ಬೆಂಗಳೂರು: ಕನ್ನಡ ಸಿನಿಮಾರಂಗದ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ (Tharun Sudhir) ಹಾಗೂ ಸೋನಾಲ್ ವಿವಾಹಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈಗಾಗಲೇ ಈ ಜೋಡಿ ಇಡೀ ಚಿತ್ರರಂಗ ಹಾಗೂ ಸ್ನೇಹಿತರು ಮತ್ತು ಸಂಬಂಧಿಕರಿಗೆ ತಮ್ಮ ವಿವಾಹದ ಇನ್ವಿಟೇಷನ್ ಕೊಟ್ಟು ತಮ್ಮ ಮದುವೆಗೆ ಆಹ್ವಾನ ಮಾಡಲು ಶುರು ಮಾಡಿದ್ದಾರೆ. ಆಗಸ್ಟ್ 10ರಂದು ಆರತಕ್ಷತೆ ಕಾರ್ಯಕ್ರಮ ನಡೆದರೆ ಆಗಸ್ಟ್ 11ರಂದು ವಿವಾಹ ಕಾರ್ಯಕ್ರಮ ನೆರವೇರುತ್ತಿದೆ. ವಿವಾಹದ ಬಗ್ಗೆ ಮಾಹಿತಿ ನೀಡಲು ಈ ದಂಪತಿ ಸುದ್ದಿಗೋಷ್ಠಿ ಕರೆದಿದ್ದಾರೆ. ಇದರಲ್ಲಿ ಮದುವೆ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ತರುಣ್ ಸುಧೀರ್ ಮಾತನಾಡಿ ʻʻನನ್ನ ಸೋನಲ್ ಪರಿಚಯ ಆಗಿದ್ದು ರಾಬರ್ಟ್ ಸಿನಿಮಾ ಮೂಲಕ. ಆಡಿಷನ್‌ನಲ್ಲಿ ಪರಿಚಯವಾದರು. ರಾಬರ್ಟ್ ಸೆಟ್ ಅಲ್ಲಿ ಲವ್ ಆಗಿಲ್ಲ. ಪ್ರೊಫೆಷನಲ್ ರಿಲೇಶನ್ ಶಿಪ್ ಅಲ್ಲಿ ಇದ್ವಿ. ಆದರೆ ಲವ್ ಆಗಿರಲಿಲ್ಲ. ಆಗಾಗ ಬರ್ತ್‌ಡೇ ವಿಶ್ ಮಾತ್ರ ಮೆಸೇಜ್ ಮಾಡ್ತಿದ್ವಿ. 2023 ಯಿಂದ ಇಬ್ಬರ ನಡುವೆ ಬಾಂಡಿಂಗ್ ಬೆಳೆದಿದ್ದು. ದರ್ಶನ್ ಅವರು ಕಾಲೆಳೆಯುತ್ತಿದ್ರು. ಸೋನಲ್ ಗೆ ಮಾತ್ರ ಯಾಕೆ ಚೆನ್ನಾಗ್ ಫ್ರೇಮ್ ಇಡ್ತಿಯಾ? ಅಂತ ತಮಾಷೆ ಮಾಡೋಕೆ ಶುರು ಮಾಡಿದ್ರು. ಏನು ಸೋನಲ್‌ನ ಲವ್ ಮಾಡ್ತಿದೀಯ ಎಂದು ರೇಗಿಸುತಿದ್ದರು. ನಂತರ ಮದುವೆ ಆಗ್ತೀಯಾ? ಅಂದ್ರು. ಅದ್ಕೆ ನಾನು ನೀವು ಯಾರನ್ನ ತೋರಿಸ್ತಿರೋ ಆಗ್ತೀನಿ ಅಂದೇ. ಕಾಟೇರ ಸೆಟ್ ನಲ್ಲೂ ದರ್ಶನ್ ಹಾಗು ಕೆಲವರು ಸೋನಲ್ ಹೆಸರಲ್ಲಿ ರೇಗಿಸುತಿದ್ರು. ಕೊನೆಗೆ ಒಂದು ಸಿನ ಸೋನಲ್ ನನಗೆ ಕಾಲ್ ಮಾಡಿ ಇಬ್ಬರು ಡೇಟ್ ಮಾಡುತ್ತಿದ್ದೇವೆ ಎನ್ನುವ ಸುದ್ದಿ ಹಬ್ಬುತಿದೆ. ತಪ್ಪು ತಿಳ್ಕೊಬೇಡಿ ಎಂದಿದ್ದರು. ನನಗೂ ಯಾಕೋ ಯೂನಿವರ್ಸ ನಮ್ಮಿಬ್ಬರನ್ನು ಕನೆಕ್ಟ್ ಮಾಡ್ತಿದೆ ಅನ್ಸಿತ್ತು. ನಾನು ಕಾಂಪ್ಲಿಕೇಟ್ ಇದೀನಿ ನೀವು ಸಿಂಪಲ್, ವರ್ಕ್ ಆಗುತ್ತ ಎಂದು ಸೋನಲ್ ಅವರನ್ನ ಕೇಳಿದ್ದೆ. ಕಾಟೇರ ವರೆಗೂ ಮದುವೆ ಬಗ್ಗೆ ಯೋಚಿಸಿಲ್ಲ. ಈ ಬಗ್ಗೆ ಸೋನಲ್‌ಗೂ ಹೇಳಿದ್ದೆ ಕಾಟೇರ ಸಕ್ಸಸ್ ಆಯಿತು. ಇದು ರೈಟ್ ಟೈಮ್ ಅಂತ ಸೋನಲ್ ಮನೆಯಲ್ಲಿ ಮದುವೆ ವಿಚಾರ ಪ್ರಸ್ತಾಪ ಆಯಿತು.ಇಬ್ಬರ ಕುಟುಂಬದ ಸಮ್ಮತಿಯಿಂದ ಮದುವೆ ಆಗುತ್ತಿದ್ದೇವೆʼʼ ಎಂದರು,
ಇದನ್ನೂ ಓದಿ: Tharun Sudhir: ತರುಣ್-ಸೋನಲ್ ನಡುವಿನ ವಯಸ್ಸಿನ ಅಂತರ ಎಷ್ಟು?
