ಬೆಂಗಳೂರು: ತರುಣ್ ಸುಧೀರ್ (Tharun Sudhir) ಅವರು ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕನಾಗಿ ಸ್ಯಾಂಡಲ್ವುಡ್ನಲ್ಲಿ ಮೂರು ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ‘ಚೌಕ’, ‘ರಾಬರ್ಟ್’ ಹಾಗೂ ‘ಕಾಟೇರ’ ಚಿತ್ರಗಳನ್ನು ತರುಣ್ ನಿರ್ದೇಶನ ಮಾಡಿದ್ದಾರೆ. ಈ ಮೂರು ಚಿತ್ರಗಳು ಮೆಚ್ಚುಗೆ ಪಡೆದಿವೆ. ‘ರಾಬರ್ಟ್’ ಸಿನಿಮಾದಲ್ಲಿ ಸೋನಲ್ ನಟಿಸಿದ್ದರು. ಇವರ ಮಧ್ಯೆ ಪ್ರೀತಿ ಮೂಡಿತು. ಇದೇ ಬೆನ್ನಲ್ಲೇ ಈಗ ತರುಣ್ ಸುಧೀರ್ ಹಾಗೂ ಸೋನಾಲ್ ಮಾಂಥೆರೋ ಮದುವೆಯ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ಈ ಜೋಡಿಯ ಮದುವೆ ಎರಡು ದಿನಗಳ ಕಾಲ ನಡೆಯಲಿದೆ. ಆಗಸ್ಟ್ 10 ಹಾಗೂ 11 ಎರಡು ದಿನ ಮದುವೆ ಸಮಾರಂಭ ನಡೆಯಲಿದೆ. ಒಂದು ದಿನ ಆರತಕ್ಷತೆ ನಡೆದರೆ, ಇನ್ನೊಂದು ದಿನ ವಿವಾಹ ಜರುಗಲಿದೆ.
ಸೋನಲ್ ಅವರು ಮಂಗಳೂರಿನವರು. ಅವರು ಮೊದಲು ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಆನ್ಲೈನ್ನಲ್ಲಿ ಇರುವ ಮಾಹಿತಿ ಪ್ರಕಾರ ಅವರು ಜನಿಸಿದ್ದು 1995ರ ಆಗಸ್ಟ್ 11ರಂದು. ಕೆಲವೇ ದಿನಗಳಲ್ಲಿ 29 ವರ್ಷ ತುಂಬಲಿದೆ. ತರುಣ್ ಸುಧೀರ್ ಅವರಿಗೆ 41 ವರ್ಷ ಎನ್ನಲಾಗಿದೆ. ಈಗ ಅವರು ಜನಿಸಿದ್ದು 1983ರಲ್ಲಿ. ಅಂದರೆ, ಇಬ್ಬರ ಮಧ್ಯೆ ಸುಮರು 12 ವರ್ಷಗಳ ಅಂತರ ಇದೆ.
ನಿರ್ದೇಶಕರಿಗೊಬ್ಬ ನಟಿ ಸಿಕ್ರು. ನಟಿಗೊಬ್ಬ ನಿರ್ದೇಶಕ ಸಿಕ್ರು ಎಂದು ನಿನ್ನೆ ಪೋಸ್ಟ್ ಹಂಚಿಕೊಂಡಿದ್ದರು ತರುಣ್. ಇಂದು ತರುಣ್ ಅವರು ಸೋನಾಲ್ ಅವರನ್ನು ಮದುವೆಯಾಗುತ್ತಿದ್ದೇನೆ ಎಂದು ವಿಡಿಯೊ ಮೂಲಕ ರಿವೀಲ್ ಮಾಡಿದ್ದಾರೆ. ನಮ್ಮ ಕಥೆಯ ಶುಭಾರಂಭಕ್ಕೆ ನಿಮ್ಮ ಆಶೀರ್ವಾದವಿರಲಿ. ಮದುವೆ ಆಗಸ್ಟ್ 11ಕ್ಕೆ ಎಂದು ತರುಣ್ ಸುಧೀರ್ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಆಗಸ್ಟ್ 10ರಂದು ರಿಸೆಪ್ಷನ್, ಆಗಸ್ಟ್ 11ರಂದು ಮದುವೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ಕೆಂಗೇರಿ ಬಳಿ ಇರುವ ಪೂರ್ಣಿಮಾ ಕನ್ವೆಷನ್ ಹಾಲ್‌ನಲ್ಲಿ ಮದುವೆ ಅದ್ಧೂರಿಯಾಗಿ ನಡೆಯಲಿದೆ.
