Site icon Vistara News

RCB Unbox: ನಮ್ಮ ಶಿವಣ್ಣ ರೊಚ್ಚಿಗೆದ್ದು ಏನ್ ಹೇಳ್ತಿದ್ದಾರೆ ಅರ್ಥ ಆಯ್ತಾ?

Shivarajkumar Royal Challengers Bangalore new Promo

ಬೆಂಗಳೂರು: ಆರ್‌ಸಿಬಿ ಫ್ರಾಂಚೈಸಿಯು ತನ್ನ ಆರ್‌ಸಿಬಿ ಅನ್‌ಬಾಕ್ಸ್ (RCB Unbox) ಕಾರ್ಯಕ್ರಮದ ಮೊದಲ ಟ್ರೈಲರ್‌ ಬಿಡುಗಡೆ ಮಾಡಿತ್ತು. ಮೊದಲ ಪ್ರೋಮೊದಲ್ಲಿ ರಿಷಬ್​ ಶೆಟ್ಟಿ (Rishabh Shetty) ಕಾಣಿಸಿಕೊಂಡಿದ್ದರು. ಎರಡನೇ ಪ್ರೋಮೊದಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್ (Ashwini Puneeth Rajkumar) ಕಾಣಿಸಿಕೊಂಡಿದ್ದು, ಆರ್​ಸಿಬಿ (RCB) ಹೆಸರು ಬದಲಾವಣೆಯಾಗುವುದು ಖಚಿತ ಎಂಬ ಹಿಂಟ್‌ ಕೊಟ್ಟಿದ್ದರು. ಇದೀಗ ಶಿವಣ್ಣನ ಸರದಿ. ಸದ್ಯ Royal Challengers Bangalore ಹೆಸರು ಬದಲಿಸುವ ವಿಚಾರವಾಗಿ ಮಾಡಿರುವ ಹೊಸ ಪ್ರೋಮೊದಲ್ಲಿ ನಟ ಶಿವರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಕಪ್ಪು ಅಂಗಿ, ಕೆಂಪು ಪಂಚೆ ಉಟ್ಟು ಭೈರತಿ ರಣಗಲ್ ಲುಕ್‌ನಲ್ಲಿ ಖಡಕ್‌ ಲುಕ್‌ನಲ್ಲಿ ಶಿವಣ್ಣ ಎಂಟ್ರಿ ಕೊಟ್ಟಿದ್ದಾರೆ.

ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಬದಲು ಈ ಬಾರಿಯ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಗಿ ಬದಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆರ್​ಸಿಬಿ ತನ್ನ ಅಭಿಯಾನ ಆರಂಭಿಸುವ ಮುನ್ನ ಪೂರ್ವಭಾವಿಯಾಗಿ ಅಭಿಮಾನಿಗಳಿಗಾಗಿ ಈ ಸಲವೂ ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಕಳೆದೆರಡು ವರ್ಷಗಳಿಂದ ಆರ್​ಸಿಬಿ ಅನ್​ಬಾಕ್ಸ್​(RCB’s Unbox Event) ಹೆಸರಿನಲ್ಲಿ ನಡೆಯುತ್ತ ಬಂದಿದೆ. ಅಭಿಮಾನಿಗಳಿಗಾಗಿ ನಡೆಸುವ ಈ ಕಾರ್ಯಕ್ರಮದಲ್ಲಿ ತಂಡದ ಹೊಸ ಜೆರ್ಸಿ ಅನಾವರಣ ಸೇರಿ ಹಲವು ಅಚ್ಚರಿಯನ್ನು ಘೋಷಣೆ ಮಾಡುವುದು ಈ ಕಾರ್ಯಕ್ರಮದ ವಿಶೇಷತೆ. ಈ ಬಾರಿ ಹೆಸರಿನ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಈ ಬಾರಿ ಮಾರ್ಚ್ 22ರಿಂದ ಮೇ 26ರ ವರೆಗೆ ಐಪಿಎಲ್ ಟೂರ್ನಿ ನಡೆಯಲಿದೆ. ಮಾರ್ಚ್ 19ಕ್ಕೆ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ಗೆ ವೇದಿಕೆ ಸಜ್ಜಾಗಿದೆ. ಕಪ್ಪು ಅಂಗಿ, ಕೆಂಪು ಪಂಚೆ ಉಟ್ಟು ಭೈರತಿ ರಣಗಲ್ ಲುಕ್‌ನಲ್ಲಿ ಖಡಕ್‌ ಲುಕ್‌ನಲ್ಲಿ ಶಿವಣ್ಣ ಎಂಟ್ರಿ ಕೊಟ್ಟಿದ್ದಾರೆ. ಎದುರಿಗೆ ಟೇಬಲ್ ಮೇಲೆ 3 ಲಾಂಗ್‌ಗಳಿವೆ. ಒಂದರ ಮೇಲೆ Royal, ಮತ್ತೊಂದರ ಮೇಲೆ Challengers ಇನ್ನೊಂದರಲ್ಲಿ Bangalore ಎಂದು ಬರೆಯಲಾಗಿದೆ. Bangalore ಎಂದು ಬರೆದ ಲಾಂಗ್ ನೋಡಿ ಶಿವಣ್ಣ How long.. This Long ಎಂದಿದ್ದಾರೆ. ಅರ್ಥ ಆಯ್ತಾ? ಎಂದು ಹೇಳಿರುವುದನ್ನು ಪ್ರೋಮೊದಲ್ಲಿ ನೋಡಬಹುದು.

ಇದನ್ನೂ ಓದಿ: RCB Unbox: ಆರ್​ಸಿಬಿ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಅಶ್ವಿನಿ ಪುನೀತ್‌ ರಾಜ್‌ಕುಮಾರ್

ದಿವಂಗತ ಪುನೀತ್ ರಾಜ್‌ಕುಮಾರ್ ಅವರು ಆರ್​ಸಿಬಿ ತಂಡದ ಬ್ರ್ಯಾಂಡ್‌ ಅಂಬಾಸಿಡರ್ ಆಗಿದ್ದರು. ಆರ್​ಸಿಬಿ ಮೊದಲ ಪಂದ್ಯವನ್ನು ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಮಾರ್ಚ್​ 22ರಂದು ಆಡಲಿದೆ. ಇದು ಈ ಬಾರಿಯ ಟೂರ್ನಿಯ ಉದ್ಘಾಟನ ಪಂದ್ಯವಾಗಿದೆ. ಉಭಯ ತಂಡಗಳ ಈ ಸೆಣಸಾಟಕ್ಕೆ ಎಂ.ಎ. ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ.

Exit mobile version