ಬೆಂಗಳೂರು: ಬಿಗ್ ಬಾಸ್’ ಬೆಡಗಿ ತನಿಷಾ ಕುಪ್ಪಂಡ (Tanisha Kuppanda) ದೊಡ್ಮನೆ ಆಟ ಮುಗಿದ ಮೇಲೆ ನಟನೆ, ಉದ್ಯಮ ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ‘ನನ್ನಮ್ಮ ಸೂಪರ್ ಸ್ಟಾರ್-3’ರಲ್ಲಿ (Nanamma Super Star 3) ತನಿಷಾ ಭಾಗಿಯಾಗಿದ್ದರು. ತನಿಷಾ ಕುಪ್ಪಂಡ ‘ಕುಪ್ಪಂಡ ಜ್ಯುವೆಲರೀಸ್’ ಹೆಸರಿನ ಆಭರಣ ಮಳಿಗೆಯನ್ನು ಪ್ರಾರಂಭಿಸಿ ಸುದ್ದಿಯಾಗಿದ್ದರು. ಇದೀಗ ʻಹ್ಯಾಪಿ ಬರ್ತ್ ಡೇ ಡಾರ್ಲಿಂಗ್’ ಎಂದು ಪೋಸ್ಟ್ ಹಾಕಿದ್ದಾರೆ ತನಿಷಾ ಕುಪ್ಪಂಡ. ತನಿಷಾ ಜತೆಗೆ ಇದ್ದವರು ಬೇರೆ ಯಾರು ಅಲ್ಲ ಅವರ ಅಣ್ಣ. ಈ ವಿಡಿಯೊದಲ್ಲಿ ಅವರು ಸ್ವಿಮ್ಮಿಂಗ್ ಮಾಡುತ್ತಿದ್ದಾರೆ. ʻಹ್ಯಾಪಿ ಬರ್ತ್ ಡೇ ಡಾರ್ಲಿಂಗ್’ ಎಂದು ಪೋಸ್ಟ್ ಹಾಕಿದ್ದಾರೆ ತನಿಷಾ ಕುಪ್ಪಂಡ. ಅಣ್ಣನಿಗೆ ಕ್ಯೂಟ್ ವಿಶ್ ಮಾಡಿದ್ದಾರೆ.
‘ʻಹ್ಯಾಪಿ ಬರ್ತ್ ಡೇ ಡಾರ್ಲಿಂಗ್ , ನಿನಗೆ ಬೆಂಬಲ, ಯಶಸ್ಸು, ನೆಮ್ಮದಿ ಎಲ್ಲವೂ ಸಿಗಲಿ. ಲವ್ ಯೂ ಸೋ ಮಚ್ ಅಪ್ಪು. ಮೊದ್ಲೆಲ್ಲಾ ತಮ್ಮ ಅಂತಿದ್ರು, ಇವಾಗ ಅಣ್ಣ ಅಂತಾರೆ. ಸ್ವಲ್ಪ ಕಮ್ಮಿ ಕಿತ್ತಾಡು. ಇಷ್ಟೇ ಲೈಫ್. ಸಾಕು ಅಲ್ವಾ ಮರ ಯಾಕೆ. ಒಳ್ಳೆಯ ದಿನಗಳು ಬರಲಿ’ ಎಂದು ಅವರು ಕೋರಿದ್ದಾರೆ.
ಇದನ್ನೂ ಓದಿ: Tanisha Kuppanda: ತನಿಷಾಳ ಕನಸು ನನಸಾಗಿದೆ, ಹೊಸ ಬ್ಯುಸಿನೆಸ್ ಸಕ್ಸೆಸ್ ಆಗಲಿ ಎಂದು ಆಶಿಸಿದ ಕಾರ್ತಿಕ್!
ಈ ವಿಡಿಯೋದ ಕ್ಯಾಪ್ಶನ್ ನೋಡಿದರೆ ಕೆಲವರು ಅಶ್ಲೀಲವಾಗಿ ಕಮೆಂಟ್ ಮಾಡುತ್ತಿದ್ದಾರೆ. ಇದನ್ನು ನೋಡಿದ ಅನೇಕರು ಕಮೆಂಟ್ ಮಾಡುವವರಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದ್ದಾರೆ. ‘ಅವರು ತನಿಷಾರ ಸಹೋದರ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ತನಿಷಾ ಕುಪ್ಪಂಡ ‘ಕುಪ್ಪಂಡ ಜ್ಯುವೆಲರೀಸ್’ ಹೆಸರಿನ ಆಭರಣ ಮಳಿಗೆಯನ್ನು ಪ್ರಾರಂಭಿಸಿದ್ದಾರೆ. ಬೆಳ್ಳಿಯ ಆಭರಣಗಳು ಇತರೆ ಲೋಹಗಳಿಂದ ಮಾಡಿದ ಕಡಿಮೆ ಬೆಲೆಯ ಆಭರಣಗಳನ್ನು ಮಾರಾಟ ಮಾಡಲಾಗುತ್ತದೆ.ಮಂಗಳ ಗೌರಿ ಮದುವೆ ಧಾರಾವಾಹಿ ಮೂಲಕ ಮನೆ ಮಾತನಾಗಿದ್ದ ನಟಿ ತನಿಷಾ ಕುಪ್ಪಂಡ ಪೆಂಟಂಗನ್ ಸಿನಿಮಾದಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಬೋಲ್ಡ್ ಲುಕ್‌ನಲ್ಲಿ ಲಿಪ್‌ಲಾಕ್, ಬ್ಯಾಕ್‌ಲೆಸ್‌ನಲ್ಲಿ ಕಾಣಿಸಿಕೊಂಡಿದ್ದರು.
‘ಬಿಗ್ ಬಾಸ್’ ಖ್ಯಾತಿಯ ತನಿಷಾ ಕುಪ್ಪಂಡ ಅವರು ‘ಪೆನ್ ಡ್ರೈವ್’ ಶೀರ್ಷಿಕೆಯ ಇರುವ ಸಿನಿಮಾದಲ್ಲಿ ನಟಿಸಲಿದ್ದಾರೆ. 15 ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶನ ಸೆಬಾಸ್ಟಿನ್ ಡೇವಿಡ್ ಅವರು ‘ಪೆನ್‌ಡ್ರೈವ್’ ಸಿನಿಮಾಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.’ಪೆನ್‌ಡ್ರೈವ್’ ಸಿನಿಮಾವನ್ನು ಲಯನ್ ಎಸ್ ವೆಂಕಟೇಶ್ ಹಾಗೂ ಲಯನ್ ಆರ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ಡಾ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆಯುತ್ತಿದ್ದಾರೆ. ರಾಧಿಕಾ ರಾಮ್, ಸಂಜನಾ ನಾಯ್ಡು, ಕರಿಸುಬ್ಬು ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.