ಇದನ್ನೂ ಓದಿ: Tharun Sudhir: ತರುಣ್-ಸೋನಲ್ ನಡುವಿನ ವಯಸ್ಸಿನ ಅಂತರ ಎಷ್ಟು?
ತರುಣ್ ಮದುವೆಗೆ ದರ್ಶನ್ ಬರ್ತಾರಾ?
ದರ್ಶನ್ ಜೈಲು ಪಾಲಾದ ನಂತರ ಮೊದಲ ಬಾರಿಗೆ ತರುಣ್ ಸುಧೀರ್ ಭೇಟಿ ಮಾಡಿದ್ದರು ತರುಣ್ ಸುಧೀರ್ ಲವ್ ಸ್ಟೋರಿ ಟ್ರ್ಯಾಕ್‌ಗೆ ತಂದಿದ್ದೆ ದರ್ಶನ್. ತರುಣ್ ಹಾಗೂ ನಟಿ ಸೋನಲ್ ಮದುವೆಗೆ ದರ್ಶನ್ ಮುದ್ರೆ ಒತ್ತಿದ್ದರು. ದರ್ಶನ್ ಇಲ್ಲದೆ ಮದುವೆಯನ್ನು ಮುಂದಕ್ಕೆ ಹಾಕಲು ತರುಣ್ ಸಜ್ಜಾಗಿದ್ದರು ಎನ್ನಲಾಗಿತ್ತು. ಹಿರಿಯರ ಸಲಹೆ ನಂತರ ತರುಣ್ ಮುದುವೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ನಟ ಮಾಹಿತಿ ನೀಡಿದ್ದಾಗಿದೆ. ʻʻʻದರ್ಶನ್ ಅವರಿಗೆ ಸ್ವಲ್ಪ ಹುಷಾರಿಲ್ಲ. ರಿಕವರ್ ಆಗುತ್ತ ಇದ್ದಾರೆ. ನನ್ನ ನೋಡಿದಾಗ ಯಾವ ಸ್ಮೈಲ್ ಅಲ್ಲಿ ನೋಡುತ್ತಿದ್ದು ಅದೇ ನಗುವಿನಲ್ಲಿ ಇಂದು ನೋಡಿದರು. ಅವರಗಿಂತ ನಾವೇ ವೀಕ್ ಆಗಿದ್ದೇವೆ. ನನ್ನ ಮದುವೆ ಬಗ್ಗೆ ದರ್ಶನ್ ಅವರಿಗೆ ಮೊದಲೇ ಗೊತ್ತಿತ್ತು. ಈ ವಿಚಾರದಲ್ಲಿ ನನಗೆ ಮೊದಲಿನಿಂದಲೂ ತೊಳಲಾಟ ಇತ್ತು. ಯಾವುದೇ ಕಾರಣಕ್ಕೂ ಮದುವೆ ದಿನಾಂಕ ಬದಲಾಯಿಸಬೇಡ ಅಂತ ಅವರು ಹೇಳಿದ್ದಾರೆ. ನಾನು ಬಂದೇ ಬರ್ತೀನಿ ಎನ್ನುವ ನಂಬಿಕೆ ಅವರಲ್ಲಿ ಇದೆ. ಅವರು ಏನು ತಪ್ಪು ಮಾಡಿಲ್ಲ ಎನ್ನುವ ನಂಬಿಕೆ ನಮಗೂ ಇದೆʼʼಎಂದಿದ್ದರು.
ರಾಬರ್ಟ್’ ಚಿತ್ರದಲ್ಲಿ ಸೋನಲ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಶೂಟಿಂಗ್ ಸಮಯದಲ್ಲೇ ತರುಣ್- ಸೋನಲ್ ನಡುವೆ ಪ್ರೀತಿ ಹುಟ್ಟಿತ್ತು ಎಂದು ಹೇಳಲಾಗುತ್ತಿದೆ. ಇನ್ನು ದರ್ಶನ್ ಕೂಡ ಆಗಾಗ ತರುಣ್‌ಗೆ ಮದುವೆ ಮಾಡಿಸಬೇಕು ಎನ್ನುತ್ತಿದ್ದರಂತೆ. ಹಾಗಾಗಿ ಶೂಟಿಂಗ್ ಸೆಟ್‌ನಲ್ಲಿ ತರುಣ್- ಸೋನಲ್ ಇಬ್ಬರನ್ನು ತಮಾಷೆಯಾಗಿ ರೇಗಿಸುತ್ತಿದ್ದರು, ಇದೇ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿರಬಹುದು ಎನ್ನಲಾಗಿದೆ.