ಕನ್ನಡ ಸಿನಿಮಾರಂಗದ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ (Tharun Sudhir) ಹಾಗೂ ಸೋನಾಲ್ ವಿವಾಹಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಮದುವೆಗೂ ಮುನ್ನ ಫ್ಯಾಮಿಲಿ ಜೊತೆ ಸೋನಾಲ್ ಬ್ಯಾಚುಲರೇಟ್ ಪಾರ್ಟಿ ಮಾಡಿಕೊಂಡಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳಿಗೆ ಆಹ್ವಾನ ಪತ್ರಿಕೆ ನೀಡಲಾಗಿದೆ. ಕಿಚ್ಚ ಸುದೀಪ್, ರಚಿತಾ ರಾಮ್, ಶ್ರೀಮುರಳಿ, ಮಾಲಾಶ್ರೀ ಮುಂತಾದವರನ್ನು ಆಹ್ವಾನಿಸಲಾಗಿದೆ. ರಾಜಕೀಯ ಮುಖಂಡರಿಗೂ ಆಹ್ವಾನ ನೀಡಲಾಗಿದೆ.
ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿ ತರುಣ್ ಸುಧೀರ್ ಅವರು ಮದುವೆಯ ಆಮಂತ್ರಣ ನೀಡಿದ್ದಾರೆ.ರಚಿತಾ ರಾಮ್, ಉಪೇಂದ್ರ, ರಾಘವೇಂದ್ರ ರಾಜ್ಕುಮಾರ್ ಅವರಿಗೂ ತರುಣ್ ಸುಧೀರ್ ಆಹ್ವಾನ ನೀಡಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ತರುಣ್ ಸುಧೀರ್ ಅವರು ಮದುವೆಗೆ ಆಹ್ವಾನಿಸಿದರು.
ಇದನ್ನೂ ಓದಿ: Actor Yash: ಸರಳವಾಗಿ ಜರುಗಿತು ಯಶ್ ʻಟಾಕ್ಸಿಕ್ʼ ಸಿನಿಮಾ ಮುಹೂರ್ತ: ಫೋಟೊಗಳು ವೈರಲ್!
ಶಿವರಾಜ್ಕುಮಾರ್, ಗೀತಾ ದಂಪತಿಯನ್ನು ಭೇಟಿಯಾಗಿ ತರುಣ್ ಆಹ್ವಾನ ಪತ್ರಿಕೆ ನೀಡಿದ್ದಾರೆ.ರಾಜಕೀಯ ಕ್ಷೇತ್ರದಲ್ಲೂ ಅನೇಕರ ಜೊತೆ ತರುಣ್ ಸುಧೀರ್ ಅವರು ಆತ್ಮೀಯತೆ ಹೊಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕರು ಈ ಮದುವೆಗೆ ಬರುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರುಣ್ ಸುಧೀರ್ ಅವರು ಆಹ್ವಾನಿಸಿ ಬಂದಿದ್ದಾರೆ.
ತರುಣ್ ನೀಡುತ್ತಿರುವ ಈ ಇನ್ವಿಟೇಷನ್ ನಲ್ಲಿ ಮದುವೆ ಪತ್ರಿಕೆ, ಒಂದು ಖಾಲಿ ಪುಸ್ತಕ ಅದರಲ್ಲಿ ಬರೆಯೋದಕ್ಕೆ ಎರಡು ಪೆನ್ಸಿಲ್ ಹಾಗೂ ಎರಡು ಪೆನ್ ಮತ್ತು ಒಂದು ಸೀಡ್ ಬಾಲ್ ಇವೆ. ವಿಶೇಷ ಅಂದರೆ ಮದುವೆ ಮುಗಿದ ನಂತರ ಪತ್ರಿಕೆ ಏನ್ ಮಾಡೋದು ಅಂತ ಯೋಚನೆ ಮಾಡೋ ಹಾಗಿಲ್ಲ, ಯಾಕಂದ್ರೆ ಸೋನಾಲ್ ಮತ್ತು ತರುಣ್ ಮದ್ವೆ ನಂತರ ಪತ್ರಿಕಯನ್ನ ಒಂದು ಮಣ್ಣಿನ ಪಾಟ್‌ನಲ್ಲಿ ಹಾಕಿದ್ದರೆ ಅದು ಮಣ್ಣಿನಲ್ಲಿ ಬೆರೆದು ಗಿಡ ಬೆಳೆಯುತ್ತೆ. ಅದಷ್ಟೇ ಅಲ್ಲ ಖಾಲಿ ಪುಸ್ತಕದಲ್ಲಿ ಬರೆದು ಹಾಳೆ ಖಾಲಿ ಆದ ನಂತರ ಅದು ಮಣ್ಣು ಸೇರಿದ್ದರೆ ಅದ್ರಿಂದಲೂ ಹೂವಿನ ಗಿಡ ಬೆಳೆಯುತ್ತೆ. ಇನ್ನು ಪೆನ್ ಮತ್ತು ಪೆನ್ಸಿಲ್ ಬೆರೆದು ಖಾಲಿ ಆದ್ರೆ ಅದನ್ನು ಮಣ್ಣಿಗೆ ಹಾಕಿದ್ರೆ ಚಂದದ ಹೂವಿನ ಹಾಗೂ ತರಕಾರಿ ಗಿಡ ಬೆಳೆಯುತ್ತೆ. ಹೀಗೆ ತಮ್ಮ ವಿವಾಹದ ಆಹ್ವಾನ ಪತ್ರಿಕೆ ಸಖತ್ ಸ್ಪೆಷಲ್ ಮತ್ತು ಪರಿಸರ ಸ್ನೇಹಿ ಆಗಿರಲಿ ಎಂದು ತರುಣ್ ಈ ರೀತಿ ಪ್ಲಾನ್ ಮಾಡಿದ್ದಾರೆ.