Site icon Vistara News

Shraddha Srinath: ಶ್ರದ್ಧಾ ಶ್ರೀನಾಥ್‌ ಎದೆ ಮೇಲೆ ʻLove’ ಟ್ಯಾಟೂ ; ಏನಿದರ ಅರ್ಥ?

Shraddha Srinath Love tattoo on chest What does that mean

2016ರಲ್ಲಿ `ಯು ಟರ್ನ್’ ಮತ್ತು ಉರ್ವಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಶ್ರದ್ಧಾ ಶ್ರೀನಾಥ್‌ ಹೊಸ ಫೋಟೊ ಶೂಟ್‌ ಶೇರ್‌ ಮಾಡಿಕೊಂಡಿದ್ದಾರೆ. ಇದೀಗ ನಟಿಯ ಟ್ಯಾಟೂ ಪ್ರಮುಖ ಹೈಲೈಟ್‌ ಆಗಿದೆ.

ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ (Venkatesh Daggubati ) ನಟನೆಯ 75ನೇ ಪ್ಯಾನ್ ಇಂಡಿಯಾ ಸಿನಿಮಾ ‘ಸೈಂಧವ್’ (Saindhav)ದಲ್ಲಿ ನಟಿ ಮನೋಜ್ಞಾ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಜೆರ್ಸಿ ಸಿನಿಮಾದಲ್ಲಿ ಅದ್ಭುತ ಅಭಿಯನದ ಪ್ರದರ್ಶಿಸಿದ್ದ ಶ್ರದ್ಧಾ ಶ್ರೀನಾಥ್, ಸೈಂಧವ್ ಸಿನಿಮಾದಲ್ಲಿ ಮತ್ತೊಮ್ಮೆ ಎಲ್ಲರ ಗಮನಸೆಳೆದಿದ್ದರು.

ಇದನ್ನೂ ಓದಿ: Actor Dhanush: ಮೂರೇ ದಿನಕ್ಕೆ 50 ಕೋಟಿ ರೂ. ಕಲೆಕ್ಷನ್‌ ಮಾಡಿದ ಧನುಷ್‌ ನಟನೆಯ ʻ50ʼನೇ ಸಿನಿಮಾ!

ಮೊದಲ ಬಾರಿಗೆ ʻದಿ ಬೀಟಲ್ಸ್ ಮ್ಯೂಸಿಕ್ʼ ಟೀಮ್ ವತಿಯಿಂದ ಎರಡು ಸಾವಿರ ರೂಪಾಯಿ ಚೆಕ್ ನಟಿಗೆ ಸಿಕ್ಕಿತ್ತು. ಮ್ಯೂಜಿಕ್ ಮೇಲಿನ ಪ್ರೀತಿ ಮತ್ತು ಆಸಕ್ತಿಯಿಂದ ನೆನಪು ಸದಾ ಇರಬೇಕು, ಸಂಗೀತದ ಮೇಲಿನ ಪ್ರೀತಿಯೂ ಉಳಿಯಬೇಕು ಎಂದು ಯೋಚಿಸಿ,ಟ್ಯಾಟೂ ಹಾಕುವವನಿಗೆ ಹೇಳಿದಾಗ, ಆತನ ಕುಂಚದಲ್ಲಿ ಅರಳಿದ್ದೇ ಈ ಚಿತ್ರ ಎಂದು ಹಲವು ವರ್ಷಗಳ ಹಿಂದಿನ ಸಂದರ್ಶನದಲ್ಲೂ ನಟಿ ಹೇಳಿದ್ದಾರೆ.

ನಟಿಯ ಫೋಟೊಗಳು ಈಗ ಭಾರಿ ವೈರಲ್‌ ಆಗುತ್ತಿದೆ. ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.
Exit mobile version