Site icon Vistara News

Simple Suni: ‘ಅವತಾರ ಪುರುಷ 2’ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ಸಿಂಪಲ್‌ ಸುನಿ!

Simple Suni Avtara Purusha 2 Movie Will Be Release On March 22

ಬೆಂಗಳೂರು: ನಿರ್ದೇಶಕ ಸಿಂಪಲ್‌ ಸುನಿ (Simple Suni) ಅವರು ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಈ ಸಕ್ಸೆಸ್‌ ಬೆನ್ನಲ್ಲೇ ‘ಅವತಾರ ಪುರುಷ 2’ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ‘ಅವತಾರ ಪುರುಷ’ ಚಿತ್ರದ ಮುಂದುವರಿದ ಭಾಗ ‘ಅವತಾರ ಪುರುಷ 2’ ಸಿನಿಮಾ ಬಿಡುಗಡೆ ಆಗುತ್ತಿದೆ.ಮಾರ್ಚ್ 22ರಂದು ‘ಅವತಾರ ಪುರುಷ 2’ ಸಿನಿಮಾ ರಿಲೀಸ್ ಆಗಲಿದೆ. ಶರಣ್ ಹಾಗೂ ಆಶಿಕಾ ರಂಗನಾಥ್ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.

‘ಅವತಾರ ಪುರುಷ’ ಸಿನಿಮಾ 2022ರ ಮೇ 6ರಂದು ರಿಲೀಸ್ ಆಯಿತು. ಈ ಸಿನಿಮಾದಲ್ಲಿ ಹಾಸ್ಯದ ಜೊತೆ ಸಸ್ಪೆನ್ಸ್ ಕೂಡ ಇತ್ತು. ಸುನಿ ಮಾಟ ಮಂತ್ರದ ಕಥೆಯನ್ನು ಹೇಳಿದ್ದರು. ಮಾರ್ಚ್ 22ರಂದು ‘ಅವತಾರ ಪುರುಷ 2’ ಸಿನಿಮಾ ರಿಲೀಸ್ ಆಗಲಿದೆ. ‘ತ್ರಿಷಂಕು ಪಯಣ’ ಎನ್ನುವ ವಾಕ್ಯ ಪೋಸ್ಟರ್​ನಲ್ಲಿ ಹೈಲೈಟ್ ಆಗಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: Multi specialty | ಉತ್ತರ ಕನ್ನಡಕ್ಕೊಂದು ಸುಸಜ್ಜಿತ ಆಸ್ಪತ್ರೆ ಬೇಕು: ನಿರ್ದೇಶಕ ಸಿಂಪಲ್‌ ಸುನಿ ಟ್ವೀಟ್‌

ಮೊದಲ ಭಾಗದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್, ಭವ್ಯ, ಶ್ರೀನಗರ ಕಿಟ್ಟಿ ಹೀಗೆ ಘಟಾನುಘಟಿ ಕಲಾವಿದರೇ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು.ಕೆಲವರಿಗೆ ಸಿನಿಮಾ ಇಷ್ಟವಾಗಿದ್ದರೆ ಮತ್ತೆ ಕೆಲವರಿಗೆ ಬೋರ್ ಎನಿಸಿತ್ತು. ಆದರೂ ಕ್ಲೈಮ್ಯಾಕ್ಸ್‌ನಲ್ಲಿ ಸಣ್ಣ ಟ್ವಿಸ್ಟ್ ಕೊಟ್ಟು ಸರಣಿಯ ಮುಂದಿನ ಬಗ್ಗೆ ಕುತೂಹಲ ಮೂಡಿಸಿತ್ತು ಚಿತ್ರತಂಡ.

Exit mobile version