ಬೆಂಗಳೂರು: ಕನ್ನಡ ಸಿನಿಮಾರಂಗದ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ (Tharun Sudhir) ಹಾಗೂ ಸೋನಾಲ್ ವಿವಾಹಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಮದುವೆಗೂ ಮುನ್ನ ಫ್ಯಾಮಿಲಿ ಜೊತೆ ಸೋನಾಲ್ ಬ್ಯಾಚುಲರೇಟ್ ಪಾರ್ಟಿ ಮಾಡಿಕೊಂಡಿದ್ದಾರೆ. ಇದೀಗ ತರುಣ್ ಅವರನ್ನು ಮುದ್ದಾಗಿ ಏನಂದು ಕರೆಯುತ್ತೀರಾ? ಎನ್ನುವ ಪ್ರಶ್ನೆ ಸೋನಲ್‌ಗೆ ಎದುರಾದಾಗ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸೋನಲ್ ಮಂಥೆರೋ ಸಹೋದರಿ ಹಾಗೂ ಅಮ್ಮ ಈ ಒಂದು ಬ್ಯಾಚುಲರ್ ಪಾರ್ಟಿ ಅರೇಂಜ್ ಮಾಡಿದ್ದಾರೆ. ಮಗಳ ಆಸೆಯನ್ನ ಗಮನದಲ್ಲಿಟ್ಟುಕೊಂಡೇ ಈ ಒಂದು ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಸೋನಲ್‌ಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಕೊಟ್ಟಿದ್ದಾರೆ. ಈ ಮೂಲಕ ಇಡೀ ಫ್ಯಾಮಿಲಿ ಈ ಪಾರ್ಟಿಯಲ್ಲಿ ಎಂಜಾಯ್ ಮಾಡಿದೆ. ತರುಣ್ ಅವರನ್ನು ಮುದ್ದಾಗಿ ಏನಂದು ಕರೆಯುತ್ತೀರಾ? ಎನ್ನುವ ಪ್ರಶ್ನೆ ಸೋನಲ್‌ಗೆ ಎದುರಾದಾಗ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ತರುಣ್, ಅದು ನಮ್ಮ ಪರ್ಸನಲ್. ಅದನ್ನೆಲ್ಲಾ ಹೇಳೋಕೆ ಆಗೊಲ್ಲ ಎಂದು ನಕ್ಕಿದ್ದಾರೆ. ಆದರೆ ನನ್ನನ್ನು ಬಹಳ ವಿಭಿನ್ನವಾಗಿ ಹಲೋ, ಹಲೋ ಕರೆಯುತ್ತಾರೆ ಎಂದು ಇಬ್ಬರು ನಕ್ಕಿದ್ದರು. ಇನ್ನು ಸೋನಲ್ ಕೂಡ ತರುಣ್ ಬಗ್ಗೆ ಈ ರೀತಿ ಹೇಳಿಕೊಂಡಿದ್ದರು. ʻʻನಮ್ಮಿಬ್ಬರ ನಡುವೆ ಟಿಪಿಕಲ್ ಸ್ಟೈಲ್ ಪ್ರಪೋಸ್ ಎನ್ನುವುದು ಆಗಲಿಲ್ಲ. ಪ್ರಪೋಸ್ ಎನ್ನುವುದಕ್ಕಿಂತ ಒಬ್ಬರನ್ನು ಒಬ್ಬರು ಹೆಚ್ಚು ಅರ್ಥ ಮಾಡಿಕೊಂಡಿದ್ದೇವೆʼʼ ಎಂದು ಇಬ್ಬರು ಹೇಳಿದ್ದಾರೆ. ಸೋನಲ್ ಮಾತನಾಡಿ “ತರುಣ್ ಜಂಟಲ್‌ಮನ್. ಒಂದು ಹುಡುಗಿಗೆ ತಾನು ಮದುವೆ ಆಗುವ ಹುಡುಗ ಹೇಗೆಲ್ಲಾ ಇರಬೇಕು ಎನ್ನುವ ಆಸೆ, ಕಲ್ಪನೆ ಇರುತ್ತದೆ. ತರುಣ್‌ಗೆ ಆ ಎಲ್ಲಾ ಗುಣಗಳು ಇವೆ. ತರುಣ್‌ಗೆ ಈಗೊ ಇಲ್ಲ. ಬಹಳ ಸಾಧು, ಹಂಬಲ್. ನಾನು ಸ್ವಲ್ಪ ಯೋಚಿಸುವುದು ಕಮ್ಮಿ. ನನಗೆ ಈ ರೀತಿ ಗೈಡ್ ಮಾಡುವವರೇ ಬೇಕು” ಎಂದಿದ್ದಾರೆ.
