Site icon Vistara News

Nagabhushana Marriage: ಪೂಜಾ ಪ್ರಕಾಶ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ನಾಗಭೂಷಣ್‌

tagaru palya fame nagabhushana and pooja prakash marriage

‘ಟಗರು ಪಲ್ಯ’ ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟ ನಾಗಭೂಷಣ್‌ (Nagabhushana Marriage) ಗೆಳತಿ ಪೂಜಾ ಪ್ರಕಾಶ್ ಅವರೊಂದಿಗೆ ವೈವಾಹಿಕ ಜೀವನಕ್ಕೆ (ಜ.28) ಕಾಲಿಟ್ಟರು.

ನಟ ನಾಗಭೂಷಣ್ ಹಾಗೂ ಪೂಜಾ ಪ್ರಕಾಶ್ ಇಬ್ಬರ ಮದುವೆ ಬೆಳಗಾವಿಯಲ್ಲಿ ನಡೆದಿದೆ. ಡಾಲಿ ಧನಂಜಯ್ ಸೇರಿದಂತೆ ನಾಗಭೂಷಣ ಆಪ್ತರು ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ

ಇದನ್ನೂ ಓದಿ: Actor Nagabhushana: ಅತಿ ವೇಗದಿಂದಲೇ ಕಾರು ಅಪಘಾತ; ನಟ ನಾಗಭೂಷಣ್‌ ವಿರುದ್ಧ ಚಾರ್ಜ್‌ಶೀಟ್‌

ಪೂಜಾ ಪ್ರಕಾಶ್ ಚಿತ್ರಕಲೆ ಹಾಗೂ ಗ್ರಾಫಿಕ್ಸ್ ಡಿಸೈನಿಂಗ್‌ನಲ್ಲಿ ಪರಿಣಿತಿಯನ್ನು ಪಡೆದುಕೊಂಡಿದ್ದಾರೆ.

ಇನ್ನು ನಾಗಭೂಷಣ್‌ ಕೂಡ ಇತ್ತೀಚೆಗೆ ಡಾಲಿ ಧನಂಜಯ್ ನಿರ್ಮಿಸಿದ್ದ ‘ಟಗರು ಪಲ್ಯ’ ಸಿನಿಮಾದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.

ಡಾಲಿ ಧನಂಜಯ್ ನಿರ್ಮಾಣ ಮಾಡುತ್ತಿರುವ ಮತ್ತೊಂದು ಸಿನಿಮಾ ‘ವಿದ್ಯಾಪತಿ’ಗೆ ನಟ ನಾಗಭೂಷಣ್‌ ನಾಯಕನಾಗಿ ಆಯ್ಕೆ ಆಗಿದ್ದಾರೆ. ನಾಗಭೂಷಣ ಇತ್ತೀಚೆಗೆ ಕಾರು ಅಪಘಾತ ಪ್ರಕರಣದಲ್ಲಿ ಸುದ್ದಿಯಾಗಿದ್ದರು. ಬೆಳಗಾವಿಯಲ್ಲಿ ಮದುವೆ ನಡೆದಿದ್ದರೂ, ಫೆಬ್ರವರಿ 2ರಂದು ಮೈಸೂರಿನಲ್ಲಿ ಆರತಕ್ಷತೆ ನಡೆಯಲಿದೆ ಎಂದು ವರದಿಯಾಗಿದೆ.

Exit mobile version