ಇನ್ನು ಸೋನಲ್ ಮಾತನಾಡಿ ʻʻಎಲ್ಲರೂ ಇಬ್ಬರ ಪೇರ್ ಚೆನ್ನಾಗಿದೆ ಎಂದು ಹೇಳಿದ್ದಕ್ಕೆ ಮದುವೆಗೆ ಒಪ್ಪಿಕೊಂಡ್ವಿ. ಮದುವೆ ನಂತರ ಚಿಕ್ಕ ಬ್ರೇಕ್ ತಗೋತೀನಿ. ಈಗ ಸೈನ್ ಮಾಡಿರೋ ಸಿನಿಮಾಗಳನ್ನ ಮುಗಿಸುತಿದ್ದೀನಿʼʼಎಂದರು.
ಸಾಮಾನ್ಯವಾಗಿ ಸೆಲಬ್ರೆಟಿಗಳು ಇನ್ವಿಟೇಷನ್ ಜೊತೆ ಒಂದು ಗಿಡಕೊಟ್ಟು ತಮ್ಮ ವಿವಾಹಕ್ಕೆ ಕರೆಯುವುದು ಕಾಮನ್ .ಆದರೆ ತರುಣ್ ಮತ್ತು ಸೋನಾಲ್ ತಮ್ಮ ವಿವಾಹ ಪತ್ರಿಕೆಯನ್ನ ಕಂಪ್ಲೀಟ್ ಆಗಿ ಪರಿಸರ ಸ್ನೇಹಿಯಾಗಿ ಮಾಡಿದ್ದಾರೆ.
ತರುಣ್ ನೀಡುತ್ತಿರುವ ಈ ಇನ್ವಿಟೇಷನ್ ನಲ್ಲಿ ಮದುವೆ ಪತ್ರಿಕೆ, ಒಂದು ಖಾಲಿ ಪುಸ್ತಕ ಅದರಲ್ಲಿ ಬರೆಯೋದಕ್ಕೆ ಎರಡು ಪೆನ್ಸಿಲ್ ಹಾಗೂ ಎರಡು ಪೆನ್ ಮತ್ತು ಒಂದು ಸೀಡ್ ಬಾಲ್ ಇವೆ. ವಿಶೇಷ ಅಂದರೆ ಮದುವೆ ಮುಗಿದ ನಂತರ ಪತ್ರಿಕೆ ಏನ್ ಮಾಡೋದು ಅಂತ ಯೋಚನೆ ಮಾಡೋ ಹಾಗಿಲ್ಲ, ಯಾಕಂದ್ರೆ ಸೋನಾಲ್ ಮತ್ತು ತರುಣ್ ಮದ್ವೆ ನಂತರ ಪತ್ರಿಕಯನ್ನ ಒಂದು ಮಣ್ಣಿನ ಪಾಟ್‌ನಲ್ಲಿ ಹಾಕಿದ್ದರೆ ಅದು ಮಣ್ಣಿನಲ್ಲಿ ಬೆರೆದು ಗಿಡ ಬೆಳೆಯುತ್ತೆ. ಅದಷ್ಟೇ ಅಲ್ಲ ಖಾಲಿ ಪುಸ್ತಕದಲ್ಲಿ ಬರೆದು ಹಾಳೆ ಖಾಲಿ ಆದ ನಂತರ ಅದು ಮಣ್ಣು ಸೇರಿದ್ದರೆ ಅದ್ರಿಂದಲೂ ಹೂವಿನ ಗಿಡ ಬೆಳೆಯುತ್ತೆ. ಇನ್ನು ಪೆನ್ ಮತ್ತು ಪೆನ್ಸಿಲ್ ಬೆರೆದು ಖಾಲಿ ಆದ್ರೆ ಅದನ್ನು ಮಣ್ಣಿಗೆ ಹಾಕಿದ್ರೆ ಚಂದದ ಹೂವಿನ ಹಾಗೂ ತರಕಾರಿ ಗಿಡ ಬೆಳೆಯುತ್ತೆ. ಹೀಗೆ ತಮ್ಮ ವಿವಾಹದ ಆಹ್ವಾನ ಪತ್ರಿಕೆ ಸಖತ್ ಸ್ಪೆಷಲ್ ಮತ್ತು ಪರಿಸರ ಸ್ನೇಹಿ ಆಗಿರಲಿ ಎಂದು ತರುಣ್ ಈ ರೀತಿ ಪ್ಲಾನ್ ಮಾಡಿದ್ದಾರೆ.