ಬೆಂಗಳೂರು: ಎರಡು ವರ್ಷಗಳ ಹಿಂದೆ ಕೊರೊನಾ ಸಂದರ್ಭದಲ್ಲಿ ‘ಎಂತದ್ದು ಇಲ್ಲಾ ಸರ್ ಬಿಸಿ ರಾಗಿ ಹಿಟ್ಟು, ಡೋಲೋ 650 ಮಾತ್ರೆ’ಎಂಬ ಡೈಲಾಗ್ ನೀವು ಕೇಳಿರಲೇಬೆಕು. ಈ ಡೈಲಾಗ್ ಹೇಳಿದ್ದು ಬೇರೆ ಯಾರೂ ಅಲ್ಲ ಮೈಸೂರಿನ ಶಶಿರೇಖಾ. ಅಲ್ಲಿಂದ ಶಶಿರೇಖಾ (Dolo 650 Shashirekha) ಅವರು ಸಖತ್ ಸುದ್ದಿಯಾಗಿದ್ದರು. ಇದೀಗಾ ಸಿನಿಮಾದಲ್ಲಿ ಹಿರೋಯಿನ್ ಆಗಿ ನಟಿಸಲಿದ್ದಾರೆ ಶಶಿರೇಖಾ. ಚಿತ್ರಕ್ಕೆ ʻಸೌಜನ್ಯʼ ಎಂದು ಶೀರ್ಷಿಕೆ ಇಡಲಾಗಿದ್ದು, ʻಇದು ಆರಂಭವಲ್ಲ ಅಂತ್ಯʼ ಎಂಬ ಅಡಿಬರವೂ ಈ ಸಿನಿಮಾಕ್ಕಿದೆ. ಮೈಸೂರಿನ ಪ್ರೆಸ್ ಕ್ಲಬ್‌ನಲ್ಲಿ ಈ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ.
“ಎಂಥದ್ದು ಇಲ್ಲ ಡೋಲೋ 650 ಮಾತ್ರೆ, ಬಿಸಿ ರಾಗಿ ಹಿಟ್ಟು.. ಕರೊನಾದವರಿಗೆ ಅದೇ. ಹೇಳ್ಬಿಟ್ಟು ಬರ್ತದಾ ಸಾರ್.. ಹೋದ ವರ್ಸ್ ಎಲ್ಲ ಆಂಟಿಯರಿಗೆ ಬಂತು.. ಈ ವರ್ಸ್ ಹೈಕ್ಳಿಗೆ, ಹುಡುಗ್ರಿಗೆ ಬಂತು, ಆಮೇಲೆ ಹೊಟ್ಟೆಯೊಳಗಿರೋ ಕೂಸಿಗೆ ಬರುತ್ತೆ.. ಹೀಗೆ ತಮ್ಮ ಡೈಲಾಗ್ ಮೂಲಕವೇ ಸುದ್ದಿಯಾದವರು ಶಶಿರೇಖಾ.
ಹೆಚ್.ಡಿ ಕೋಟೆ ಮೂಲದ ಚೇತನ್ ದೇವರಾಜ್ ಎಂಬುವವರು ʻಸೌಜನ್ಯʼ ಹೆಸರಿನ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ದೋಸ್ತಿ ಕ್ರಿಯೇಷನ್ಸ್ ಮೂಲಕ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಂತ್ರಸ್ತೆ ಸೌಜನ್ಯಾಳ ದುರಂತ ಸಾವಿನ ಕಥೆ ಈ ಸಿನಿಮಾದಲ್ಲಿರಲಿದೆಯೇ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ. ಶೂಟಿಂಗ್ ಯಾವಾಗಿನಿಂದ ಶುರು ಎಂಬಿತ್ಯಾದಿ ಮಾಹಿತಿ ಸದ್ಯಕ್ಕಿಲ್ಲ.
ಇದನ್ನೂ ಓದಿ: Jet lag Party Case : ನಿಯಮ ಮೀರಿ ಪಾರ್ಟಿ : ನಟ ದರ್ಶನ್ ಸಹಿತ ಹಲವು ಸೆಲೆಬ್ರಿಟಿಗಳಿಗೆ ಸಂಕಷ್ಟ
ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ಶಶಿರೇಖಾ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ವಿಭಿನ್ನವಾದ ವಿಡಿಯೋಗಳ ಮೂಲಕವೇ ಇನ್ಸ್ಟಾಗ್ರಾಮ್ ಖಾತೆಯಲ್ಲಿ 1ಲಕ್ಷದ 75ಸಾವಿರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.