ಆರಂಭಿಸಿ ಐದು ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ಇದೀಗ ಆರನೇ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಈ ಮುಂಚೆ ಈ ಜೋಡಿಯ ʻಮೈಲಾರಿʼ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಇದಾದ ಬಳಿಕ ಆರ್​ ಚಂದ್ರು ಅವರ ʻಕಬ್ಜʼ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಶಿವಣ್ಣ.

ಆರ್​. ಚಂದ್ರು ನಿರ್ದೇಶನದ, ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ (Kabzaa Movie) ಎರಡು ದಿನಗಳಲ್ಲೇ ನೂರು ಕೋಟಿ ರೂ. ಕ್ಲಬ್‌ ಸೇರಿತ್ತು. ಆದರೆ ಭಾರಿ ಕಲೆಕ್ಷನ್‌ ಮಾಡಿರುವ ಈ ಸಿನಿಮಾವನ್ನು ಸಾಕಷ್ಟು ಜನ ಇಷ್ಟ ಪಟ್ಟಿರಲಿಲ್ಲ. ಹೀಗಾಗಿ ʻಕಬ್ಜʼ ಸೀಕ್ವೆಲ್ ಯಾವುದೇ ಕಾರಣಕ್ಕೂ ಸಿದ್ಧವಾಗುವುದಿಲ್ಲ ಎಂದು ಹಲವರು ಅಂದುಕೊಂಡಿದ್ದರು. ಇದಾದ ಬಳಿಕ ಜನವರಿ 23ರಂದು ಚಂದ್ರು ಅವರು ಐದು ಸಿನಿಮಾ ಘೋಷಣೆ ಮಾಡಿದರು.

ಭಾರತೀಯ ಚಿತ್ರರಂಗದಲ್ಲೇ ಹೊಸ ಮೈಲುಗಲ್ಲು ಸೃಷ್ಟಿಸಿದ ನಿರ್ದೇಶಕ ಆರ್ ಚಂದ್ರು ಅವರು ಆರ್ ಸಿ ಪ್ರೊಡಕ್ಷನ್ ನಡಿ ಐದು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ʻಶ್ರೀರಾಮಬಾಣʼ, ʻಫಾದರ್ʼ, ʻPOKʼ, ʻಡಾಗ್ʼ ಹಾಗೂ ಕಬ್ಜ-2 ಟೈಟಲ್ ಘೋಷಣೆಯಾಗಿತ್ತು.

Exit mobile version