Site icon Vistara News

Sreenath Bhasi Movie: ʻಮಂಜುಮ್ಮೆಲ್ ಬಾಯ್ಸ್ʼ ನಟನಿಗೆ ಸ್ಯಾಂಡಲ್​ವುಡ್​ ಡೈರೆಕ್ಟರ್ ಆ್ಯಕ್ಷನ್​ ಕಟ್​!

Sreenath Bhasi Movie Shashidhar direction new Movie

ಬೆಂಗಳೂರು: ʻಮಂಜುಮ್ಮೆಲ್ ಬಾಯ್ಸ್ʼ ಮಾಲಿವುಡ್ ಇಂಡಸ್ಟ್ರೀಗೆ ಈ ವರ್ಷ ಸಿಕ್ಕಂತಹ ಸೂಪರ್ ಡೂಪರ್ ಹಿಟ್ ಸಿನಿಮಾ. ವಿಶ್ವಾದ್ಯಂತ ಪ್ರೇಕ್ಷಕರು ಸಿನಿಮಾವನ್ನ ನೋಡಿ ಇಷ್ಟಪಡುತ್ತಿದ್ದಾರೆ. ಪಾತ್ರಧಾರಿಗಳ ಬಗ್ಗೆ ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಇಂಚಿಂಚೂ ಮಾತನಾಡುತ್ತಿದ್ದಾರೆ. ಇದೇ ವೇಳೆ ʻಡಾಟರ್ ಆಫ್ ಪಾರ್ವತಮ್ಮʼ, ವೀರಂ, ʻಶುಗರ್ ಲೆಸ್ʼ ಚಿತ್ರಗಳನ್ನ ನಿರ್ಮಾಣ ಮಾಡಿದ್ದ ಶಶಿಧರ ಅವರು ಶುಗರ್ ಲೆಸ್ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದೀಗ ಮಲಯಾಳಂನಲ್ಲಿ ತಮ್ಮ ಮೊದಲ‌ ಚಿತ್ರವನ್ನ ನಿರ್ದೇಶನ‌ ಮಾಡಲು‌ ಹೊರಟಿದ್ದಾರೆ. ಈ ಮೂಲಕ ಇದು ಶಶಿಧರ ಅವರ ಸಿನಿಜರ್ನಿಯ (Sreenath Bhasi Movie) ಎರಡನೇ ಡೈರೆಕ್ಷನ್‌ನ ಸಿನಿಮಾವಾಗಲಿದೆ.

ಸಿಬಿಲ್ ಸ್ಕೋರ್‌ನಲ್ಲಿ ಶ್ರೀನಾಥ್ ಭಾಸಿ

ಶ್ರೀನಾಥ್ ಭಾಸಿ (Sreenath Bhasi) ಅವರು ವೈರಸ್, ಹೋಮ್, ಕುಂಬಳಂಗಿ ನೈಟ್ಸ್ ಅಂತಹ ಅದ್ಭುತ ಸಿನಿಮಾಗಳಲ್ಲಿ‌ ನಟಿಸಿ ಸೈ ಎನಿಸಿಕೊಂಡವರು. ಮಾಲಿವುಡ್ ಸ್ಟಾರ್ ನಟ, ನಮ್ಮ‌ ಕನ್ನಡದ ಪ್ರೊಡ್ಯೂಸರ್ ಹಾಗೂ ಡೈರೆಕ್ಟರ್ ಶಶಿಧರ ಕೆ ಎಮ್ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಮಲಯಾಳಂ ಸಿನಿಮಾ ʻಸಿಬಿಲ್ ಸ್ಕೋರ್ʼದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲ್ಲಿದ್ದಾರೆ.

ಇದನ್ನೂ ಓದಿ: Manjummel Boys: ‘ಮಂಜುಮ್ಮೆಲ್ ಬಾಯ್ಸ್’ ಒಟಿಟಿ ಡೇಟ್ ಅನೌನ್ಸ್ ಮಾಡಿದ ಡಿಸ್ನಿ!

ಈ‌ ಸಿನಿಮಾವನ್ನು ಕನ್ನಡದ ನಿರ್ದೇಶಕರೇ ನಿರ್ದೇಶನ ಮಾಡುತ್ತಿದ್ದು, ಹಾಗೇ ಮಲಯಾಳಂ ಸಿನಿಮಾ ಆಗಿರುವುದರಿಂದ ಈ ಸಿನಿಮಾದಲ್ಲಿ ಟೆಕ್ನಿಶಿಯನ್ಸ್ ಆರ್ಟಿರ್ಸ್ಟ್ ಕನ್ನಡ ಹಾಗೂ ಮಲಯಾಳಂನವರಾಗಿರುತ್ತಾರೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಸೋಹನ್ ಸೀನುಲಾಲ್, ದೀಪಕ್ ಪ್ರಿನ್ಸ್ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

ದಿ ಎಮೋಷನ್ಸ್ ಫ್ಯಾಕ್ಟರಿ ಗ್ರೂಪ್(EFG) ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾಗೆ ವಿವೇಕ್ ಶ್ರೀಕಂಠಯ್ಯ ಬಂಡವಾಳ ಹೂಡುತ್ತಿದ್ದಾರೆ. ಕೋ ಪ್ರೊಡ್ಯೂಸರ್ ಆಗಿ ವಿಕ್ರಮ್, ಲೈನ್ ಪ್ರೊಡ್ಯೂಸರ್ ಆಗಿ ದೀಪು ಕರುಣಾಕರಣ್ ಎಕ್ಸೆಕ್ಯೂಟೀವ್ ಪ್ರೊಡ್ಯೂಸರ್ ಆಗಿ ಶಾಜಿ ಫ್ರಾನ್ಸಿಸ್ ಕೈ ಜೋಡಿಸಿದ್ದಾರೆ. ಸಿನಿಮಾದ ಛಾಯಾಗ್ರಹಣ ಪ್ರದೀಪ್ ನಾಯರ್, ಡೈಲಾಗ್ಸ್ ಅರ್ಜುನ್ ಟಿ ಸತ್ಯನ್, ಸೋಬಿನ್ ಕೆ ಸೋಮನ್ ಸಂಕಲನವಿದೆ. ಇನ್ನೂ ಕ್ರಿಯೇಟಿವ್ ಹೆಡ್ ಆಗಿ ಶರತ್ ವಿನಾಯಕ್ ಸಿನಿಮಾಗೆ ಜತೆಯಾಗಿದ್ದಾರೆ.

Exit mobile version