ಬೆಂಗಳೂರು: ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ (Shiva Rajkumar) ಹಾಗೂ ಆರ್ ಚಂದ್ರು ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಘೋಷಣೆ ಆಗಿದೆ. ಆರ್ ಚಂದ್ರು (R Chandru) ಅವರು ಇತ್ತೀಚೆಗೆ ‘ಆರ್ಸಿ ಸ್ಟುಡಿಯೊ’ ಆರಂಭಿಸಿ ಐದು ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ಇದೀಗ ಆರನೇ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಮುಂಚೆ ಈ ಜೋಡಿಯ ʻಮೈಲಾರಿʼ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಇದಾದ ಬಳಿಕ ಆರ್ ಚಂದ್ರು ಅವರ ʻಕಬ್ಜʼ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಶಿವಣ್ಣ.
2010ರಲ್ಲಿ ಶಿವರಾಜ್‌ಕುಮಾರ್ ಅವರ ʻಮೈಲಾರಿʼ ಸಿನಿಮಾ ಮುಹೂರ್ತ ನಡೆದು ಇಂದಿಗೆ (ಏಪ್ರಿಲ್ 1) 14 ವರ್ಷಗಳು ಕಳೆದಿವೆ. ಈ ಬಗ್ಗೆ ಆರ್ ಚಂದ್ರು ಅವರು ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ. ಕನ್ನಡದ ಸೂಪರ್ ಹಿಟ್ ಚಿತ್ರ `ಮೈಲಾರಿ’ ಮುಹೂರ್ತಕ್ಕೆ 14 ವರ್ಷಗಳು ತುಂಬಿದ ಈ ಶುಭ ಸಂದರ್ಭದಲ್ಲಿ, ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಅವರಿಗೆ ಹೊಸ ಚಿತ್ರ ಆರಂಭಿಸುತ್ತಿರುವುದು ಮತ್ತಷ್ಟು ಖುಷಿ ತಂದಿದೆ. ತಮ್ಮೆಲ್ಲರ ಆಶೀರ್ವಾದ ಇರಲಿ. ಧನ್ಯವಾದಗಳು. ಆರ್ ಸಿ ಸ್ಟುಡಿಯೋಸ್ʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Shiva Rajkumar: ನಟ ಶಿವ ರಾಜ್‌ಕುಮಾರ್ ಸಿನಿಮಾ, ಜಾಹೀರಾತು ನಿಷೇಧಿಸಿ; ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಕನ್ನಡದ ಸೂಪರ್ ಹಿಟ್ ಚಿತ್ರ ಮೈಲಾರಿ ಮುಹೂರ್ತಕ್ಕೆ 14 ವರ್ಷಗಳು ತುಂಬಿದ ಈ ಶುಭ ಸಂದರ್ಭದಲ್ಲಿ, ಕರುನಾಡ ಚಕ್ರವರ್ತಿ ಡಾ||ಶಿವರಾಜ್ ಕುಮಾರ್ ರವರಿಗೆ ಹೊಸ ಚಿತ್ರ ಆರಂಭಿಸುತ್ತಿರುವುದು ಮತ್ತಷ್ಟು ಖುಷಿ ತಂದಿದೆ. ತಮ್ಮೆಲ್ಲರ ಆಶೀರ್ವಾದ ಇರಲಿ
— R.Chandru (@rchandru_movies) April 1, 2024
ಧನ್ಯವಾದಗಳು
ಆರ್ ಸಿ ಸ್ಟುಡಿಯೋಸ್#nimmashivarajkumar pic.twitter.com/WmW6O1TU84
ಐದು ಸಿನಿಮಾ ಘೋಷಣೆ
ಆರ್. ಚಂದ್ರು ನಿರ್ದೇಶನದ, ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ (Kabzaa Movie) ಎರಡು ದಿನಗಳಲ್ಲೇ ನೂರು ಕೋಟಿ ರೂ. ಕ್ಲಬ್ ಸೇರಿತ್ತು. ಆದರೆ ಭಾರಿ ಕಲೆಕ್ಷನ್ ಮಾಡಿರುವ ಈ ಸಿನಿಮಾವನ್ನು ಸಾಕಷ್ಟು ಜನ ಇಷ್ಟ ಪಟ್ಟಿರಲಿಲ್ಲ. ಹೀಗಾಗಿ ʻಕಬ್ಜʼ ಸೀಕ್ವೆಲ್ ಯಾವುದೇ ಕಾರಣಕ್ಕೂ ಸಿದ್ಧವಾಗುವುದಿಲ್ಲ ಎಂದು ಹಲವರು ಅಂದುಕೊಂಡಿದ್ದರು. ಇದಾದ ಬಳಿಕ ಜನವರಿ 23ರಂದು ಚಂದ್ರು ಅವರು ಐದು ಸಿನಿಮಾ ಘೋಷಣೆ ಮಾಡಿದರು.