ಈ ಜೋಡಿ ಇಡೀ ಚಿತ್ರರಂಗ ಹಾಗೂ ಸ್ನೇಹಿತರು ಮತ್ತು ಸಂಬಂಧಿಕರಿಗೆ ತಮ್ಮ ವಿವಾಹದ ಇನ್ವಿಟೇಷನ್ ಕೊಟ್ಟು ತಮ್ಮ ಮದುವೆಗೆ ಆಹ್ವಾನ ಮಾಡಲು ಶುರು ಮಾಡಿದ್ದಾರೆ. ಆಗಸ್ಟ್ 10ರಂದು ಆರತಕ್ಷತೆ ಕಾರ್ಯಕ್ರಮ ನಡೆದರೆ ಆಗಸ್ಟ್ 11ರಂದು ವಿವಾಹ ಕಾರ್ಯಕ್ರಮ ನೆರವೇರುತ್ತಿದೆ.
ಇದನ್ನೂ ಓದಿ: Tharun Sudhir: ಸುಧೀರ್-ಸೋನಲ್ ವಿವಾಹ; ಲವ್ ಸ್ಟೋರಿ ರಿವೀಲ್ ಮಾಡಿದ ಸ್ಯಾಂಡಲ್ವುಡ್ ಜೋಡಿ!
ತರುಣ್ ನೀಡುತ್ತಿರುವ ಈ ಇನ್ವಿಟೇಷನ್ ನಲ್ಲಿ ಮದುವೆ ಪತ್ರಿಕೆ, ಒಂದು ಖಾಲಿ ಪುಸ್ತಕ ಅದರಲ್ಲಿ ಬರೆಯೋದಕ್ಕೆ ಎರಡು ಪೆನ್ಸಿಲ್ ಹಾಗೂ ಎರಡು ಪೆನ್ ಮತ್ತು ಒಂದು ಸೀಡ್ ಬಾಲ್ ಇವೆ. ವಿಶೇಷ ಅಂದರೆ ಮದುವೆ ಮುಗಿದ ನಂತರ ಪತ್ರಿಕೆ ಏನ್ ಮಾಡೋದು ಅಂತ ಯೋಚನೆ ಮಾಡೋ ಹಾಗಿಲ್ಲ, ಯಾಕಂದ್ರೆ ಸೋನಾಲ್ ಮತ್ತು ತರುಣ್ ಮದ್ವೆ ನಂತರ ಪತ್ರಿಕಯನ್ನ ಒಂದು ಮಣ್ಣಿನ ಪಾಟ್‌ನಲ್ಲಿ ಹಾಕಿದ್ದರೆ ಅದು ಮಣ್ಣಿನಲ್ಲಿ ಬೆರೆದು ಗಿಡ ಬೆಳೆಯುತ್ತೆ. ಅದಷ್ಟೇ ಅಲ್ಲ ಖಾಲಿ ಪುಸ್ತಕದಲ್ಲಿ ಬರೆದು ಹಾಳೆ ಖಾಲಿ ಆದ ನಂತರ ಅದು ಮಣ್ಣು ಸೇರಿದ್ದರೆ ಅದ್ರಿಂದಲೂ ಹೂವಿನ ಗಿಡ ಬೆಳೆಯುತ್ತೆ. ಇನ್ನು ಪೆನ್ ಮತ್ತು ಪೆನ್ಸಿಲ್ ಬೆರೆದು ಖಾಲಿ ಆದ್ರೆ ಅದನ್ನು ಮಣ್ಣಿಗೆ ಹಾಕಿದ್ರೆ ಚಂದದ ಹೂವಿನ ಹಾಗೂ ತರಕಾರಿ ಗಿಡ ಬೆಳೆಯುತ್ತೆ. ಹೀಗೆ ತಮ್ಮ ವಿವಾಹದ ಆಹ್ವಾನ ಪತ್ರಿಕೆ ಸಖತ್ ಸ್ಪೆಷಲ್ ಮತ್ತು ಪರಿಸರ ಸ್ನೇಹಿ ಆಗಿರಲಿ ಎಂದು ತರುಣ್ ಈ ರೀತಿ ಪ್ಲಾನ್ ಮಾಡಿದ್ದಾರೆ.