ಭಾರತೀಯ ಚಿತ್ರರಂಗದಲ್ಲೇ ಹೊಸ ಮೈಲುಗಲ್ಲು ಸೃಷ್ಟಿಸಿದ ನಿರ್ದೇಶಕ ಆರ್ ಚಂದ್ರು ಅವರು ಆರ್ ಸಿ ಪ್ರೊಡಕ್ಷನ್ ನಡಿ ಐದು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ʻಶ್ರೀರಾಮಬಾಣʼ, ʻಫಾದರ್ʼ, ʻPOKʼ, ʻಡಾಗ್ʼ ಹಾಗೂ ಕಬ್ಜ-2 ಟೈಟಲ್ ಘೋಷಣೆಯಾಗಿತ್ತು.
ಈ ಬಗ್ಗೆ ಆರ್ ಚಂದ್ರು ಮಾತನಾಡಿ ʻʻಯಾವುದೇ ಕೆಲಸ ಮಾಡಬೇಕು ಅಂದರೆ ಯೋಗಬೇಕು. ಯೋಗ್ಯತೆ ಬೇಕು. 10 ತಿಂಗಳು ನಾನು ಸುಮ್ನೆ ಕೂತಿರಲಿಲ್ಲ. ಕೈ ಹಾಕಿದರೆ ಕರಂಟ್ ಕಂಬಕ್ಕೆ ಕೈ ಹಾಕಬಾರದು. ಚಂದ್ರಲೋಕಕ್ಕೆ ಕೈ ಹಾಕಬೇಕು. ಕಬ್ಜ’ ಸಿನಿಮಾದ ಕಲೆಕ್ಷನ್ ಫೇಕ್ ಎಂದು ಅನೇಕರು ಹೇಳಿದ್ದರು.‘ಕಬ್ಜ ಸಿನಿಮಾದಿಂದ ನಾನು ಸರ್ಕಾರಕ್ಕೆ 20 ಕೋಟಿ ರೂಪಾಯಿ ಟ್ಯಾಕ್ಸ್ ಕಟ್ಟಿದ್ದೀನಿ. ಇದನ್ನು ಓಪನ್ ಆಗಿ ಹೇಳಿಕೊಳ್ಳುತ್ತಿದ್ದೇನೆ. ಕನ್ನಡ ಸಿನಿಮಾಗಳನ್ನು ನೋಡ್ಬೇಕು ಅಂದ್ರೆ ಒಳ್ಳೊಳ್ಳೆ ಸಿನಿಮಾಗಳನ್ನ ಮಾಡ್ಬೇಕು. ಬಾಯಿ ಇದೆ ಎಂದು ಮಾತನಾಡಿದರೆ ಐದು ಸಿನಿಮಾ, ಹತ್ತು ಸಿನಿಮಾ ಆಗಲ್ಲ’ ಎಂದು ಅವರು ನೇರವಾಗಿ ಹೇಳಿದ್ದರು.